Belagavi News In Kannada | News Belgaum

ದಲಿತ ಸಾಮಾಜಿಕ ಕಾರ್ಯಕರ್ತನ ಮೇಲೆ 307 ಕೇಸ್ ಗುಂಡಾ ವರ್ತನೆ ತೊರಿದ ಪಿಎಸ್ಐ ಪ್ರಕಾಶ ರಾಠೊಡ್

ಅಂಕಲಗಿ: ದಲಿತ ಸಾಮಾಜಿಕ ಕಾರ್ಯಕರ್ತನ ಮೇಲೆ 307 ಕೇಸ್ ಗುಂಡಾ ವರ್ತನೆ ತೊರಿದ ಪಿಎಸ್ಐ ಪ್ರಕಾಶ ರಾಠೊಡ್ ಹೌದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಠಾಣೆಯ ಪಿಎಸ್ಐ ಪ್ರಕಾಶ ರಾಠೊಡ್ ಮೇಲೆ ಪದೆ ಪದೆ ಇಂತಹ ದೂರುಗಳು ಕೇಳಿ ಬಂದರು ಮೇಲಾಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ಒಂದೊ ಎರಡೊ ಸಾಕಷ್ಟು ಪ್ರಕರಣಗಳಲ್ಲಿ ನೊಂದವರಿಗೆ ಅನ್ಯಾಯ ಮಾಡಿದ ಪಿಎಸ್ಐ ನನ್ನ ಕೇಳೊರು ಈ ರಾಜ್ಯದಲ್ಲಿಯೇ ಇಲ್ಲವೆ ಎಂಬಂತೆ ಕಂಡುಬರುತ್ತಿದೆ. ಬೇಲಿಯೆ ಎದ್ದು ಹೊಲ ಮೆಯ್ದ ಹಾಗೆ ಆದರೆ ಇನ್ನೂ ಜನಸಾಮಾನ್ಯರ ಗತಿ ಅದೋಗತಿ.

ಠಾಣೆಯಲ್ಲಿ ಸರ್ವಾಧಿಕಾರ ದರ್ಪ ತೊರುವದು ನಾಗರಿಕರಿಗೆ ಹಿರಿಯರಿಗೆ ಗೌರವ ಕೊಡದೆ ಏಕವಚನದಲ್ಲಿ ಮಾತನಾಡಿಸುವದು.ಒಂದು ಗಾದೆ ಇದೆ ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಎಂಬಂತೆ ನ್ಯಾಯ ಕೇಳಲು ಬಂದ ಪಂಚರ್ ಮೇಲೆ ಎಪ್ ಐ ಆರ್ ಅಂಜಿಕೆ ಹಾಕುವ ಪಿಎಸ್ಐ ಇವರೆನು ಸಾಮಾಜಿಕ ಕಳಕಳಿಯ ಪೊಲಿಸ್ ಅಲ್ಲ ಸ್ವಾರ್ತಿಗಳು ದಿನ್ ಜಾಂದೆ ಪಗಾರ್ ಆಂದೆ ಯಾರಾದ್ರು ಹಾಳಾಗ ಹೊಗ್ಲಿ ನಮ್ಮ ಹವಾನೆ ಹಿಗೇ ಎಂದು ದುರ್ನಡತೆ.

ಈ ಹಿಂದೆ ಒಮ್ಮೆ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಅಕ್ರಮ ಮರಳು ದಂಧೆಕೊರರ ಬೆನ್ನೆಲುಬಾದ ಪಿಎಸ್ಐ ಪ್ರಕರಣ ದಾಖಲಿಸದೆ ಗಾಡಿ ಬಿಟ್ಟು ಕಳಿಸಿದ ಘಟನೆ ವರದಿ ಸಮೇತ ಪ್ರಕಟಪಡಿಸಿದ್ದೆವು.ಬರೆಯುವವರು ಬರೆಯುತ್ತಾರೆ ನಾವು ಮಾತ್ರ ನಮ್ಮ ಅಕ್ರಮಕ್ಕೆ ಬ್ರೆಕ್ ಹಾಕಲ್ಲ ಎಂಬಂತೆ ಮೇಲಾಧಿಕಾರಿಗಳು ಕಣ್ಣಿದ್ದು ಜಾಣ ಕುರುಡನಂತೆ ವರ್ತಿಸಿ ಯಾವುದೇ ಕ್ರಮ ಕೈಗೊಳಲಿಲ್ಲ.ಇನ್ನೂ ವಿಷಯಕ್ಕೆ ಬರೊಣ ಸುಜಿಲೇ ಹೊಗೊದನ್ನ ಕೊಡ್ಲಿಲೇ ತಗದ್ರು ಎಂಬಂತೆ ಸಣ್ಣ ಕೇಸ್ ಮುಚ್ಚಿ ಹಾಕಲು ಬಡವರ ಮೇಲೆ ಪೊಲಿಸ್ ಬ್ರಹ್ಮಾಸ್ರ್ತ ತೊರಿಸಿ ಮನಸಿಗೆ ಬಂದ ಸೆಕ್ಷನ್ ಹಾಕಿ ಅನ್ಯಾಯ ಮಾಡಿದ್ದಾನೆ ಈ ಘಟನಾವಳಿಯಲ್ಲಿ ಒಳಗಾದ ಮಹಿಳೆ ಮತ್ತು ಅಂಕಲಗಿ ಪೊಲೀಸ್ ಸಿಬ್ಬಂದಿಗಳಿಂದ ಕರೆಪ್ಪ ಅರ್ಜುನ್ ಗುಡೆನ್ನವರ್ ಕುಂದರಗಿ ಗ್ರಾಮದ ಕರೀಂಸಾಬಿ ಖಾನ್ ಸಾಬ್ ದೇಸಾಯಿ 06:12 2021 ರಂದು ಸಂಜೆ ಸುಮಾರು ಆರು ಗಂಟೆಗೆ ಕಲ್ಲಪ್ಪ ಪುಂಡಲಿಕ್ ಮಾದರ ಎಂಬ ಮನೆಗೆ ಭೂವಿವಾದ ವಿಷಯಗಳಿಗೆ ಸಂಬಂಧಿಸಿದಂತೆ ಕರೀಂಸಾಬ ಈತನು ಜೊತೆಗೆ ಬಿನ್ಡ್ರೆಸ್ ಮೇಲೆ ಇರುವ ಕದಂ ಎಂಬ ಪೊಲೀಸ್ ಅಧಿಕಾರಿಯನ್ನು ಕರೆದುಕೊಂಡುಬಂದು ಕಲ್ಲಪ್ಪ ಪುಂಡಲಿಕ್ ಮಾದರ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ಯಾರದಾರ ಮನೆಯಲ್ಲಿ ಎಂದು ಕೂಗುತ್ತಾ ಇರಬೇಕಾದರೆ ಮನೆಯಲ್ಲಿರುವ ಮಹಿಳೆ ಯಾರ್ ಸರ್ ಯಾಕ್ರಿ ಎಂದು ತಕ್ಷಣ ಅಕ್ರಮ ಪ್ರವೇಶ ಮಾಡಿ ಒಳಗೆ ಬರುವ ಕರೀಂಸಾಬಿ ಖಾನ್ ಸಾಬ್ ದೇಸಾಯಿ ನಿನ್ನ ಗಂಡ ಎಲ್ಲಿ ಅದಾನ ಹೊಲದ ಸಲುವಾಗಿ ಜಗಳ ಅದಕ್ಕಾಗಿ ಜೊತೆಯಲ್ಲಿರುವ ವ್ಯಕ್ತಿಯನ್ನು ತೋರಿಸಿ ಪೊಲಿಸರನ್ನ ಕರ್ಕೊಂಡು ಬಂದೆನ ನಿಮ್ಮ ಆಟ ಮುಗೀತು

ನಿಮ್ಮನ್ನು ಜೈಲಿಗೆ ಹಾಕಸ್ತಿನಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಹಾಗೂ ಜೊತೆಯಲ್ಲಿದ್ದ ಕದಮ್ ಎಂಬ ಪೊಲೀಸ್ ಸಿಬ್ಬಂದಿಯೂ ಸ್ಟೇಷನ್ ಗೆ ಬನ್ನಿ ಬರಬೇಕು ಅಂತ ಹೇಳಿದರು ಆದರೆ ನಿಮ್ಮ ಹೆಸರು ಏನಂತ ಕೇಳಿದೆ ಪೊಲಿಸನಿಗೆ ಕೆಳಿದ ಕೂಡಲೇ ಶ್ರೀ ಏನವ ನೀನು ಪೊಲೀಸರ ಹೆಸರು ಕೇಳುತ್ತೆ ಎಂದು ಗದರಿಸುತ್ತಾ ನಾನು ರಾಥೋಡ್ ಬಂದಂತ ಹೇಳು ನಿನ್ನ ಗಂಡ ಎಂದು ಎದುರು ಕರೀಂಸಾಬ್ ಮುಂದೆ ಅಕ್ರಮ ಪ್ರವೇಶ ಮಾಡಿ ತಪ್ಪು ಎಸಗಿದ ಕರೀಂಸಾಬಗೆ ಕುಮ್ಮಕ್ಕು ನೀಡಿದ ಪೊಲಿಸರು

ದುರುಪಯೋಗಪಡಿಸಿಕೊಂಡು ನಾನು ರಾಥೋಡ್ ಪಿಎಸ್ಐ ಎಂದು ಹೇಳಿ ಮೇಲಾಧಿಕಾರಿಗಳ ಹೆಸರು ದುರ್ಬಳಕೆ ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡು ತೀವ್ರಸ್ವರೂಪದ ಕರ್ತವ್ಯಲೋಪವೆಸಗಿದ ಪೊಲೀಸ್ ಅಧಿಕಾರಿ ಮೇಲೆ ಮತ್ತು ಈತನ ಮೇಲೆ ದೂರು ದಾಖಲು ಮಾಡಲು 07:12 2021ರ ಸುಮಾರು 11.30 ಗಂಟೆಗೆ ಅಂಕಲಗಿ ಪೊಲೀಸ್ ಠಾಣೆಗೆ ಪಿಎಸ್ಐ ಸಾಹೇಬರ ಹತ್ತಿರ ಹೋದಾಗ ಕರೆಪ್ಪ ಅರ್ಜುನ ಗುಡೆನ್ನವರ ಘಟನಾವಳಿ ಬಗ್ಗೆ ನನಗೆ ಬಂದ ಮಾಹಿತಿಯ ಪ್ರಕಾರ ಎಲ್ಲವನ್ನೂ ಕೂಲಂಕುಶವಾಗಿ ಪಿ ಎಸ್ ಐ ಸಾಹೇಬರ ಹತ್ತಿರ ಹೇಳಿ ನ್ಯಾಯ ಕೊಡಿಸಲು ವಿನಂತಿಸಿದ್ದೆ ಅಷ್ಟರಲ್ಲಿ ಅನ್ಯಾಯಕ್ಕೊಳಗಾದ ಮಹಿಳೆ ಗೌರವ ಕಲ್ಲಪ್ಪ ಮತ್ತು ಅವಳ ಗಂಡ ಸ್ಟೇಷನ್ಗೆ ಬಂದರೂ ನಾನು ಪಿಎಸ್ಐ ಸಾಹೇಬ್ರಿಗೆ ಬೇಟಿ ಮಾಡಿ ನಡೆದ ಘಟನೆಯ ಬಗ್ಗೆ ಮಹಿಳೆಯಿಂದ ಹೆಳಿಸಿದೆ . ಅದೇ ಸಂದರ್ಭಕ್ಕೆ ಕುಂದರಗಿ ಗ್ರಾಮದ ಕರೀಂ ಸಾಬ್ ಮತ್ತು ಇನ್ನೊಬ್ಬರು ಬಂದರೂ ಆಗ ಪಿಎಸ್ಐ ಸಾಹೇಬರು ಪೊಲೀಸ್ ಸಿಬ್ಬಂದಿ ಆದವರನ್ನು ವಿಚಾರಿಸಲಾಗಿ ಅವರ ಹೇಳಿಕೆ ನೀಡಿ ಕರೀಂಸಾಬರು ಜೊತೆಗೆ ಕರ್ಕೊಂಡು ಹೋಗಿ ಸರ್ ನಾನು ನಿಮ್ಮ ಹೆಸರು ತಗೊಂಡಿಲ್ಲ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಅಕ್ರಮ ಪ್ರವೇಶ ಮಾಡಿ ಅಪರಾಧವೆಸಗಿದ ಕರೆದವರಿಗೆ ಕುರ್ಚಿಯ ಮೇಲೆ ಕೂಡಲು ಹೇಳಿ ಅನ್ಯಾಯವಾದ ಮಹಿಳೆಗೆ ಮತ್ತು ಗಂಡನಾದ ಕಲ್ಲಪ್ಪನಿಗೆ ಇವರಿಗೆ ಎದುರು ಗಾರರ ಮುಂದೆ ನಿಲ್ಲಿಸಿ ಪಿಎಸ್ಐ ಸಾಹೇಬ ಅನುಚಿತ ಜಾತಿ ಎಂದ ತಕ್ಷಣ ಎಲ್ಲ ನಿಮ್ಮದೇ ನಡೆಯುತ್ತಾ ಅವರದು ಸರಿ ಅಂತ ಹೇಳಲ್ಲ ನಿಮ್ಮದು ಸರಿ ಅಂತ ಹೇಳಲ್ಲ ಎಂದು ನ್ಯಾಯ ಕೇಳಿದಾಗ ಸುಮ್ಮನೆ ಏರುಧಣಿಯಲ್ಲಿ ಎಲ್ಲರ ಮುಂದೆ ಅವಮಾನಿಸಿದರು.

ನೀವು ಒಂದು ಕಂಪ್ಲೇಂಟ್ ಕೊಟ್ಟರೆ ಬಡದೆರಿ ಅಂತ ಆಮೇಲೆ ಅವರು ಕೂಡ ನಿಮ್ಮ ಮೇಲೆ ಬಡದಿದ್ದೇವೆ ಎಂದು ಅವರು ಸುಮ್ಮನೆ ಕಂಪ್ಲೇಂಟ್ ಕೊಡುತ್ತಾರೆ ಹೀಗೆ ಎದುರು ಗಾರರ ಮುಂದೆ ಪ್ರತ್ಯೇಕ ಕುಮ್ಮಕ್ಕು ನೀಡಿದ ಪಿಎಸ್ಐ . ಅನ್ಯಾಯಕ್ಕೆ ಒಳಗಾದ ಮಹಿಳೆ ನೀಡಿದ ಪಿರ್ಯಾದಿ ಪ್ರತಿಯನ್ನು ಅವಮಾನ ಮಾಡುವ ರೀತಿಯಲ್ಲಿ ಟೇಬಲ್ ಮೇಲೆ ಎಸೆದರು ಮತ್ತು ಹೊರಗೆ ಕುಳಿತುಕೊಳ್ಳಿ ಪ್ರತಿಯನ್ನು ತೆಗೆದುಕೊಂಡುಹೋಗಿ ಎಂದು ನಮ್ಮನ್ನು ನಂಬಿಸಿ ಸುಮಾರು 11.30 ಇಂದು ಸಂಜೆ ಸುಮಾರು ೬ ಗಂಟೆಯವರೆಗೆ ಕಾಯಿಸಿ ಸಂಜೆ ಸುಮಾರು ಸಮಯ ಕಲ್ಲಪ್ಪ ಮಾದರ್ ಮತ್ತು ಎಲ್ಲಪ್ಪ ಹರಿಜನ್ ಇವರು ಹೋಗಿ ಎಪ್ಐಆರ್ ಪ್ರತಿ ಕೊಡಿ ಎಂದು ಕೇಳಿದಾಗ ಪಿಎಸ್ಐ ನಿಎನ ಎಂಎಲ್ಎನೊ ಎಂಪಿನೊ ಪೊಲೀಸರು ಮನೆಗೆ ಬರುವುದು ತ್ತಪ್ಪ ರಾಥೋಡ್ ಅಂತ ನನ್ನ ಹೆಸರು ತಗೊಂಡು ಏನು ತಪ್ಪಾಯ್ತು ತನಿಖೆ ಮಾಡಿ ನಂತರ ಎಪ್ಐಆರ್ ಮಾಡ್ತನಿ ನಡಿ ಮನಿಗಿ ಶಾನ್ಯಾ ಅದಿ ಎಂದು ದುರ್ನಡತೆ ನಡೆದುಕೊಂಡು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಮತ್ತು ನಮ್ಮ ಮನಸ್ಸಿಗೆ ಉಂಟುಮಾಡಿ ನಮ್ಮ ವಿಷಯದ ಬಗ್ಗೆ ಉದ್ದೇಶಪೂರ್ವಕವಾಗಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ದಲಿತ ಸಂಘದ ಅಧ್ಯಕ್ಷ ಕರೆಪ್ಪ ಅರ್ಜುನ ಗುಡೆನ್ನವರ ಗಂಬೀರ ಆರೊಪ ಮಾಡಿದ್ದಾರೆ.

ಈಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಇನ್ನು ಒಟ್ಟಾರೆ ಎಲ್ಲ ಪ್ರಕರಣಗಳನ್ನ ತನಿಖೆ ಮಾಡಿ ಅಂಕಲಗಿ ಪಿಎಸ್ಐ ಗೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಯಾವ ರೀತಿ ಚೆಕ್ಮೇಟ್ ಕೊಡುತ್ತಾರೆಂದು ಕಾದು ನೊಡಬೇಕಿದೆ.ಇನ್ನು ಹತ್ತು ಹಲವಾರು ಕರ್ಮಕಾಂಡಗಳನ್ನ ಮುಂದಿನ ಸಂಚಿಕೆಯಲ್ಲಿ ಪ್ರಕಟಪಡಿಸುತ್ತೆವೆ.