Belagavi News In Kannada | News Belgaum

ಟೈಲರಿಂಗ್ ಕೌಶಲ್ಯಾಭಿವೃದ್ದಿ ತರಬೇತಿ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮ

 

ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದ ಕಲ್ಯಾಣ ಮಂಟಪದಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಂಘದ ಸದಸ್ಯರಿಗೆ ಕೌಶಲ್ಯಾಭಿವೃದ್ದಿ ತರಬೇತಿ ಯೋಜನೆ ಅಡಿಯಲ್ಲಿ ಜ್ಞಾನವಿಕಾಸ ತರಬೇತಿ ಸಂಸ್ಥೆ ಧಾರವಾಡ ಇದರ ಸಹಯೋಗದೊಂದಿಗೆ 30 ದಿನಗಳ ಪ್ರಾಥಮಿಕ ಟೈಲರಿಂಗ್ ತರಬೇತಿಯನ್ನು ಅಗಸಗದಲ್ಲಿ ಹಮ್ಮಿಕೊಳ್ಳಲಾಗಿತ್ತು

ಈ ತರಬೇತಿ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣೆಯನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿರವರು ಸ್ವಾಲಂಬಿ ಜಿವನಕ್ಕೆ ಸ್ವ ಉದ್ಯೋಗ ಬಹಳ ಮಹತ್ವವಾಗಿದ್ದು ಪ್ರತಿಯೊಬ್ಬರು ಸ್ವ ಉದ್ಯೋಗದ ಬಗ್ಗೆ ಉತ್ತಮ ತರಬೇತಿಯನ್ನು ಪಡೆದುಕೊಂಡು ಉದ್ಯೋಗವಾಗಿ ಮುಂದುವರೆಸಿಕೊಂಡು ಹೋಗುವಂತೆ ಮಾಹಿತಿ ನೀಡಿ ಪ್ರಮಾಣ ಪತ್ರ ವಿತರಿಸಿದರು,

ಮುಖ್ಯ ಅತಿಥಿಗಳಾಗಿ ಆಗಮಿಸಿ ಜ್ಞಾನವಿಕಾಸ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಸಂತೋμï ರಾವ್ ಇವರು ಮಹಿಳೆಯರು ಸಬಲೀಕರಣಗೊಳ್ಳಬೇಕಾದರೆ ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಬಲರಾದರೆ ಸಾಲದು ಜೊತೆಗೆ ಸ್ವ ಉದ್ಯೋಗ ಕೈಗೊಂಡು ಆರ್ಥಿಕ ಕ್ಷೇತ್ರದಲ್ಲಿ ಸಬಲಗೊಂಡು ತನ್ನ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಮಟ್ಟಕ್ಕೆ ಮಹಿಳೆಯರು ಹಾಗೂ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಲಾಯಿತು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚನ್ನಮ್ಮಾ ತೆರಮಾಳ,ಉಪಾಧ್ಯಕ್ಷರಾದ ಬೈರು ಕಂಗ್ರಾಳಕರ, ತಾಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ, ಗ್ರಾಮ ಪಂಚಾಯತ್ ಸದಸ್ಯರಾದ ಅಮೃತ ಮುದ್ಯನವರ, ತರಬೇತಿ ಸಂಸ್ಥೆಯ ಟೈಲರಿಂಗ್ ಶಿಕ್ಷಕಿ ಜ್ಯೋತಿ ಶಿಗ್ಗಾವಿ, ಮೇಲ್ವಿಚಾರಕರಾದ ವೈಶಾಲಿ, ಸಮನ್ವಯಧಿಕಾರಿ ಸುರೇಖಾ ವಲಯದ ಸೇವಾಪ್ರತಿನಿಧಿಗಳು ಟೈಲರಿಂಗ್ ತರಬೇತಿ ಪಡೆದ ಅಭ್ಯರ್ಥಿಗಳು ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು