Belagavi News In Kannada | News Belgaum

ರಡ್ಡಿ ಸಮಾಜದ ಮಹಿಳೆಯರಿಂದ ಸಂಕ್ರಮಣ ಆಚರಣೆ.

ರಡ್ಡಿ ಸಮಾಜದ ಮಹಿಳೆಯರಿಂದ ಸಂಕ್ರಮಣ ಆಚರಣೆ.
ಬೆಳಗಾವಿ ರಡ್ಡಿ ಸಂಘ – ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸಂಘದ ಸದಸ್ಯೆಯರು ಮಕರ ಸಂಕ್ರಮಣ ಹಬ್ಬ ವನ್ನು ರಕ್ಕಸಕೊಪ್ಪ ಜಲಾಶಯದ ಮೇಲ್ದಂಡೆಯಲ್ಲಿರುವ ಖಾಸಗಿ ವನದಲ್ಲಿ ಅತಿ ವಿಜ್ರಂಭಣೆಯಿಂದ ಆಚರಿಸಿದರು.
ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ಬದಲಾಯಿಸುವ ಪಥದ ಬಗ್ಗೆ ವ್ಯಾಖ್ಯಾನ ನೀಡಲಾಯಿತು.
ಹಿಂದೂ ಹಬ್ಬಗಳ ಬಗ್ಗೆ ಯೂ ಮಹಿಳೆಯರು ಚರ್ಚಿಸಿದರು.
ಹಬ್ಬಗಳ ಬಗ್ಗೆ ವಿವಿಧ ಹಾಡುಗಳನ್ನು ಹಾಗೂ ನ್ರತ್ಯಗಳನ್ನೂ ಪ್ರದರ್ಶಿಸಿದರು.ಶ್ರೀಮತಿ ಜಯಶ್ರೀ ಹಾಗೂ ತಂಡದವರು ಸುಶ್ರಾವ್ಯ ಸಂಗೀತ ನೀಡಿದರು.


ಸಮಾಜದ ಸುಮಾರು ಐವತ್ತಕ್ಕೂ ಹೆಚ್ಚು ಮಹಿಳೆಯರು,ಮಕ್ಕಳು ಹಾಗೂ ಮಹನೀಯರು ಭಾಗವಹಿಸಿದ್ದರು.
ಶ್ರೀಮತಿ ಕಸ್ತೂರಿ ಬರಮನಿ,ಶಾಂತಾ ಜಂಗಲ,ಲತಾ ಅರಕೇರಿ,ಸವಿತಾ ನಾಡಗೌಡರ,ಲಕ್ಷ್ಮಿ ಚಾವಲಿ,ಭಾರತಿ ತುಂಗಳ,ಗೀತಾ ಕೆಂಚರಡ್ಡಿ,ನಿರ್ಮಲಾ ಕಾಮನಗೌಡರ ಇವರು ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.