Belagavi News In Kannada | News Belgaum

ಮೂರನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ

ಕನಕಪುರ: ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಇಂದಿನ ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ರಾಜ್ಯ ಕಾಂಗ್ರೆಸ್‌ ನಾಯಕರು, ಮಾಜಿ ಸಚಿವ ವೀರ ಕುಮಾರ ಪಾಟೀಲ, ಕಾಂಗ್ರೆಸ್‌ ಮುಖಂಡ ಪಂಚನಗೌಡ, ಮಾಜಿ ಸಂಸದ ರಘು ಮೊರತಿ‌, ಚಂದ್ರಪ್ಪ, ‌ಪ್ರಕಾಶ ಹಾದಿಮನಿ, ರವಿ ಮನವಳ್ಳಿ, ಶಾನುಲ್‌ ಸೇರಿದಂತೆ ಬೆಳಗಾವಿ ಜಿಲ್ಲೆಯ ಅನೇಕ ಮುಖಂಡರು ಇದ್ದರು.

ಇಂದು ಬೆಳಗ್ಗೆ ಕನಕಪುರದಿಂದ ಆರಂಭವಾದ ಪಾದಯಾತ್ರೆ  ಗಾಣಾಳು ಗ್ರಾಮ ತಲುಪಿದ್ದು, ರಾತ್ರಿ ಚಿಕ್ಕೇನಹಳ್ಳಿಯಲ್ಲಿ ಕೈ ನಾಯಕರು ಇಂದಿನ ಯಾತ್ರೆ ಮುಗಿಸಿ ವಿಶ್ರಾಂತಿ ಪಡೆಯಲಿದ್ದಾರೆ. ನಾಳೆ ರಾಮನಗರ ಪ್ರವೇಶಿಸಲಿದ್ದಾರೆ./////