Belagavi News In Kannada | News Belgaum

ಘಟಪ್ರಭಾ ಮಲ್ಲಯ್ಯನ ಗುಡ್ಡದಲ್ಲಿ ಸಾರಾಯಿ ಮತ್ತು ಗಾಂಜಾ..!?

ಘಟಪ್ರಭಾ ಜನತೆ ಗಾಂಜಾ ಘಾಟಿಗೆ ಬೆಸತ್ತು ಹೊಗಿ ಜಾಥಾ ಮಾಡಿದ್ರು, ಬೆಳಗಾವಿ ವರದಿ ಸಹ ಅನೇಕ ಬಾರಿ ಗಾಂಜಾ ಬಗ್ಗೆ ವರದಿ ಮಾಡಿತ್ತು ಅದಕ್ಕೆ ಪ್ರತಿಫಲ ಓರ್ವ ಗಾಂಜಾ ಪೇಡ್ಲರ್‌ ಘಟಪ್ರಭಾ ಪೋಲಿಸರ ಕೈಗೆ ಸಿಕ್ಕಿದ್ದ, ಆತನ ವಿರುದ್ಧ ಕೇಸ್‌ ದಾಖಲಿಸಿ ಅಂದರ್‌ ಮಾಡಿದ್ದರು.

ಆದರೆ ಮತ್ತೇ ಈಗ ಗಾಂಜಾ ವಾಸನೆ ಪುಟಿದೇಳಿ ಜನರನ್ನ ಅದರಲ್ಲೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಭಕ್ತರನ್ನ ಕಾಡುತ್ತಿದೆ, ಘಟಪ್ರಭಾ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೈವ ಶ್ರೀ ಮಲ್ಲಯ್ಯ ಅಜ್ಜಾ, ಪಡಸಲಾಗಳಲ್ಲಿ ಮಲ್ಲಯ್ಯ ಅಜ್ಜಾನ ಆಣಿ ಅಂತ ಒಂದು ಮಾತು ಬಂದ್ರೆ ಅದು ಆ ಪರಶಿವನೇ ನಿಜ ಹೇಳಿದಂಗೆ ಅಲ್ಲಿಗೆ ನ್ಯಾಯ ಪಂಚಾಯತಿ ಮುಗದಂಗೆ ಅರ್ಥ…

ಊರಿನ ಸಮಸ್ತ ಜನರು ಜಾತಿ ಭೇಧ ಮರೆತು ಮಲ್ಲಯ್ಯ ಅಜ್ಜನನ್ನ ಆರಾಧಿಸುವಾಗ ಪುಂಡರ ಗ್ಯಾಂಗ್‌ ಒಂದು ನಿತ್ಯ ಗುಬ್ಬಲಗುಡ್ಡದಲ್ಲಿ (ಮಲ್ಲಯ್ಯ ಗುಡ್ಡ) ಹಗಲು ರಾತ್ರಿ ಎನ್ನದೇ ಸಾರಾಯಿ ಕುಡಿಯುವುದು, ಗಾಂಜಾ ಸೇವನೆ ಮಾಡುವುದು ಮಾಡ್ತಿದಾರೆ, ಇಂದು ಸಂಜೆ ಐದರ ಆಸುಪಾಸು ಬಜರಂಗ ದಳದ ಕಾರ್ಯಕರ್ತರು ದೇವಸ್ಥಾನದ ಜಾಗದಲ್ಲಿ ಈ ಥರ ಚಟ ಮಾಡುವುದು ತಪ್ಪು, ಊರಿನ ಹಿರಿಯರು, ಸ್ತ್ರಿಯರು, ಚಿಕ್ಕಮಕ್ಕಳು ಎಲ್ಲಾ ಬರ್ತಾರೆ ಇಲ್ಲಿಂದ ಎದ್ದು ಹೋಗಿ ಅಂದಿದ್ಕೆ ದೊಡ್ಡ ರಾದ್ದಾಂತ ಮಾಡಿದೆ ರಾಸ್ಕಲ್ಸ್‌ ಗ್ಯಾಂಗ್…‌

ಬಜರಂಗದಳದ ಕಾರ್ಯಕರ್ತರೊಬ್ಬರು ಕೂಡಲೇ ಬೆಳಗಾವಿ ವರದಿ ರಿಪೋರ್ಟರ್‌ಗೆ ಕರೆ ಮಾಡಿ ಮಾಹಿತಿ ಕೊಟ್ಟರು, ನಮ್ಮ ತಂಡ ಒಂದು ಕ್ಷಣವೂ ತಡ ಮಾಡದೇ ಘಟನಾ ಸ್ಥಳಕ್ಕೆ ಹೋದಾಗ ನಶೆಯಲ್ಲಿ ಇದ್ದ ಗ್ಯಾಂಗ್‌ ಬಜರಂಗದಳದ ಕಾರ್ಯಕರ್ತರ ಜೊತೆ ಜಗಳ ಮಾಡುತ್ತಿದ್ರು, ಇದು ನಿಮ್ಮ ಅಪ್ಪನ ಮನೆಯ ಆಸ್ತಿ ಏನ ನಮಗ ಬರಬ್ಯಾಡ ಅನ್ನಾಕ..? ನಾವ ಮಾಡ್ತೇವ ಇಲ್ಲೇ… ಏನ್‌ ಹರ್ಕೊತಿ ಹರ್ಕೊ ಎಂದು ತೊದಲು ನುಡಿಯಲ್ಲಿ ಬೈಯುತ್ತಿದ್ದ, ಪರಿಸ್ಥಿತಿ ತಿಳಿ ಮಾಡಲು ಎಲ್ಲರೂ ಯತ್ನಿಸುತ್ತಿದ್ರೂ ಸಹ ಆ ನಿಶೆಯಲ್ಲಿ ಏನ್‌ ಅರ್ಥ ಆಗುತ್ತೆ ಆ ಲೋಫರ್ಸ್‌ಗಳಿಗೆ.. ಕಾರ್ಯಕರ್ತನಿಗೆ ಸರ್ಕಲ್‌ ದಾಗ ಸಿಗ್ತಿ ಮಗನಾ ಸಿಗಲಿಲ್ಲ ಅಂದ್ರ ಮನಿಗ ಹೊಕ್ಕ ಬಡಿತೇನಿ ಎಂದು ಓರ್ವ ಕತ್ತೆ ಥರ ಕಿರುಚಿ ಕೆಳಗೆ ಬಿದ್ದ..

ಸರಿಯಾಗಿ ನಡೆಯೋಕೂ ಬರದ ಸ್ಥಿತಿಯಲ್ಲಿದ್ದ ಆ ಹುಡುಗ ಹೋಡಿತಿನಿ ಬಡಿತಿನಿ ಅಂತ ಅಂತಿದ್ರೆ ನೋಡೊರಿಗೆ ಸಾಧು ಕೋಕಿಲ್‌ ನಟನೆಯ ಫಿಲ್ಮ್‌ ಸಿನ್‌ ಕಣ್ಣ ಮುಂದೆ ಬಂದಂಗೆ ಆಗ್ತಿತ್ತು, ಊರಿನ ಹಿರಿಯರು, ಘಟಪ್ರಭಾ ಪೋಲಿಸರು ಈ ರೀತಿ ಆಗುತ್ತಿರುವ ಪ್ರಕರಣಕ್ಕೆ ಯಾವ ರೀತಿ ಚೇಕ್‌ ಮೇಟ್‌ ಮಾಡ್ತಾರೆ ಕಾಯ್ದು ನೋಡಬೇಕು…

ವರದಿ- ವಿವೇಕ್‌ ಕುದರಿಮಠ