Belagavi News In Kannada | News Belgaum

ವಿದ್ಯಾವಂತರೇ ಸಂಸ್ಕೃತಿ ಮರೆಯುತ್ತಿದ್ದಾರೆ

ಶಿಗ್ಗಾಂವ : ಇಂದಿನ ದಿನಗಳಲ್ಲಿ ಹೆಚ್ಚು ಕಲಿತ ವಿದ್ಯಾವಂತರು ಸಂಸ್ಕೃತಿ ಮರೆತು ನಡೆಯುತ್ತಿದ್ದಾರೆ. ಮಾನವೀಯ ಮೌಲ್ಯಗಳನ್ನ ಮರೆಯುತ್ತಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ  ಸಂಚಾಲಕ ಪ್ರಕಾಶ ಹಾದಿಮನಿ ಹೇಳಿದರು.

ಪಟ್ಟಣದ ಎಸ್.ಬಿ.ಬಿ.ಎಮ್.ಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಾವೇರಿ ಜಿಲ್ಲಾ ಶಿಗ್ಗಾಂವ ತಾಲೂಕ ಮಾನವ ಬಂದುತ್ವ ವೇದಿಕೆಯ ವತಿಯಿಂದ ನಡೆದ ವೈಚಾರಿಕ ಸಂಕ್ರಾತಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೌಢ್ಯಗಳನ್ನು ತೊಡೆದು ಹಾಕಲು ಶಾಸಕರಾದ ಸತೀಶ್‌ ಜಾರಕಿಹೊಳಿ ಅವರು  ಮಾನವ ಬಂಧುತ್ವ ವೇದಿಕೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೂ ನಾವು ಸಹ ಕೈಜೋಡಿಸೋಣ ಅವರೊಂದಿಗೆ ನಾವು ಸಹ ನಡೆಯೋಣ ಎಂದರು.

ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೋ.ಕೆ.ಎಸ್.ಕೌಜಲಗಿ ಅವರು ಮಾತನಾಡಿ ,ನಮ್ಮದು ಕೌದಿ ಸಂಸ್ರ್ಕತಿ ಹಳ್ಳಿಗಳಲ್ಲಿ ಇಂದಿಗೂ ಮನೆ ಮನೆಗಳಲ್ಲಿ ಕೌದಿಗಳನ್ನು ಬಳಸುತ್ತಿದ್ದಾರೆ. ಕೌದಿಯು ನಮ್ಮ ಪರಂಪರೆಯನ್ನು ಬಿಂಬಿಸುತ್ತದೆ. ಎಲ್ಲಿ ಬಡತನ, ಅನಕ್ಷರತೆ, ಮೂಢನಂಬಿಕೆ ಹೆಚ್ಚಾಗಿ ಇರುತ್ತದೆಯೊ ಅಲ್ಲಿ ಮೌಢ್ಯತೆ ಆಚರಣೆ ಇರುತ್ತದೆ ಎಲ್ಲಿ ಚಿಂತನೆ ಮಾಡುವ ಪ್ರಶ್ನೀಸುವ ಮನಸ್ಸುಗಳಿರುತ್ತವೆಯೊ ಅಲ್ಲಿ ವೈಚಾರಿಕ ಚಿಂತನೆಗಳಿರುತ್ತವೆ. ಹಾಗಾಗಿ ಮೌಢ್ಯತೆಯ ಆಚರಣೆಗಳನ್ನು ನಿಲ್ಲಿಸಿ ವೈಚಾರಿಕವಾಗಿ ನಾವೆಲ್ಲ ಬೆಳೆಯಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಪಿ.ಜೋಶಿ ಅವರು ಮಾತನಾಡಿ, ಮಾನವ ಬಂಧುತ್ವ ವೇದಿಕೆಯ ಪ್ರಕಾಶ ಹಾದಿಮನಿ ಅವರ ತಂದೆಯವರಾದ ಮಾರುತಿ ಹಾದಿಮನಿ ಅವರು ನಮ್ಮ ಸ್ನೇಹಿತರು ಸುಮಾರು ದಿನಗಳ ನಂತರ ಇಂತಹ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಆಯೋಜನೆ ಮಾಡಿದ್ದಕ್ಕಾಗಿ ಮಾನವ ಬಂಧುತ್ವ ವೇದಿಕೆಗೆ ಧನ್ಯವಾದಗಳು ಎಂದರು.

ಇದೇ ವೇಳೆ  ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷ ಎಸ್.ಎನ್.ಮುಗಳಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಕಲಾವಿದ ಶ್ರೀ ಪಕ್ಕಿರೇಶ ಕೊಂಡಾಯಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಕೆ.ಎಸ್.ಕೌಜಲಗಿ ಅವರನ್ನು ಮಾನವ ಬಂಧುತ್ವ ವೇದಿಕೆಯಿಂದ ಸನ್ಮಾನಿಸಲಾಯಿತು.

ದತ್ತಣ್ಣ ವರ್ಣೇಕರ, ಭರಮಜ್ಜ ನವಲಗುಂದ, ಗುತ್ತಿಗೆದಾರ ಚಂದ್ರು ಹೆಬ್ಬಾಳ, ಸುಧೀರ ಲಮಾಣಿ, ಪ್ರಾಂಶುಪಾಲ ಆರ್.ಎಸ್.ಭಟ್ಟ, ಶರೀಫ ಮಾಕಪ್ಪನವರ, ಬಸವ ಸಮೀತಿಯ ತಾಲೂಕ ಅಧ್ಯಕ್ಷ ಬಸನಗೌಡ ಸಣ್ಣಗೌಡ್ರ ಹಾಗೂ ಮಾನವ ಬಷದುತ್ವ ವೇದಿಕೆಯ ಸುನೀಲ ಬಂಡಿವಡ್ಡರ, ಮನೋಜ ಹಾದಿಮನಿ ಉಪನ್ಶಾಸಕರು ಸಂಸ್ಥೆಯ ಪಧಾದಿಕಾರಿಗಳು ವಿದ್ಯಾರ್ಥಿಗಳು ಹಾಜರಿದ್ದರು. ತಾಲೂಕ ಸಂಚಾಲಕ ವಿಶಾಲ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧ್ಯಾರ್ಥಿಗಳಾದ ಕುಮಾರಿ ರೂಪಾ ಸಂಕಣ್ಣವರ ಸ್ವಾಗತಿಸಿದರು. ಅಕ್ಕಮಹಾದೇ ವಂದಿಸಿದರು. ಕುಮಾರ ಶರಣ ಕಾರ್ಯಕ್ರಮ ನಿರ್ವಹಿಸಿದರು./////