“ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ” “ಜನಸಂಖ್ಯಾ ಪ್ರಮಾಣ ನಿಯಂತ್ರಸದಿದ್ದಲ್ಲಿ ಸಮಸ್ಯೆ ಉಲ್ಬಣ” – ಡಾ.ರಾಜೇಂದ್ರ ಕೆ.ವಿ

news belagavi

ಬೆಳಗಾವಿ – 11 ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕು ಕ ಇಲಾಖೆ ಬೆಳಗಾವಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿ, ನೆಹರು ಯುವÀ ಕೇಂದ್ರ, ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರತೇಶ ಶಿಕ್ಷಣ ಸಂಸ್ಥೆ, ಭಾರತೀಯ ಕುಟುಂಬ ಯೋಜನಾ ಸಂಘ, ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಜಿಲ್ಲಾ ಮಟ್ಟದ ಸಮಾರಂಭ ಹಾಗೂ ಜಾಥಾ ಕಾರ್ಯಕ್ರಮ ಜರುಗಿತು.

ಜಾಥಾ ಕಾರ್ಯಕ್ರಮ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಪ್ರಾರಂಭವಾಯಿತು. ಶ್ರೀ.ಪಿ.ಎ.ಮೇಘಣ್ಣವರ ಮಾನ್ಯ ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗ ಬೆಳಗಾವಿ ಹಾಗೂ ಡಾ.ಎಸ್.ಬಿ ಬೊಮ್ಮನಹಳ್ಳಿ ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ ಇವರು ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ.ಅಪ್ಪಾಸಾಹೇಬ ನರಟ್ಟಿ ಉಪನಿರ್ದೇಶಕರು ಆರೋಗ್ಯ ಮತ್ತು ಕು.ಕ ಸೇವೆಗಳು ಬೆಳಗಾವಿ ವಿಭಾಗ ಬೆಳಗಾವಿ, ಡಾ. ಶಶಿಕಾಂತ ವ್ಹಿ ಮುನ್ಯಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ಡಾ.ಶೈಲಜಾ ತಮ್ಮಣ್ಣವರ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಚಿಕ್ಕೋಡಿ, ಡಾ.ಎಮ್.ಎಸ್.ಪಲ್ಲೇದ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳು, ಡಾ.ಅನಿಲ ಕೊರಬು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಬೆಳಗಾವಿ ಡಾ: ಸಾವಿತ್ರಿ ಬೆಂಡಿಗೇರಿ, ಜಿಲ್ಲಾ ಕು.ಕ.ಅಧಿಕಾರಿಗಳು, ಡಾ: ಸಂಜಯ ಡುಮ್ಮಗೋಳ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿ, ಡಾ: ಸಂಜೀವ ನಾಂದ್ರೆ, ತಾಲೂಕಾ ಆರೋಗ್ಯಾಧಿಕಾರಿಗಳು, ಖಾನಾಪೂರ ಹಾಗೂ ಶ್ರೀ ನಧಾಪ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೆಳಗಾವಿ ನಗರ ಇವರು ಉಪಸ್ಥಿತರಿದ್ದರು.

ಜಾಥಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ನರ್ಸಿಂಗ ಕಾಲೇಜಿನ ವಿಧ್ಯಾರ್ಥಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂಧಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಘೋಷಣೆಗಳನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸುತ್ತಾ ಜನಸಂಖ್ಯಾ ಹೆಚ್ಚಳದಿಂದಾಗುವ ದುಷ್ಟÀರಿಣಾಮಗಳ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಕೊನೆಗೆ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿಯ ಆವರಣದಲ್ಲಿ ಜಾಥಾ ಕೊನೆಗೊಂಡಿತು.

ಪ್ರಧಾನ ಸಮಾರಂಭ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿಯಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ರಾಜೇಂದ್ರ ಕೆ. ವಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ ಇವರು ಉದ್ಘಾಟಿಸಿ ಮಾತನಾಡುತ್ತಾ ಜನಸಂಖ್ಯೆ ಹೆಚ್ಚಳದಿಂದ ಆಹಾರ, ನೀರು, ಬಟ್ಟೆ ನೆಲ, ವಸತಿ ಹಾಗೂ ಖನಿಜಗಳ ಕೊರತೆ ಉಂಟಾಗುತ್ತದೆ. ಅಲ್ಲದೇ ಅರಣ್ಯ ನಾಶ ನೀರುದ್ಯೋಗ, ಬಡತನ ವಾಯು, ಜಲ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ತಿಳಿಸಿ ಜನಸಂಖ್ಯಾ ಸ್ಥೀರೀಕರಣದ ಅಗತ್ಯತೆ ಕುರಿತು ಮಾತನಾಡಿದರು. ಅವರು ಮುಂದುವರೆದು ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಹಲಾವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಂಡು ಜನಸಂಖ್ಯಾ ನಿಯಂತ್ರಣದತ್ತ ಗಮನಹರಿಸಬೇಕೆಂದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನಿರ್ವಹಿಸುವಂತೆ ಸೂಚಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಶ್ರೀಮತಿ ವಸಂತಗೀತಾ ಹೀರೆಮಠ ಪ್ರಾಂಶುಪಾಲರು ಕರ್ನಾಟಕ ಇನಸ್ಟಿಟೂಟ ಆಪ್ ಕೋ ಆಪರೆಟೀವ ಮ್ಯಾನೆಜಮೆಂಟ ಬೆಳಗಾವಿ ಇವರು ತಮ್ಮ ಉಪನ್ಯಾಸದಲ್ಲಿ ಜನಸಂಖ್ಯಾ ಹೆಚ್ಚಳದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಈಗ ಮದುವೆಗೆ ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ 18 ವರ್ಷ ತುಂಬಿರಬೇಕು ಎಂಬ ಕಾನೂನು ಇದ್ದು ಈ ವಯಸ್ಸನ್ನು ಇನಷ್ಟು ಹೆಚ್ಚಿಸುವ ಅವಶ್ಯಕತೆ ಇದೆÉ್ಪಂದು ಅಭಿಪ್ರಾಯಪಟ್ಟರು ಆಹಾರ ಉತ್ಪಾದನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾದರೂ ಮಿತಿಮೀರಿ ಬೆಳೆದ ಜನಸಂಖ್ಯೆ ಪ್ರಮಾಣದಂತೆ ಹೆಚ್ಚಾಗಿಲ್ಲ. ಇದನ್ನೆಲ್ಲ ಗಮನಿಸಿ ಜನಸಂಖ್ಯೆ ಅತ್ಯಂತ ಘೋರ ಸಮಸ್ಯೆ ಎಂದು ಪರಿಗಣಿಸಲಾಗುತ್ತಿದೆ. ಜನಸಂಖ್ಯಾ ನಿಯಂತ್ರಣÀಕ್ಕೆ ಸರ್ಕಾರದಿಂದ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಿರಂತರವಾಗಿ ಏರುತ್ತಿರುವ ಜನನ ಪ್ರಮಾಣ ಸಣ್ಣ ವಯಸ್ಸಿನಲ್ಲಿ ವಿವಾಹ ಮಾಡುವುದು, ಜನರಿಗೆ ಸೂಕ್ತ ಶಿಕ್ಷಣವಿಲ್ಲದಿರುವುದು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿ, ಭಾರತ ದೇಶ ಆರ್ಥಿಕತೆವಾಗಿ ಸಾಕಷ್ಟು ಪ್ರಗತಿ ಹೊಂದಿದ್ದರೂ ಕಡಾ ಜನಸಂಖ್ಯಾ ಹೆಚ್ಚಳದಿಂದ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗೀಯೇ ಉಳಿದಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಅರುಣ ಕಟಾಂಬಳೆ ಮಾನ್ಯ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ ಬೆಳಗಾವಿ ಇವರು ಮಾತನಾಡುತ್ತಾ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಅತೀ ಅವಶ್ಯವಿದ್ದು, ಸರ್ಕಾರದ ಎಲ್ಲ ಯೋಜನೆಗಳ ಜನಸಾಮಾನ್ಯರಿಗೆ ತಲುಪÀಬೇಕಾದರೆ ಜನಸಂಖ್ಯೆ ನಿಯಂತ್ರಣ ಮಾಡುವುದು ಅವಶ್ಯಕವೆಂದರು.
ವೇದಿಕೆಯ ಮೇಲೆ ಡಾ.ಅಪ್ಪಾಸಾಹೇಬ ನರಟ್ಟಿ ವಿಭಾಗೀಯ ಉಪ ನಿರ್ಧೇಶಕರು ಆರೋಗ್ಯ ಮತ್ತು ಕು.ಕ ಸೇವೆಗಳು ಬೆಳಗಾವಿ ವಿಭಾಗ ಬೆಳಗಾವಿ, ಡಾ, ಎಸ.ಟಿ ಕಳಸದ ನಿರ್ದೇಶಕರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ, ಡಾ.ಹುಸೇನಸಾಹೇಬ ಖಾಜಿ ಜಿಲ್ಲಾ ಶಸ್ತ್ರಚಿಕಿತ್ಸಕರು ಬಿಮ್ಸ್ ಬೆಳಗಾವಿ, ಡಾ.ಚಾಂದನಿ ದೇವಡಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಬೆಳಗಾವಿ, ಡಾ.ಅನಿಲ ಕೊರಬು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಬೆಳಗಾವಿ, ಡಾ: ಸಂಜಯ ಡುಮ್ಮಗೋಳ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿ, ಡಾ: ಸಂಜೀವ ನಾಂದ್ರೆ, ತಾಲೂಕಾ ಆರೋಗ್ಯಾಧಿಕಾರಿಗಳು, ಖಾನಾಪೂರ ಉಪಸ್ಥಿತರಿದರು.
2018-19 ನೇ ಸಾಲಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಅದ್ವಿತಿಯ ಸಾಧನೆಗೈದ 1) ಡಾ|| ಲಕ್ಷ್ಮಿ ಕೆ.ಎಸ್. ಬಿಮ್ಸ ಆಸ್ಪತ್ರೆ ಬೆಳಗಾವಿ, 2) ಡಾ|| ರಮೇಶ ದಂಡಗಿ, ವೈದ್ಯಾಧಿಕಾರಿಗಳು, ಪ್ರಾ.ಆ.ಕೇಂದ್ರ ಯಳ್ಳೂರು, 3) ಡಾ|| ಸೌಮ್ಯ ಸಜ್ಜನ ಸಮುದಾಯ ಆರೋಗ್ಯ ಕೇಂದ್ರ ಅಮ್ಮಣಗಿ, 4) ಶ್ರೀ ಶಂಕರಗೌಡ ಎಸ್. ಪಾಟೀಲ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ರಾಯಬಾಗ, 5) ಶ್ರೀ ಎಚ್.ಎ. ಕುಂಬಾರ ಹಿ.ಪು.ಆ.ಸ ಪ್ರಾ.ಆ.ಕೇಂದ್ರ ಸುರೇಬಾನ, 6) ಶ್ರೀಮತಿ ಅತ್ತು ಎಸ್.ಎಮ್ ಆರೋಗ್ಯ ಮೇಲ್ವಿಚಾರಕಿ ಸಮುದಾಯ ಆರೋಗ್ಯ ಕೇಂದ್ರ ಮೂಡಲಗಿ, 7) ಶ್ರೀ ಎಮ್.ಜಿ.ನಾಯಕ ಆರೋಗ್ಯ ಮೇಲ್ವಿಚಾರಕ, ಸಮುದಾಯ ಆರೋಗ್ಯ ಕೇಂದ್ರ ಯರಗಟ್ಟಿ, ಶ್ರೀಮತಿ ಪುಷ್ಪಾ ಬಾಳಿಕಾಯಿ ಶುಶ್ರೂಷಕಿ ಬಿಮ್ಸ ಆಸ್ಪತ್ರೆ ಬೆಳಗಾವಿ, 8) ಶ್ರೀಮತಿ ನಾಗರತ್ನ ಪಾಟೀಲ ಶುಶ್ರೂಷಕಿ ಸಾರ್ವಜನಿಕ ಆಸ್ಪತ್ರೆ ಬೈಲಹೊಂಗಲ, 9) ಶ್ರೀಮತಿ ವಾಯ್.ಪಿ. ಉಪಾಸೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಾ.ಆ.ಕೇಂದ್ರ ಪಾರಿಶ್ವಾಡ, 10) ಶ್ರೀಮತಿ ಶಿವಕ್ಕ ಬಾಣಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಾ.ಆ.ಕೇಂದ್ರ ಅರ್ಜುನವಾಡ, 11) ಶ್ರೀ ಎನ್. ಗೋಟ್ಯಾಳ ಕಿರಿಯ ಪುರುಷ ಆರೋಗ್ಯ ಸಹಾಯಕ. ಪ್ರಾ.ಆ.ಕೇಂದ್ರ ತಂಗಡಿ, 13) ಕು.ಸವಿತಾ ಹದಗಲ್ ಆರೋಗ್ಯ ಸಹಾಯಕಿ ಪ್ರಾ.ಆ.ಕೇಂದ್ರ ಮಾಂಜರಿ, 14) ಶ್ರೀಮತಿ ಮುಕ್ತಾ ಬೆಳಹಾಳ ಆಶಾ ಕಾರ್ಯಕರ್ತೆ ನಗರ ಪ್ರಾ.ಆ.ಕೇಂದ್ರ ವಡಗಾಂವ ಇವರನ್ನು ಅಭಿನಂದನಾ ಪತ್ರ ನೀಡಿ ಸತ್ಕರಿಸಲಾಯಿತು.
ಪ್ರಾರಂಭದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಡಾ||ಶಶಿಕಾಂತ ವ್ಹಿ ಮುನ್ಯಾಳ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಬೆ ಬೆಳಗಾವಿ ಇವರು ಎಲ್ಲರಿಗೂ ಸ್ವಾಗತ ಕೋರಿ ಜನಸಂಖ್ಯೆ ದಿನಾಚರಣೆ ಕುರಿತು ಮಾತನಾಡಿದರು. ಡಾ: ಸಾವಿತ್ರಿ ಬೆಂಡಿಗೇರಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು “ಕುಟುಂಬಕಲ್ಯಾಣ ನಿಭಾಯಿಸುವ ಜವಾಬ್ದಾರಿ ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ” ಘೋಷಣೆಯ ಮೇಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಸಿ.ಜಿ. ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು. ಡಾ.ಸಂಜಯ ಡುಮ್ಮಗೋಳ ತಾಲೂಕಾ ಆರೋಗ್ಯಾಧಿಕಾರಿಗಳು ವಂದಿಸಿದರು. ಶ್ರೀ ಬಿ.ಪಿ.ಯಲಿಗಾರ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮ ಸಂಘಟಿಸಿದರು.

Read Belgaum News & Updates for What’s Happening in Around You @ in News Belgaum Kannada News Portal.