Belagavi News In Kannada | News Belgaum

ಮೇಕೆದಾಟು ನಡಿಗೆಯಲ್ಲಿ ಸತೀಶ್ ಜಾರಕಿಹೊಳಿ ಆಶೀರ್ವಾದ ಪಡೆದ ಅಯ್ಯಪ್ಪಗೌಡ

 

ಬೆಂಗಳೂರು : ಮೇಕೆದಾಟು ಸಂಗಮದಿಂದ ಪ್ರಾರಂಭವಾದ ಪಾದಯಾತ್ರೆ ಬೆಂಗಳೂರಿನವರೆಗೆ ನಡಿಗೆ “ನಮ್ಮ ನೀರು ನಮ್ಮ ಹಕ್ಕು” ಬೆಂಗಳೂರಿನ ಜನರಿಗಾಗಿ ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯ ನೇತ್ರತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷರು ಜೊತೆಯಲ್ಲಿ ನೀರಿಗಾಗಿ ನಡಿಗೆ “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆಯಲ್ಲಿ ರಾಯಚೂರು ಜಿಲ್ಲೆಯ ಸಮಾಜ ಸೇವಕ,ಶಿಕ್ಷಣ ಪ್ರೇಮಿ,ಮುಂದಿನ ಭವಿಷ್ಯದ ನಾಯಕ, ಉದಯೋನ್ಮುಖ ಯುವ ಹೋರಾಟಗಾರ,ಕೆಪಿಸಿಸಿ ಕಾರ್ಮಿಕ ವಿಭಾಗ ರಾಯಚೂರು ಜಿಲ್ಲಾ ಉಪಾಧ್ಯಕ್ಷರು ಅಯ್ಯಪ್ಪಗೌಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಹೆಜ್ಜೆ ಹಾಕುತ್ತಿರುವುದು ಅಯ್ಯಪ್ಪಗೌಡರ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.

ಜನಪ್ರಿಯ ಯುವ ರಾಜಕರಣಿ ಅಯ್ಯಪ್ಪಗೌಡರು ಮಾತನಾಡಿ ಮೇಕೆದಾಟು ನೀರಿಗಾಗಿ ನಡಿಗೆ ಬೆಂಗಳೂರು ಕಡೆ ಹೋರಾಟದಲ್ಲಿ ರಾಯಚೂರು ಜಿಲ್ಲೆಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಅನಿಸುತ್ತದೆ. ಈ ಹೋರಾಟ ದಲ್ಲಿ ಭಾಗಿಯಾಗಿರುವುದು ಒಂದು ಇತಿಹಾಸ ಹಾಗೂ ನನಗೆ ತುಂಬಾ ಸಂತೋಷವಾಗಿದೆ.

ಈ ಐತಿಹಾಸಿಕ ಹೋರಾಟದಲ್ಲಿ ನನ್ನಂತಹ ಯುವಕರು ಹೆಜ್ಜೆ ಹಾಕುತ್ತಿರುವುದು ಬಹಳ ಸಂತೋಷವಾಗಿದೆ. ಬೆಂಗಳೂರಿನ ಬಡ ಜನರಿಗಾಗಿ ಹೋರಾಟ ಇದು ನಾವು ಮಾಡುತ್ತಿರುವುದು ರಾಜಕೀಯ ಹೋರಾಟವಲ್ಲ ಎಂದರು ಸರ್ಕಾರ ಆದೇಶ ದಂತೆ ಸಮಾಜಿಕ ಅಂತರ ಕೋವಿಡ್ ನಿಯಮಗಳನ್ನು ಪಾಲಿಸಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅಯ್ಯಪ್ಪಗೌಡರು ತಿಳಿಸಿದ್ದರೆ.