Belagavi News In Kannada | News Belgaum

ಕೊರೊನಾ ಸೋಂಕಿನಿಂದ ಏಳೇ ದಿನದಲ್ಲಿ ವೈದ್ಯ ಬಲಿ

ಚಾಮರಾಜನಗರ : ಕೊರೊನಾ ದಿನೇ ದಿನೆ ದ್ವಿಗುಣಗೊಳ್ಳುತ್ತಿರುವ ಹೊತ್ತಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಕೊರೊನಾ ಬಂದು ಏಳೇ ದಿನದಲ್ಲಿ ಮೃತಪಟ್ಟಿದ್ದಾರೆ.

ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅಭಯ್ ಕುಮಾರ್ ಸಾವನ್ನಪ್ಪಿದ್ದಾರೆ. ಮೃತ ವೈದ್ಯರಿಗೆ 7 ದಿನದ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಬೆಂಗಳೂರು, ಚಾಮರಾಜನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಅಭಯ್ ಕುಮಾರ್ ಸಾವನ್ನಪ್ಪಿದ್ದು, ಮೆದುಳಿಗೆ ಸಂಬಂಧಿಸಿದ ಕಾಯಿಲೆ ಹೊಂದಿದ್ದರು ಎಂದು ತಿಳಿದು ಬಂದಿದೆ.//////