Belagavi News In Kannada | News Belgaum

ಬಸವೇಶ್ವರ ವೃತ್ತಕ್ಕೆ ಪಟ್ಟಣ ಪಂಚಾಯತ ವತಿಯಿಂದ ಕಂಬಾ ಹಾಗು ಬೀದಿದೀಪಾ ಅಳವಡಿಕೆ.

ಹುಣಸಗಿ ಬಸವೇಶ್ವರ ವೃತ್ತಕ್ಕೆ ಪಟ್ಟಣ ಪಂಚಾಯತ ವತಿಯಿಂದ ಕಂಬಾ ಹಾಗು ಬೀದಿದೀಪಾ ಅಳವಡಿಕೆ.
ಹುಣಸಗಿ : ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತಕ್ಕೆ ಪಟ್ಟಣ ಪಂಚಾಯತ ವತಿಯಿಂದ ಕಂಬಾ ಹಾಗು ಬೀದಿ ದೀಪಾ (ನಾಲ್ಕು ಬಲ್ಪ) ಅಳವಡಿಕೆ ಕಾರ್ಯ ನಡೆಯುತ್ತಿದೆ.
ಇದೇ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯತ ಮುಖ್ಯಾದಿಕಾರಿ ಅರುಣ್ ಕುಮಾರ ಚವ್ಹಾನ್, ಪಟ್ಟಣ ಪಂಚಾಯತ್ ವತಿಯಿಂದ ಈ ಕಾರ್ಯವನ್ನು ಮಾಡಲಾಗುತ್ತಿದ್ದು, ದಿನಾಲು ಇಲ್ಲಿ ಸಾವಿರಾರು ಜನರು ತಿರುಗಾಡುತ್ತಾರೆ, ರಾತ್ರಿ ಸಮಯದಲ್ಲಿ ಈ ಸ್ಥಳವು ಬಯಂಕರ ಕತ್ತಲಿನಿಂದ ಕುಡಿರುತ್ತಿತ್ತು, ಅದ್ದರಿಂದ ಸಾರ್ವಜನಿಕರಿಗೆ ಅನುಕುಲವಾಗಲೆಂದು ಬೀದಿದೀಪಾ ಅಳವಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸಿಬ್ಬಂದಿ ಸೇರಿದಂತೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಇದ್ದರು.