Belagavi News In Kannada | News Belgaum

ಯುನೆಕ್ಸ್​ ಸನ್​ರೈಸ್​ ಇಂಡಿಯಾ ಓಪನ್​ ಟೂರ್ನಿ: ಕ್ವಾರ್ಟರ್​ ಫೈನಲ್ ಗೆ ಪಿ.ವಿ.ಸಿಂಧು

ದೆಹಲಿ:  ಯುನೆಕ್ಸ್​ ಸನ್​ರೈಸ್​ ಇಂಡಿಯಾ ಓಪನ್​ ಟೂರ್ನಿಯ ಕ್ವಾರ್ಟರ್​ ಫೈನಲ್ ಗೆ ಪಿ.ವಿ.ಸಿಂಧು ಮತ್ತು ಹೆಚ್.​ಎಸ್.ಪ್ರಣಯ್​ ಪ್ರವೇಶಿಸಿದ್ದು, ಸೈನಾ ನೆಹ್ವಾಲ್​ 2ನೇ ಸುತ್ತಿನ ಪಂದ್ಯದಲ್ಲೇ ಸೋಲು ಕಂಡು ಹೊರ ನಡೆದಿದ್ದಾರೆ.

ಸೈನಾ 17-19, 9-21ರ ಅಂತರದಲ್ಲಿ ಭಾರತದವರೇ ಆದ 111 ಶ್ರೇಯಾಂಕದ ಮಾಳವಿಕಾ ಬನ್ಸೋದ್ ವಿರುದ್ಧ ಸೋಲೊಪ್ಪಿಕೊಂಡರು.

ಪಿ.ವಿ.ಸಿಂಧು ಭಾರತದ ಸಹ ಶಟ್ಲರ್​ ಇರಾ ಶರ್ಮಾ ವಿರುದ್ಧ 21-0, 21-10 ಗೇಮ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದರು. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಿಂಧು, ತಮ್ಮ ಮುಂದಿನ ಸುತ್ತಿನಲ್ಲಿ ಆಶ್ಮಿತಾ ಚಹಿಲಾ ವಿರುದ್ಧ ಸೆಣಸಾಡಲಿದ್ದಾರೆ.

ಇತ್ತ ಆಶ್ಮಿತಾ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್​ನ ಯೆಲ್ಲೆ ಹೊಯಾಕ್ಸ್ ವಿರುದ್ಧ 21-17, 21-14ರ ಅಂತರದಲ್ಲಿ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶ ಪಡೆದರು.

ಪುರುಷರ ವಿಭಾಗದಲ್ಲಿ ಮಿಥುನ್ ಮಂಜುನಾಥ್​ ಕೋವಿಡ್​ ಸೋಂಕು ಕಾರಣಕ್ಕೆ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಪ್ರಣಯ್​ ಸುಲಭವಾಗಿ ಕ್ವಾರ್ಟರ್ ಫೈನಲ್ಸ್‌ಗೆ ಎಂಟ್ರಿ ಕೊಟ್ಟರು.//////