Belagavi News In Kannada | News Belgaum

ವಿಶೇಷ ವಾರ್ಷಿಕ ಪ್ರಶಸ್ತಿ

ಹುಣಸಗಿ:ಸಮೀಪದ ಕೊಡೇಕಲ್ ಗ್ರಾಮದ ವಿಜಯ ಕರ್ನಾಟಕ ವರದಿಗಾರ ಶಿವಶರಣ ಕಟ್ಟಿಮನಿ ಅವರಿಗೆ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಕಲಬುರ್ಗಿಯಲ್ಲಿ ನಡೆದ 36 ನೇ ಪತ್ರಕರ್ತರ ಸಮ್ಮೇಳನದಲ್ಲಿ ಪಡೆದುಕೊಂಡಿರುತ್ತಾರೆ.

 

ಈ ಪ್ರಯುಕ್ತ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹುಣಸಗಿ ತಾಲೂಕಿನ ಎಲ್ಲ ಪತ್ರಕರ್ತರು ಸೇರಿ ಗೌರವಿಸಿ ಅಭಿನಂದಿಸಿದರು. ಈ ಸಂದರ್ಭ ಕರ್ನಾಟಕ ಜನಪದ ಅಕ್ಯಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಸೇರಿದಂತೆ ತಾಲೂಕಿನ ಪತ್ರಕರ್ತರು ಇದ್ದರು.