Belagavi News In Kannada | News Belgaum

ಸುಗ್ಗಿ ಹಬ್ಬ ಬಂದಿತೋ ಸಂಕ್ರಾಂತಿ ಹಬ್ಬ ಬಂದಿತೋ ಮಾಗಿಯ ಚಳಿಯ ಬದಿಗೆಸರಿಸಿ

ಸುಗ್ಗಿ ಹಬ್ಬ ಬಂದಿತೋ
ಸಂಕ್ರಾಂತಿ ಹಬ್ಬ ಬಂದಿತೋ ಮಾಗಿಯ ಚಳಿಯ ಬದಿಗೆಸರಿಸಿ
ಮನದ ದುಗುಡ ದೂರ ಇರಿಸಿ ಸುಗ್ಗಿ ಹಬ್ಬ ಬಂದಿತೋ
ಸಂಕ್ರಾಂತಿ ಹಬ್ಬ ಬಂದಿತೋ

ಕಡಲೆ ಕಬ್ಬು ಬೆಳೆಯಿತೋ
ಅವರೆ ಶೆಂಗ ಬೆಂದಿತೋ
ಎಳ್ಳು ಬೆಲ್ಲ ಬೀರಿತೋ
ಸುಗ್ಗಿ ಹಬ್ಬ ಬಂದಿತೋ
ಸಂಕ್ರಾಂತಿ ಹಬ್ಬ ಬಂದಿತೋ

ಬಗೆ ಬಗೆಯ ರಂಗವಲ್ಲಿ
ಮನದ ಭಾವನೆಯ ಹೊರಗೆ ಚೆಲ್ಲಿ
ಅಂಗಳದಿ ಬಣ್ಣದೊಕುಳಿಯ ಚೆಲ್ಲಿತೋ
ಸುಗ್ಗಿ ಹಬ್ಬ ಬಂದಿತೋ
ಸಂಕ್ರಾಂತಿ ಹಬ್ಬ ಬಂದಿತೋ

ರಾಸುಗಳ ಮಯ್ಯ ತೊಳೆದು
ಸಿಂಗರಿಸಿ ಮುತ್ತನಿಟ್ಟು
ಗೆಜ್ಜೆ ಕಟ್ಟಿ ಸೊಡರನಾಯ್ಸಿ
ಸ್ನೇಹ ಭಾವ ಮೆರೆಸಿತೋ
ಸುಗ್ಗಿ ಹಬ್ಬ ಬಂದಿತೋ
ಸಂಕ್ರಾಂತಿ ಹಬ್ಬ ಬಂದಿತೋ

ಮಕರಜ್ಯೊತಿ ಅನ್ನಜ್ಯೊತಿ
ಪುಣ್ಯಜ್ಯೊತಿ ದಿನಂಜ್ಯೊತಿ
ಮಲೆಗಳಲಿ ಮನೆಗಳಲಿ
ಮನಗಳಲಿ ಸದಾ ಬೆಳಗಿ
ಭಕ್ತಿ ಭಾವ ಬೆಳೆಸಿತೋ
ಸುಗ್ಗಿ ಹಬ್ಬ ಬಂದಿತೋ
ಸಂಕ್ರಾಂತಿ ಹಬ್ಬ ಬಂದಿತೋ

ರಚನೆ:
ಹರ್ಷ ಭಾನು ಜಿ ಪಿ