Belagavi News In Kannada | News Belgaum

ಅಕ್ರಮ ಗಾಂಜಾ ಸಾಗಾಣಿಕೆ ಘಟಪ್ರಭಾದಲ್ಲಿ ಓರ್ವನ ಬಂಧನ..!

ಅಕ್ರಮ ಗಾಂಜಾ ಸಾಗಾಣಿಕೆ ಘಟಪ್ರಭಾದಲ್ಲಿ ಓರ್ವನ ಬಂಧನ..!
ಘಟಪ್ರಭಾ- ಕಳೆದ ಕೆಲವು ದಿನಗಳ ಹಿಂದೆ ಸೂಪರ್ ನ್ಯೂಸ್ ಘಟಪ್ರಭಾದಲ್ಲಿ ಹೆಚ್ಚುತ್ತಿರುವ ಗಾಂಜಾ ಘಾಟಿನ ಬಗ್ಗೆ ವರದಿ ಮಾಡಿತ್ತು, ಅದರ ಪ್ರತಿಫಲವೇ ಅನ್ನುವಂತೆ ಇಂದು ಘಟಪ್ರಭಾದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನ ಬಂಧಿಸಿದ್ದಾರೆ, ಕಾಳಿಕಾ ದೇವಸ್ಥಾನದ ಹತ್ತಿರ ಆ ವ್ಯಕ್ತಿ ಪೋಲಿಸರ ಕೈಗೆ ತಗಲಾಕೊಂಡಿದ್ದಾನೆ, ಒಂದು ಕ್ಯಾರಿಬ್ಯಾಗ್‌ನಲ್ಲಿ ಗಾಂಜಾ ಸಾಗಾಣೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ, ಅಕ್ರಮ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯ ಪ್ರಕಾರ ಗಾಂಜಾವನ್ನ ನಾಗನೂರಿನಿಂದ ತಂದಿದ್ದಾನೆ ಎಂದು ಹೇಳಿದ್ದಾನೆ, ಪ್ಯೂರ್ ಗಾಂಜಾವನ್ನ ಪೋಲಿಸರು ವಶಪಡೆಸಿಕೊಂಡಿದ್ದು ಈ ಕಾರ್ಯಾಚರಣೆಯಲ್ಲಿ ಘಟಪ್ರಭಾ ಮಹಿಳಾ ಪಿಎಸ್‌ಐ ಶಾಂತಾ ಹಳ್ಳಿ, ಪೋಲಿಸರಾದ ವಿಠ್ಠಲ ಕೋಳಿ,ರಾಜು ಧುಮಾಳೆ, ರಾಜು ಪಡತಾರೆ ಇದ್ದರು.