Belagavi News In Kannada | News Belgaum

ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆಂದ : ಮಾಜಿ ಸಚಿವ ರೇವಣ್ಣ

ಹಾಸನ : ಮುಂದಿನ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಮಾಜಿ ಸಚಿವ, ಜೆಡಿಎಸ್‌ ನಾಯಕ ಹೆಚ್.ಡಿ.ರೇವಣ್ಣ ಘೋಷಣೆ ಮಾಡಿದ್ದಾರೆ.

ಹೊಳೆನರಸೀಪುರದಲ್ಲಿ ಎಂಎಸ್ಸಿ ಫುಡ್ ಅಂಡ್ ನ್ಯೂಟ್ರಿಷಿಯನ್ ಕೋರ್ಸ್ ಅನುಮತಿ ಕೋರಿದ್ದರು. ಯೂನಿವರ್ಸಿಟಿ ಅನುಮತಿಕೊಟ್ಟರೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ನೀಡಿಲ್ಲ. ಇದರಿಂದ ಸಿಎಂ ಮನೆ ಮುಂದೆ ಧರಣಿ ಕೂರೋದಾಗಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ರಾಜಕೀಯ ಮಾಡುತ್ತಿದೆ. ನನ್ನ ಜನರಿಗೆ ಅನ್ಯಾಯವಾದರೆ ನಾನು ಸುಮ್ಮನೆ ಕೂರಲ್ಲ. ಕರೆದರೆ ನಮ್ಮ ಶಾಸಕರು ಬರುತ್ತಾರೆ, ಆದರೆ ಕೊರೊನಾ ಇದೆ. ಒಬ್ಬನೇ ಮಂಗಳವಾರ 11 ಗಂಟೆಗೆ ಸಿಎಂ ಮನೆ ಎದುರು ಧರಣಿ ಮಾಡುತ್ತೇನೆ ಎಂದಿದ್ದಾರೆ.

ನನ್ನ ಪ್ರಾಣ ಹೋಗುತ್ತೋ ಹೋಗಲಿ. ನನ್ನನ್ನು ಪೊಲೀಸರು ಬಂಧಿಸುತ್ತಾರೋ ಬಂಧಿಸಲಿ. ಸರ್ಕಾರಕ್ಕೆ ನಾಚಿಕೆಯಾಗಬೇಕು, ಬಡವರ ಮಕ್ಕಳ‌ ವಿದ್ಯಾಭ್ಯಾಸದ‌ ಮೇಲೆ ಕಲ್ಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ./////