ಮಾಜಿ ಶಾಸಕ ಕೆ.ಎನ್. ರಾಜಣ್ಣನವರ ವಿರುದ್ದ ಹೈಕಮಾಂಡ ಕ್ರಮಕ್ಕೆ ರಾಜ್ಯ ಎಸ್ ಸಿ ಘಟಕ ಆಗ್ರಹ

news belagavi

ಬೆಳಗಾವಿ:- ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರವರು ಕಾಂಗ್ರೇಸ್ ಪಕ್ಷದಲ್ಲಿ ದಾಖಲೆ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದು ಪಕ್ಷ ಸಂಘಟನೆಯನ್ನು ಬೇರು ಮಟ್ಟದಿಂದ ಪಕ್ಷ ಕಟ್ಟಿ ಅಧಿಕಾರ ಹಿಡಿಯಲ್ಲಿಕ್ಕೆ ಕಾರಣರಾದವರು.

ಲೋಕಸಭಾ ಚುನಾವಣೆ ಪಲಿತಾಂಶದ ನಂತರ ಜಿ. ಪರಮೇಶ್ವರ ತವರು ಜಿಲ್ಲೆಯ ತುಮಕೂರಿನಲ್ಲಿ ಡಾ. ಜಿ. ಪರಮೇಶ್ವರರವನ್ನು ಕಾಂಗ್ರೇಸ್ ಪಕ್ಷದಿಂದ ಹೊರಹಾಕಿ ಕಾಂಗ್ರೇಸ ಪಕ್ಷ ಉಳಿಸಿ ಎಂಬ ಬಿತ್ತಿಪತ್ರವನ್ನು ಪ್ರಕಟಿಸಿ ಅಂಟಿಸಿದ ವ್ಯಕ್ತಿ ಶಕ್ತಿ ಯಾವುದೇಂದು ಹುಡುಕಾಡಿ ಇದಕ್ಕೆ ತುಮಕೂರು ಜಿಲ್ಲೆಯ ಮದುಗಿರಿ ವಿಧಾನಸಭಾ ಕ್ಷೇತ್ರದ ಪರಾರ್ಜಿತ ಅಭ್ಯರ್ಥಿ ಮತ್ತು ಮಾಜಿ ಶಾಸಕರಾದ ಕೆ.ಎನ್. ರಾಜಣ್ಣನವರು

ತುಮಕೂರು ಜಿಲ್ಲಾ ಕಾಂಗ್ರೇಸ್ ಸಮಿತಿಗೆ ಹೋಗಿ ಅಲ್ಲದೇ ಜಿಲ್ಲಾಧ್ಯಕ್ಷ ಶ್ರೀ ರಾಮಕೃಷ್ಣ ಎ ರಾಮಕೃಷ್ಣ ಯಾವನೋ ಅವನು ಜೀರೋ ಟ್ರಾಪಿಕ್ ಜಿ. ಪರಮೇಶ್ವರ ಅಂತ ಬಾಯಿಂಗ ಬಂದದ್ದು ಬೈದು ಮತ್ತು ನೀನು ನನ್ನ ವಿರುದ್ದ ಪ್ರತಿಭಟನೆ ಮಾಡುತ್ತೀಯಾ ಅಂತಾ ಬೈದು ಜಿಲ್ಲಾಧ್ಯಕ್ಷ ಮತ್ತು ರಾಜ್ಯದ ಉಪಮುಖ್ಯಂತ್ರಿಗಳಾದ ಡಾ. ಜಿ.ಪರಮೇಶ್ವರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಾಂಗ್ರೇಸ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ.

ಆದ್ದರಿಂದ ತಾವು ಶ್ರೀ ಕೆ.ಎನ್. ರಾಜಣ್ಣನವರ ಈ ವರ್ತನೆಯನ್ನು ಕೆಪಿಸಿಸಿ ಪರಿಶಿಷ್ಟ ಜಾತಿ ಇಲಾಖೆಯು ತೀವ್ರವಾಗಿ ಖಂಡಿಸುತ್ತದೆ. ಕಾಂಗ್ರೇಸ ಹೈಕಮಾಂಡ ಇವರನ್ನು ಪಕ್ಷದಿಂದ ಉಚ್ಚಾಟಿಸಿ ಶಿಸ್ತು ಕಾಪಾಡಿಕೊಳ್ಳಬೇಕೆಂದು ಕೆಪಿಸಿಸಿ ಎಸ್.ಸಿ.ಘಟಕದ ರಾಜ್ಯ ಸಂಚಾಲಕ ಗಜು ಧರನಾಯಿಕ, ಪ್ರಚಾರ ಸಮಿತಿ ಅಧ್ಯಕ್ಷ ಸದಾ ಕೋಲಕಾರ, ಕೆಪಿಸಿಸಿ ಸದಸ್ಯ ಪರಶುರಾಮ ವಗ್ಗನ್ನವರ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read Belgaum News & Updates for What’s Happening in Around You @ in News Belgaum Kannada News Portal.