Belagavi News In Kannada | News Belgaum

ಗ್ರಾಪಂ ಮಟ್ಟಕ್ಕೆ ಹೆಚ್ಚಿನ ಅನುದಾನ ತರಲು ಪ್ರಯತ್ನ: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಬಿಜೆಪಿಯ 13 ಜನ ಶಾಸಕರು, 3 ಜನ ಸಂಸದರಿದ್ದರೂ ಪ್ರಭಲ ಪೈಪೋಟಿ ಒಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಅಂತರದ ಗೆಲುವು ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ ಅವರು, ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸವಾಲುಗಳಿವೆ. ಮೊದಲಿಗೇ ಸ್ಥಳೀಯ, ಗ್ರಾಪಂ, ಜಿಪಂ ಸದಸ್ಯರ ಗೌರವ ಮೊತ್ತ ಹೆಚ್ಚಿಸಲು ಹೋರಾಟ ಮಾಡುವೆ. ಸರಕಾರದಿಂದ ಗ್ರಾಪಂ ಮಟ್ಟಕ್ಕೆ ಹೆಚ್ಚಿನ ಅನುದಾನ ತರಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ 18 ಮತಕ್ಷೇತ್ರಗಳಿವೆ. ನಮಗೆ ವರ್ಷಕ್ಕೆ ನೀಡುವ ಶಾಸಕರ ನಿಧಿ 2 ಕೋಟಿಯಿದೆ. ಇಷ್ಟು ಹಣ ಸಾಕಾಗಲ್ಲ. ಕನಿಷ್ಠ4 ಕೋಟಿಯಾದರೂ ಅನುದಾನ ನೀಡುವಂತೆ ಸರಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌  ನೇತೃತ್ವದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ನಾವು ಯಾರನ್ನ ಸೋಲಿಸಲು ಚುನಾವಣೆ ಗೆ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್ ಗೆಲ್ಲಲು ಚುನಾವಣೆ ಸ್ಪರ್ಧೆ ಮಾಡಿದ್ದೇವು. ಈ ಹಿಂದನ ಪರಿಷತ್ ಸದಸ್ಯರ ಬಗ್ಗೆ ಆಕ್ರೋಶ ಇತ್ತು. ಅದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಗ್ರಾಪಂಗಳಿಗೆ ಹಿಂದಿನ ಈ ಹಿಂದಿನ ಪರಿಷತ್ ಸದಸ್ಯರು ಬರುತ್ತಿರಲಿಲ್ಲ ಎಂಬ ಕಳಂಕವಿತ್ತು. ಆದರೆ ನಾನು ಗ್ರಾಪಂ ಮಟ್ಟದಲ್ಲಿ ಹೋಗಿ ಕೆಲಸ ಮಾಡುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ಪ್ರಧಾನ ಕಾರ್ಯದರ್ಶಿ ರಾಜಾಸಲೀಂ ಮೋಕಾಶಿ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.//////