03 ಜನ ಆರೋಪಿತರ ಪತ್ತೆ; ಅವರಿಂದ ಕದ್ದೋಯ್ದ 2 ಎಮ್ಮೆಗಳ ವಶ.

news belagavi

ಬೆಳಗಾವಿ : ಕೆಲಸಗಾರನ ಕೈಕಾಲು ಕಟ್ಟಿ, ಹೊಡೆದು ಎಮ್ಮೆಗಳನ್ನು ಕಳ್ಳತನ ಮಾಡಿದ 03 ಜನ ಆರೋಪಿತರ ಪತ್ತೆ; ಅವರಿಂದ ಕದ್ದೋಯ್ದ 2 ಎಮ್ಮೆಗಳ ವಶ.

ದಿನಾಂಕ. 26/05/2019 ರಂದು ಶ್ರೀಮತಿ ಪ್ರಿಯಾ ಪುಂಡಲಿಕ ಸೋಮನಟ್ಟಿ ಇವರ ಕೆಲಸಗಾರನಾದ ಅಪ್ಪಯ್ಯಾ ಮಲ್ಲಪ್ಪಾ ಶೆಲಾರ ವಯಸ್ಸು: 65 ವರ್ಷ ಸಾ: ಅಗಸಗಾ ತಾ:ಜಿ: ಬೆಳಗಾವಿ ಇವನು ಹೊಲದಲ್ಲಿರುವ ದನದ ಶೆಡ್ಡಿನಲ್ಲಿ ಮಲಗಿರುವಾಗ ಯಾರೋ ನಾಲ್ಕು ಜನ ಅಪರಿಚಿತರು ಹೊಗಿ ಒಳಗೆ ಅವನ್ನು ಎಬ್ಬಿಸಿ ಅವನಿಗೆ ಹಿಡಿದು ಹೊಡೆದು, ಕೈ ಕಾಲು ಹಗ್ಗದಿಂದ ಕಟ್ಟಿ, ಬಾಯಿಗೆ ಅರಿವೆಯಿಂದ ಕಟ್ಟಿ ಅಲ್ಲಿದ್ದ 1,70,000/-ರೂ ಮೌಲ್ಯದ ಎರಡು ಎಮ್ಮೆಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ತನಿಖೆ ನಡೆಸಿದ್ದ ಕಾಕತಿ ಠಾಣೆಯ ಪೊಲೀಸ್‍ರು ಶ್ರೀ ಕೆ. ಶಿವಾರೆಡ್ಡಿ ಎಸಿಪಿ ಬೆಳಗಾವಿ ಗ್ರಾಮೀಣ ರವರ ಉಸ್ತುವಾರಿಯಲ್ಲಿ ಶ್ರೀ ಎಲ್ ಎಚ್ ಗೌಂಡಿ ಪಿಐ ಕಾಕತಿ ಹಾಗೂ ಸಿಬ್ಬಂದಿಯವರು

ಮಾಹಿತಿ ಕಲೆ ಹಾಕಿ, ಖಚಿತ ಮಾಹಿತಿಯಂತೆ ಸಂಶಯುಕ್ತ ಆರೋಪಿತರಾದ 1) ಶೆಟ್ಟು ರಾಮಾ ಸನದಿ 2) ವಿಶಾಲ ವಿಷ್ಣು ಕಲಕಾಂಬರ 3) ಸಂತೋಷ ಭರಮಾ ಖಜಗೋನಟ್ಟಿ ಸಾ|| ಮೂವರು ಮಣ್ಣಿಕೇರಿ ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದು, ಸದರಿಯವರು ಅಪರಾಧಿಕ ಕೃತ್ಯವನ್ನೆಸಗಿದ ಬಗ್ಗೆ ಒಪ್ಪಿಕೊಂಡಂತೆ ಅವರಿಂದ 2 ಕಳುವಾದ ಎಮ್ಮಗಳನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲಾಗಿದ್ದು, ಇನ್ನೊಬ್ಬ ಆರೋಪಿ 4) ಅನೀಲ ರಾಜು ಗುಡಗ್ಯಾನಟ್ಟಿ ಸಾ|| ಕೇದನೂರ ಇವನು ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ. ////

Read Belgaum News & Updates for What’s Happening in Around You @ in News Belgaum Kannada News Portal.