ಜಗದೀಶ ಪಾಟೀಲ ಮತ್ತೆ ಸರಕಾರಿ ನೌಕರರ ಸಂಘದ ಅಧ್ಯಕ್ಷ!

news belagavi

ಬೆಳಗಾವಿ: ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆದಿದ್ದು ಜಿಲ್ಲಾ ಅಧ್ಯಕ್ಷರಾಗಿ ಜಗದೀಶ ಗೌಡಪ್ಪ ಪಾಟೀಲ ಅತಿ ಹೆಚ್ಚು ಮತಗಳೊಂದಿಗೆ ಗೆಲುವನ್ನು ಸಾಧಿಸಿದ್ದಾರೆ.

ರಾಜ್ಯ ಪರಿಷತ್ ಸ್ಥಾನಕ್ಕೆ ಲಗಮಣ್ಣ ಪಂಗಣ್ಣವರ ಬಹುಮತದಿಂದ ಆಯ್ಕೆಯಾಗಿದ್ದು, ನೌಕರರ ಸಂಘದ ಖಜಾಂಚಿ ಸ್ಥಾನಕ್ಕೆ ಶ್ರವಣ ರಾಣವ್ವಗೋಳ ಇವರು ಆಯ್ಕೆಯಾಗಿದ್ದಾರೆ. ಈ ಸಲ ಅತಿ ತುರುಸಿನ ಚುನಾವಣೆ ಇದಾಗಿತ್ತು. ಬಹುಮತದೊಂದಿಗೆ ಜಗದೀಶಗೌಡ ಪಾಟೀಲ ಇವರ ಗುಂಪು ಮತ್ತೆ ಸಂಘದ ಚುಕ್ಕಾಣೆ ಹಿಡಿದಿರುವದು ಎಲ್ಲ ನೌಕರ ಬಾಂದವರಲ್ಲಿ ಸಂತೋಷವನ್ನುಂಟುಮಾಡಿದೆ.//

Read Belgaum News & Updates for What’s Happening in Around You @ in News Belgaum Kannada News Portal.