Belagavi News In Kannada | News Belgaum

ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಕೆಂಭಾವಿ: ಸಮೀಪದ ಕರಡಲ್ ಕ್ಯಾಂಪನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ನೂತನ ಅಧ್ಯಕ್ಷರಾಗಿ ಹಣಮಂತ್ರಾಯ ಹೆಗ್ಗಣದೊಡ್ಡಿ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿ ಬಾಗೆವಾಡಿಯವರನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಶಾಲೆ ಪ್ರದಾನ ಗುರು ಶ್ರೀಶೈಲ ಗುಬ್ಯಾಡ ಪ್ರಾಸ್ತಾವಿಕ ಮಾತನಾಡಿ ಎಸ್.ಡಿ.ಎಮ್.ಸಿ ಪದಾಧಿಕಾರಿಗಳ ಹಕ್ಕು ಮತ್ತು ಕರ್ತವ್ಯಗಳ ಕುರಿತು ವಿವರಿಸಿದರು.
ಕರಡಕಲ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶರಣಗೌಡ ಹಾಗೂ ಮುಖಂಡ ಮಲ್ಕನಗೌಡ ಮರಡ್ಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯಲ್ಲಿ‌ ಪೀರಸಾಬ್ ಮುಲ್ಲಾ, ಭಿಮರಾಯ, ಜಗನ್ನಾಥ, ದೇವಣ್ಣ, ಗಿರಿಮಲ್ಲಪ್ಪಗೌಡ, ಪಾಲಕರು ಸೇರಿದಂತೆ ಇತರರು‌ ಇದ್ದರು.