Belagavi News In Kannada | News Belgaum

ಬಿಜೆಪಿ ಕಾರ್ಯಾಲಯದಲ್ಲಿ ವಿವೇಕಾನಂದರ ೧೫೯ನೇ ಜಯಂತಿ ಆಚರಣೆ

 

ಕೆಂಭಾವಿ:ವಿವೇಕಾನಂದರು ಕಂಡ ಕನಸನ್ನು ನನಸು ಮಾಡಲು ಯುವ ಜನತೆ ಸಂಕಲ್ಪ ಮಾಡಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ರಮೇಶಕುಮಾರ ಜಾಧವ್ ಹೇಳಿದರು.
ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ ೧೫೯ ನೇ ಜಯಂತಿಯಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸ್ವಾತಂತ್ರö್ಯಕ್ಕಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅದೇ ರೀತಿ ಸಮಾಜದ ಬದಲಾವಣೆಗೆ ದಾರ್ಶನಿಕರು ಶ್ರಮಿಸಿ ಸಂದೇಶಗಳನ್ನು ನೀಡಿದ್ದಾರೆ. ಅಂತಹ ಮಹನೀಯರ ಪೈಕಿ ಸ್ವಾಮಿ ವಿವೇಕಾನಂದರೂ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.

ಪುರಸಭೆ ನೂತನ ಸದಸ್ಯ ರವಿಶಂಕರ ಸಾಹು ಸೊನ್ನದ ಮಾತನಾಡಿ ಭಾರತೀಯ ಧಾರ್ಮಿಕ ಪರಂಪರೆಯ ಸಾಕ್ಷಿಪ್ರಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವ ಜನತೆಗೆ ತಲುಪಸಿದರೆ ರಾಷ್ಟಪ್ರಜ್ಞೆ ಬೆಳೆಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿಕಾಸ ಸಾಹು ಸೊನ್ನದ, ರಾಜು ಬಾಂಬೆ, ಭೀಮನಗೌಡ ಮಲ್ಕಾಪುರ, ಅನ್ವರ ನಾಶಿ, ಉಮೇಶರಡ್ಡಿ ಎಲ್ಹೇರಿ, ಎಮ್‌ಎನ್‌ಕೆ ಪೂಜಾರಿ, ಮಲ್ಕಣ್ಣ ಮುದನೂರ, ಮಲ್ಲಿಕಾರ್ಜುನ ಹಡಪದ, ಹಣಮಂತ್ರಾಯ ಪೂಜಾರಿ, ಶ್ರೀಶೈಲ್ ಚಟ್ನಳ್ಳಿ, ಶಿವಣ್ಣ ಬಳಬಟ್ಟಿ, ಸಂಗು ಕಾಡಾ, ಗೋಲ್ಲಾಳಪ್ಪಗೌಡ ಕಾಚಾಪೂರ, ಈರಣ್ಣ ಅಸಂತಾಪೂರ, ಮಲ್ಲಿಕಾರ್ಜುನರಡ್ಡಿ ನಾಲವಾರ ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು.