Belagavi News In Kannada | News Belgaum

ಬಸವಲಿಂಗಯ್ಯ ಹಿರೇಮಠ ಮತ್ತುಚಂಪಾಅವರ ಶೃದ್ಧಾಂಜಲಿ

 

ನಮ್ಮನ್ನಗಲಿದಹಿರಿಯರಂಗಕಲಾವಿದ ಬಸವಲಿಂಗಯ್ಯ ಹಿರೇಮಠಮತ್ತು ಸಾಹಿತಿಚಂದ್ರಶೇಖರ ಪಾಟೀಲರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನುದಿನಾಂಕ :10-01-2022ರಂದುರಾಣಿಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾಅಧ್ಯಯನ ಸಂಸ್ಥೆಯಲ್ಲಿಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಗಜಾನನ ನಾಯ್ಕಅವರುಅಗಲಿದ ಸಾಹಿತಿಗಳ ಕುರಿತು ಮಾತನಾಡಿದರು.ರಂಗಕಲಾವಿದರಾದಬಸವಲಿಂಗಯ್ಯನವರು ಹಿರೇಮಠ ರಂಗಶಿಕ್ಷಣವನ್ನು ನಿನಾಸಂನಲ್ಲಿ ಪಡೆದು, ಉತ್ತರಕರ್ನಾಟಕದಗಮನಾರ್ಹಜಾನಪದರಂಗಕಲಾವಿದರಾಗಿದ್ದರು. ಸುಗಮ ಸಂಗೀತ, ರಂಗಗೀತೆಗಳನ್ನು ಮತ್ತುಕುಲಗೋಡದ ಅಪರಾಳ ತಮ್ಮಣ್ಣ, ಶ್ರೀಕೃಷ್ಣ ಪಾರಿಜಾತ, ಹನ್ನೆರಡು ತಾಸಿನ ನಾಟಕವನ್ನು ಮೂರು ತಾಸಿಗೆ ತಂದುಜನಮನ್ನಣೆಯನ್ನು ಪಡೆದಇವರುಕಂಚಿನಕಂಠದಕಲಾವಿದರಾಗಿದ್ದರು. ಹಲವಾರು ಪ್ರಶಸ್ತಿಯನ್ನು ಪಡೆದಿದ್ದ ಶ್ರೀಯುತರ ಅಗಲಿಕೆಯಿಂದಜನಪದ ಲೋಕಕ್ಕೆತುಂಬಲಾರದ ನಷ್ಟವಾಗಿದೆ.
ಚಂದ್ರಶೇಖರ ಪಾಟೀಲಅವರು ಹಿರಿಯ ಬಂಡಾಯ ಸಾಹಿತಿಗಳು, ಕವಿ, ನಾಟಕಕಾರರುಇವರುಕನ್ನಡ ನಾಡು, ನುಡಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.ಗೋಕಾಕ ಚಳುವಳಿ, ತುರ್ತುಪರಿಸ್ಥಿಯ ಸಂದರ್ಭದಲ್ಲಿ 26 ರಾತ್ರಿ 25 ದಿನ ಜೈಲಿನಲ್ಲಿದ್ದರು.ಕನ್ನಡಅಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾಗಿ ಹಲವಾರುಕಾರ್ಯಕ್ರಮವನ್ನು ನಿಯೋಜಿಸಿದರು.ಇವರ ಸೇವೆಅನುಪಮವಾಗಿದೆ, ವಿದ್ಯಾರ್ಥಿಗಳು ಇವರಸಾಹಿತ್ಯ ಕೃತಿಗಳನ್ನು ಓದುವುದೇ ನಿಜವಾದ ಶೃದ್ಧಾಂಜಲಿ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರೊ.ಎಸ್. ಎಂ. ಗಂಗಾಧರಯ್ಯಅವರುಈ ಇಬ್ಬರುಅತ್ಯಂತ ಬಡಕುಟುಂಬದಿಂದ ಬಂದವರುಜನಪದ ಸಾಂಸ್ಕøತಿ ಲೋಕಇನ್ನೂಇವರಿಂದಜನಪದ ರಂಗಗೀತೆಗಳು ಮತ್ತುಜನಪದ ರಾಗಗಳ ಬಗ್ಗೆರೇಕಾರ್ಡ್‍ಆಗಬೇಕಾಗಿತ್ತು, ಚಂಪಾಅವರುಇಂಗ್ಲೀಷ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿಇಂಗ್ಲೀಷನಿಂದ ಹಲವಾರು ಕೃತಿಗಳನ್ನು ಕನ್ನಡಕ್ಕೆಅನುವಾದ ಮಾಡಿದರು.ಭಾಷಾ ವಿಜ್ಞಾನದಕುರಿತಾಗಿ ಅಧ್ಯಯನಗಳನ್ನು ಮಾಡಿದರು.ಸಂಕ್ರಮಣ ಪತ್ರಿಕೆಯನ್ನುಕೊನೆಯವೆರಗೂ ಮುಂದುವರಿಸಿಕೊಂಡು ಬಂದರು.ಈ ಕಾರ್ಯಕ್ರಮದಲ್ಲಿಡಾ.ಮಹೇಶಗಾಜಪ್ಪನವರ, ಡಾ.ಶೋಭಾ ನಾಯಕ ಹಾಗೂಡಾ.ಅಶೋಕ ಮುಧೋಳ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿಠ್ಠಲ ಹರಿಜನ ನಿರೂಪಿಸಿದರು.ಕಾರ್ಯಕ್ರಮದಲ್ಲಿಸ್ನಾತೋತ್ತರವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.