Belagavi News In Kannada | News Belgaum

ಹನಿಗವನ ಸಂಭ್ರಮ :ಮಂಜುಳ. ಬಿ. ಕೆ ಶಿಕ್ಷಕಿ

ಹನಿಗವನ

ಸಂಭ್ರಮ

ಅಚ್ಚು ಬೆಲ್ಲದಂತೆ
ಸಂಕ್ರಾಂತಿ ಸಂಭ್ರಮ
ಎಳ್ಳು ಬೆಲ್ಲ ಹಂಚುವ
ಸಂಕ್ರಮಣ ಸಡಗರ
ಸುಗ್ಗಿಯಲ್ಲಿ ಹಿಗ್ಗಿನ
ನಗುವಿನ ಹೂರಣ.

2.ಸುಗ್ಗಿ ಸಂಭ್ರಮ

ಉತ್ತರಾಯಣ ಪುಣ್ಯ ಕಾಲ
ರಾಶಿ ಹಾಕುವ ಸುಗ್ಗಿಕಾಲ
ಬೆವರಿನ ಫಲವು
ಸಂಕ್ರಾಂತಿ ಚೆಲುವು
ಎಳ್ಳು ಬೆಲ್ಲ ಜೊತೆಗೂಡಿ
ಸಡಗರ ಸಂಭ್ರಮ ಸವಿಯಾಗಿ.

ಮಂಜುಳ. ಬಿ. ಕೆ
ಶಿಕ್ಷಕಿ
ದಾಸರಹಳ್ಳಿ
ಸಿರಾ ತಾಲ್ಲೂಕ್