Belagavi News In Kannada | News Belgaum

ನ್ಯಾಯಾಧೀಶರು ಬಂದಾಗ ಬಾಗಿಲು ಹಾಕಿದ್ದ ಠಾಣೆ:‌ ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು

ಚಾಮರಾಜನಗರ: ನ್ಯಾಯಾಧೀಶರು ಚಾಮರಾಜನಗರದ ಸಿಇಎನ್ ಠಾಣೆ ಭೇಟಿಗೆ ಬಂದಿದ್ದ ವೇಳೆ ಬಾಗಿಲು ಮುಚ್ಚಿದ್ದರಿಂದ ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು ಮಾಡಲಾಗಿದೆ.
ಸಿಇಎನ್ (ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ತಡೆ) ಪೊಲೀಸ್​ ಇನ್ಸ್​ಪೆಕ್ಟರ್​​ ನಂಜಪ್ಪ ಅಮಾನತುಗೊಂಡವರು.
ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ಸಿಇಎನ್ ಪೊಲೀಸ್ ಠಾಣೆಗೆ ಕಳೆದ 3ರಂದು ದಿಢೀರ್ ಭೇಟಿ ನೀಡಿದ್ದರು. ಆ ವೇಳೆ ಠಾಣೆಯಲ್ಲಿ ಯಾರೂ ಇಲ್ಲದೇ, ಜೊತೆಗೆ ಬಾಗಿಲು ಹಾಕಿದ್ದರಿಂದ ‘ಈ ರೀತಿ ಠಾಣೆಗೆ ಬಾಗಿಲು ಹಾಕಿಕೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ, ಠಾಣೆಯೇ ಬಾಗಿಲು ಹಾಕಿಕೊಂಡಿದ್ದರೆ ದೂರು ಕೊಡಲು ಬರುವವರು ಏನು ಮಾಡಬೇಕೆಂದು’ ಎಸ್​ಪಿಗೆ ತಮ್ಮ ಭೇಟಿಯ ಬಗ್ಗೆ ವರದಿ ಕೊಟ್ಟಿದ್ದರು.
ನ್ಯಾಯಾಧೀಶರ ವರದಿ ಗಮನಿಸಿ ಕರ್ತವ್ಯಲೋಪದ ಆಧಾರದಲ್ಲಿ ಮಂಗಳವಾರ ಇನ್ಸ್​ಪೆಕ್ಟರ್ ನಂಜಪ್ಪ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ.//////