Belagavi News In Kannada | News Belgaum

‘ಏಡ್ಸ್ ರೋಗದಿಂದ ದೂರವಿರಿ, ರೋಗಿಯನ್ನಲ್ಲ’: ಎಂದು ಜಾಗೃತಿ ನಿಡಿದ ಎ. ವ್ಹಿ. ಪಾಟೀಲ

ಗೋಕಾಕ : ಇಲ್ಲಿನ ಜೆ ಎಸ್ಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ,  ರಾಷ್ಟ್ರೀಯ ಸೇವಾ ಯೋಜನೆ ಘಟಕ  ಹಾಗೂ ರಾಣಿ ಚನ್ನಮ್ಮ  ವಿಶ್ವವಿದ್ಯಾಲಯ ಎನ್.ಎಸ್.ಎಸ್. ಕೋಶದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಏಡ್ಸ್ ಜಾಗೃತಿ ಜಾಥಾಗೆ ಚಾಲನೆ ನೀಡಲಾಯಿತು.

 

ಸ.ಹಿ.ಪ್ರಾ. ಶಾಲೆಯಿಂದ ಪ್ರಾರಂಭವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು.

ಈ ವೇಳೆ ಆಂಗ್ಲಭಾಷೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಎ. ವ್ಹಿ. ಪಾಟೀಲ ಮಾತನಾಡಿ, ‘ಏಡ್ಸ್ ರೋಗದಿಂದ ದೂರವಿರಿ, ರೋಗಿಯನ್ನಲ್ಲ’  ‘ಏಡ್ಸ್ ಲಕ್ಷಣಗಳು ಕಂಡಾಕ್ಷಣ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಸಮಾಜದಲ್ಲಿ  ಏಡ್ಸ್ ಬಗ್ಗೆ ಕೆಟ್ಟದಾಗಿ ವಂದತಿಗಳಿಗೆ ಇವುಗಳಿಗೆ ಕಿಡಿಗೊಡಬೇಡಿ ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ಏಡ್ಸ್ ಬಗ್ಗೆ ಜಾಗೃತಿ ಹಾಗೂ ಏಡ್ಸ್ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ಕ್ರಮದ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮದವರಿಗೆ ತಿಳಿ ಹೇಳಿದರು . ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿರುವ ಈ ಏಡ್ಸ್ ರೋಗವನ್ನು ಬರದ ಹಾಗೇ ತಡೆಗಟ್ಟುವುದನ್ನು ಜನರಲ್ಲಿ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ  ಆರ್. ಜಿ. ಬಸ್ಸಾಪೂರೆ, ಜೆ.ಎಸ್. ಎಸ್. ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಬಿ. ಹೊಸಮನಿ, ಇಂಗ್ಲೀಷ ವಿಷಯ ಸಹಾಯಕ ಪ್ರಾಧ್ಯಾಪಕ   ಎ. ಕೆ. ಕಿಳ್ಳಿಕೇತ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಪೋಲಾಶಿ ಮತ್ತು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಎನ್. ಎಲ್. ತೇರದಾಳ ಹಾಗೂ ಶ್ರೀ ಎಮ್. ವ್ಹಿ. ಗೊರಗುದ್ದಿ ,  ಡಾ. ಆರ್. ಜಿ. ಬಸ್ಸಾಪುರೆ,  ಬಸಗೌಡ ಈಶ್ವರೆಪ್ಪಗೋಳ , ಬಸಗೌಡ ಹೊಳೆಯಾಚೆ, ಅಕ್ಕತಂಗೇರಹಾಳ,  ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವ್ಹಿ. ಆರ್. ಸಿಂಧೆ , ವಿಶಾಲ ಸನದಿ, ಸೌಜನ್ಯ ಮೆಶೆನ್ನಗೋಳ, ನೇತ್ರಾವತಿ ಎಸ್. ಅಂತರಗಟ್ಟಿನಿರೂಪಿಸಿದಳು./////