Belagavi News In Kannada | News Belgaum

ಜಿನ ಭಜನಾ ಸ್ಪರ್ಧಾ ಆಯೋಜನೆ ಶ್ಲಾಘನೀಯ- ಧನ್ಯಕುಮಾರ ಗುಂಡೆ

ಬೆಳಗಾವಿ.ಜ.13: ಜನ ಮಾನಸದಿಂದ ದೂರ ಸರಿಯುತ್ತಿರುವ ಜಾನಪದ ಮತ್ತು ಧಾರ್ಮಿಕ ಗೀತೆಗಳ ಮುಖಾಂತರ ನಮ್ಮ ಸಂಸ್ಕøತಿಯನ್ನು ಕಾಪಾಡುವಲ್ಲಿ ಜಿನ ಭಜನಾ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಅವರು ಹೇಳಿದರು.

ಬೆಳಗಾವಿಯ ಧರ್ಮನಾಥ ಭವನದಲ್ಲಿಂದು ಭಾರತೀಯ ಜೈನ ಮಿಲನ ವಲಯ- 8 ರ ಆಶ್ರಯದಲ್ಲಿ ಧಾರವಾಡ ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಹಾವಳಿಯಿಂದ ಜನಭಕ್ತಿ ಗೀತೆಗಳು, ಜಾನದಪ ಗೀತೆಗಳು ನಶೀಸಿಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಜಿನಭಕ್ತಿ ಗೀತೆಗಳು ಜೈನ ಆರತಿ ಪದಗಳು ಸೋಬಾನ ಪದಗಳು, ಜಾನಪದಗೀತೆಗಳನ್ನು ಪುನಶ್ಚೇತನಗೊಳಿಸಿ ಮುಂದಿನ ಪಿಳಿಗೆಗೆ ಉಡುಗೊರೆಯಾಗಿ ನೀಡುವ ದೃಷ್ಷಿಯಿಂದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆ, ಡಾ. ಡಿ. ವೀರೇಂದ್ರ ಹೆಗ್ಗಡೆ ಇವರ ಆರ್ಶಿವಾದದೊಂದಿಗೆ ಧರ್ಮಸ್ಥಳ ಸುರೇಂದ್ರ ಕುಮಾರರವರ ಪೋಷಣೆಯಲ್ಲಿ ಅನಿತಾ ಸುರೇಂದ್ರಕುಮಾರ ಅವರ ಪರಿಕಲ್ಪನೆಯ ಜಿನ ಭಜನಾ ಸ್ಪರ್ಧಾ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು .

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಜಿನ ಭಜನಾ ಸ್ಪರ್ಧೆಯ ಮೂಲಕ ಇಂದು ಮನೆ ಮನೆಗಳಲ್ಲಿ ಧಾರ್ಮಿಕ ವಾತಾವರಣ ಮೂಡುತ್ತಲಿದೆ. ಈ ರೀತಿಯ ಕಾರ್ಯಕ್ರಮಗಳು ಸಮಾಜದ ಅಭವೃದ್ದಿಗೆ ಪೂರಕವಾಗಿದ್ದು, ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಲಿ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ಪುಷ್ಪಕ ಹನಮಣ್ಣವರ ಅವರು ಮಾತನಾಡಿ ಜಿನ ಭಜನೆಯ ಮೂಲಕ ಜಾಗೃತಿ ಕಾರ್ಯಕ್ರಮ ಮತ್ತು ಧರ್ಮದ ಕಡೆ ಆಕರ್ಷಣೆ ಬೆಳೆಯುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯಲಿ ಎಂದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಪಿ ಜಿ ಕೆಂಪಣ್ಣವರ ಮಾತನಾಡಿ “ಜಿನಭಜನೆಯ ಪರಂಪರೆಗೆ ಅಡಿಪಾಯ ಹಾಕಿದವರು ದಕ್ಷಿಣ ಕನ್ನಡ ಜಿಲ್ಲೆಯ ಮಾನಾಗಡು ವರ್ಧಮಾನ ಹೆಗ್ಗಡೆಯವರು .ಮೂಡಬಿದರೆ, ಧರ್ಮಸ್ಥಳ ಮುಂತಾದೆಡೆ ಸುತ್ತಾಡಿ ಶ್ರಾವಕರಲ್ಲಿ ಜೀನ ತತ್ವಗಳನ್ನು ಪ್ರಸಾರ ಮಾಡಿದರು. ಅದೇ ಅವಧಿಯಲ್ಲಿ ಹಾರುಗೇರಿಯ ಅಲಬೇರಿ ಬೆಳಗಾವಿಯ ದ್ವಾರಪಾಲ, ತಿಗಡೋಳ್ಳಿನ ಬಿಷ್ಮಪ್ಪ ಮುಂತಾದವರು ಜಿನಭಜನೆಗಳನ್ನು ರಚಿಸಿ, ಹಾಡಿನ ಶ್ರಾವಕರಲ್ಲಿ ಜಾಗೃತಿ ಮೂಡಿಸಿದರು. ಅದೇ ರೀತಿ ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಗಡೆ, ಸೌ ಹೇಮಾವತಿ ಹೆಗ್ಗಡೆಯವರು ಹಾಗೂ ಶ್ರೀ ಸುರೇಂದ್ರ ಹೆಗ್ಗಡೆ ಮತ್ತು ಸೌ ಅನಿತಾ ಹೆಗ್ಗಡೆಯವರು ಜಿನಭಜನೆಗಳಿಗೆ ಉತ್ತೇಜನ ನೀಡಿದ್ದು ಅಭಿಮಾನ ಪಡುವಂತಹದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಜೀವಂಧರ ಕುಮಾರ ಧಾರವಾಡ ವಲಯ ಅಧ್ಯಕ್ಷರು, ಗುಣಪಾಲ ಹೆಗ್ಗಡೆ ಗೌರವ ಅಧ್ಯಕ್ಷರು ಅಶೋಕ ಜೈನ ಕೆ.ಜಿ. ಎ ಸದಸ್ಯರು ಸನ್ಮತಿ ಕಸ್ತೂರಿ, ವಿರೇಂದ್ರ ಹೆಗ್ಗಡೆ ಮಹಾಮಿತ್ರ ಉಪಾಧ್ಯ ಪ್ರಶಾಂತ ಉಪಾಧ್ಯೆ ಎಸ್‍ಎಮ್ ಕಗಣಗೌಡ್ರ ಜಿನವಾಣಿ ಉಪಾದ್ಯೆ ಡಾ. ಉದಯಾ ಪಾಟೀಲ, ಅಣ್ಣಾ ಸಾಹೇಬ ಚೌಗುಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗಕ್ಕೆ ನೇಮಕಗೊಂಡಿದ್ದರಿಂದ ದನ್ಯಕುಮಾರ ಹೆಗಡೆಯವರನ್ನು ಭಾರತೀಯ ಜೈನ ಮಿಲನ, ಧರ್ಮಸ್ಥಳ ಡಾ. ವಿರೇಂದ್ರ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಅದರತೆ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಕುಂತಿನಾಥ ಕಲಮನಿ ಹಾಗೂ ಪದ್ಮರಾಜ ವೈಜಣ್ಣವರ ಅವರನ್ನು ಸತ್ಕರಿಸಲಾಯಿತು. ಜೈನ ಮಿಲನ ಮಧ್ಯವರ್ತಿ ಸಮಿತಿಯ ಕಾರ್ಯದರ್ಶಿ ಡಾ. ನಾಗರಾಜ ಮರೆಣ್ನವರ ಸ್ವಾಗತಿಸಿದರು. ಅಜಿತ ಕುಮಾರ ವಂದಿಸಿದರು ಹಾಗೂ ನಮಿತಾ ಪರಮಾಜ ನಿರೂಪಿಸಿದರು.///