ಸಿಸಿಬಿ ಘಟಕ ರವರ ತಂಡದಿಂದ ಇಸ್ಪೀಟ ದಾಳಿ; 2 ಪ್ರತ್ಯೇಕ ಪ್ರಕರಣಗಳು; 13 ಜನರ ಬಂಧನ;

news belagavi

ಬೆಳಗಾವಿ ನಗರ ಎಸಿಪಿ ಅಪರಾಧ & ಪೊಲೀಸ್ ಇನ್ಸಪೆಕ್ಟರ್ ಸಿಸಿಬಿ ಘಟಕ ರವರ ತಂಡದಿಂದ ಇಸ್ಪೀಟ ದಾಳಿ; 2 ಪ್ರತ್ಯೇಕ ಪ್ರಕರಣಗಳು; 13 ಜನರ ಬಂಧನ; ನಗದು, 7 ಮೋಬೈಲ್ & 04 ದ್ವಿಚಕ್ರ ವಾಹನ ಸೇರಿ ಒಟ್ಟು ರೂ.2,34,610/- ರಷ್ಟು ಜಪ್ತ

1. ದಿನಾಂಕ: 10/03/2019 ರಂದು 14.30 ಗಂಟೆಗೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವೀನ್ಸ ಗಾರ್ಡನ್ ಹತ್ತಿರ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 1) ನೆಲ್ಸನ್ ಡಾಮ್ನಿಕ್ ಡಿಕ್ರೂಜ್ ಸಾ: ಮನಂ 64 ಹೈಸ್ಟ್ರೀಟ್ ಕ್ಯಾಂಪ್ ಬೆಳಗಾವಿ 2) ಮಯೂರೇಶ ಪ್ರತಾಪ ಕಾಕತಕರ ಸಾ: ಮನಂ 690 ಸರಸ್ವತಿ ನಗರ 1 ನೇ ಕ್ರಾಸ ಗಣೇಶಪೂರ ಬೆಳಗಾವಿ 3) ಡಾಮ್ನಿಕ್ ಜಾನ್ ಡಿಕ್ರೂಜ್ ಸಾ: ಮನಂ 64 ಹೈಸ್ಟ್ರೀಟ್ ಕ್ಯಾಂಪ್ ಬೆಳಗಾವಿ 4)ಜ್ಯೋತಿಬಾ ಶಿವಾಜಿ ಶಿಂಧೆ ಸಾ: ಮನಂ 4644 ಬಡಕಲ ಗಲ್ಲಿ ಬೆಳಗಾವಿ 5) ಮೋಹನ ಅಮೃತ ಜಾಧವ ಸಾ: ಮನಂ 151/2 ವಿನಾಯಕ ನಗರ ಬೆಳಗಾವಿ 6)

ಅಬಿದಿನ್ ಮುಸ್ತಫಾ ಉಸ್ತಾದ ಸಾ: ಆಜಾದ ನಗರ 1 ನೇ ಕ್ರಾಸ್ ಬೆಳಗಾವಿ 7)ಫಹೀಮ್ ಶಮಶುದ್ದೀನ್ ಬೇಪಾರಿ ಸಾ: ಮನಂ 93ನ್ಯೂ ಚಾಳ ಕ್ಯಾಂಪ್ ಬೆಳಗಾವಿ ಇವರು ತಮ್ಮ ಸ್ವಂತ ಲಾಭಕ್ಕೋಸ್ಕರ ಅಂದರ ಬಾಹರ್ ಎಂಬ ಇಸ್ಪೀಟ ಆಟವನ್ನು ಆಡುತ್ತಿದ್ದಾಗ ಆಟದಲ್ಲಿ ತೊಡಗಿದ್ದಾಗ ಮಾನ್ಯ ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಡಿಸಿಪಿ ಅಪರಾಧ ಮತ್ತು ಸಂಚಾರ ರವರ ಮಾರ್ಗದರ್ಶನದಲ್ಲಿ ಶ್ರೀ.

ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಗುರುರಾಜ್ ಕಲ್ಯಾಣಶೆಟ್ಟಿ ಪಿ.ಐ ಸಿಸಿಬಿ ಘಟಕ ಮತ್ತು ಚನ್ನಕೇಶವ ಬಿ ಟಿಂಗರಿಕರ ಪಿಐ ಕ್ಯಾಂಪ ಹಾಗೂ ಸಿಸಿಬಿ ಘಟಕದ ಸಿಬ್ಬಂದಿಯವರಾದ ಐ ಎಸ್ ಪಾಟೀಲ, ಎಚ್ ಎಸ್ ನಿಸುನ್ನವರ, ಶಿವಲಿಂಗ ಪಾಟೀಲ, ಬಿ. ಆರ್. ಡೂಗ್, ಎಎಸ್‍ಐ, ಬಿ ಬಿ ಗೌಡರ ವಿ ಎಫ್ ಕಲಕಾಂಬಕರ ರವರು ದಾಳಿ ಮಾಡಿ 07 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ 12810/- ಮೊತ್ತ ಮತ್ತು 07 ಮೋಬೈಲ್ ಹಾಗೂ 4 ದ್ವಿಚಕ್ರವಾಹನ ಸೇರಿ ಒಟ್ಟು ರೂ.2,10,810/- ರಷ್ಟು ಮೌಲ್ಯದ ವಸ್ತುಗಳನ್ನು ಆರೋಪಿತರಿಂದ ಜಪ್ತಪಡಿಸಿಕೊಂಡು ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

2. 10-03-2019 ರಂದು 17.30 ಗಂಟೆಗೆ ಬೆಳಗಾವಿ ನಗರ ಬೆಳಗಾವಿ ಅನಗೋಳ ಜಟಪಟ ಕಾಲನಿಯ ಖುಲ್ಲಾ ಸಾರ್ವಜನಿಕ ಜಾಗೆಯಲ್ಲಿ ಕೆಲವೊಂದು ಜನರು ಕುಳಿತು ಇಸ್ಪೀಟ್ ಎಲೆಗಳ ಮೇಲೆ ಹಣ ಹಚ್ಚಿ ಅಂದರ-ಬಾಹರ ಅಂಬುವ ಇಸ್ಪೀಟ್ ಜುಗಾರ ಆಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಡಿಸಿಪಿ ಅಪರಾಧ ಮತ್ತು ಸಂಚಾರ ರವರ

ಮಾರ್ಗದರ್ಶನದಲ್ಲಿ ಶ್ರೀ. ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ರವರ ನೇತೃತ್ವದಲ್ಲಿ ಅವರ ಅಧೀನ ಸಿಬ್ಬಂದಿಯವರಾದ ಅನೀಲ ಎಲ್ ಪಾಟೀಲ, ಶ್ರೀಧರ ಭಜಂತ್ರಿ, , ಯಾಸೀನ ಡಿ ನಧಾಪ, ರವಿ ದುರ್ಗಿ ಇವರು ದಾಳಿ ಮಾಡಿ 1] ದಿನೇಶ ಬಲಜೋರ ಸಹಾನಿ ಸಾ; ನಂ #205 ನ್ಯೂ ಶಿವಾಜಿ ಕಾಲನಿ ಪಾಪಾಮಾಳ ಟಿಳಕವಾಡಿ ಬೆಳಗಾವಿ 2] ದರೋಗಾ ರಾಮಚಣ್ಣ ಸಹಾನಿ ಸಾ; ಜಟಪಟ ಕಾಲನಿ 1 ನೇ ಕ್ರಾಸ ಅನಗೋಳ ಬೆಳಗಾವಿ 3] ಯೋಗೇಂದ್ರ

ಬುರಿಕ ಪಾಸ್ವಾನ ಸಾ|| ಚೌಗಲೆವಾಡಿ ಟಿಳಕವಾಡಿ ಬೆಳಗಾವಿ 4] ದಿಲೀಪ ಭದ್ರಿನಾಥ ಚೌವ್ಹಾಣ ಸಾ: ಬಾಲಕೃಷ್ಣ ನಗರ ಧಾಮಣೆ ರೋಡ ವಡಗಾಂವ ಬೆಳಗಾವಿ 5] ದರೋಗಾ ರಾಮಬಚನ ಸಹಾನಿ ಸಾ: ನ್ಯೂ ಶಿವಾಜಿ ಕಾಲನಿ ಪಾಪಾಮಾಳ ಟಿಳಕವಾಡಿ ಬೆಳಗಾವಿ 6]ಮುನಸಿ ರಾಮಸಿಂಗ್ ಸಹಾನಿ ಸಾ|| ಚೌಗಲೆವಾಡಿ ಟಿಳಕವಾಡಿ ಬೆಳಗಾವಿ ರವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ.23,800/- ನಗದು ಹಾಗೂ ಇಸ್ಪಿಟ ಎಲೆಗಳನ್ನು ವಶಕ್ಕೆ ಪಡೆದುಕೊಂಡು ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ////

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube