ರಮೇಶ್​ ಜಾರಕಿಹೊಳಿ, ಮಹೇಶ್​​ ಕುಮಟಳ್ಳಿ ಅನರ್ಹ ಮಾಡುವಂತೆ ಸ್ಪೀಕರ್​ಗೆ ಸಿದ್ದರಾಮಯ್ಯ ಮನವಿ

news belagavi

ಬೆಂಗಳೂರು: ರಾಜೀನಾಮೆ ನೀಡಿರೋ ಶಾಸಕ ರಮೇಶ್​​ ಜಾರಕಿಹೊಳಿ ಹಾಗೂ ಮಹೇಶ್​ ಕುಮಟಳ್ಳಿಯನ್ನ ಅನರ್ಹಗೊಳಿಸುವಂತೆ ಸ್ಪೀಕರ್​ ರಮೇಶ್​​ ಕುಮಾರ್​ಗೆ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲು ರಮೇಶ್​ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಗಿತ್ತು. ಬಳಿಕ ಅತೃಪ್ತರ ಮನವೊಲಿಸಲು ರಮೇಶ್​ ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡಿತ್ತು.

ಆಗಿನಿಂದಲೂ ಪಕ್ಷ ಬಿಡುವ ಹಾಗೂ ಬಿಜೆಪಿಗೆ ಹೋಗುವ ವಿಫಲ ಯತ್ನವನ್ನೂ ಮಾಡಿದ್ರು. ಅವರಜೊತೆಗೆ ಮಹೇಶ್​ ಕುಮಟಳ್ಳಿಯೂ ಸಹಾ ಗುರುತಿಸಿಕೊಂಡಿದ್ರು.

ಈ ಹಿನ್ನೆಲೆ ಹಾಗೂ ಇಂದಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದ ಸಿದ್ದರಾಮಯ್ಯ ಇಬ್ಬರನ್ನು ಅನರ್ಹಗೊಳಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.///

ಕಮಠಳ್ಳಿ ರಾಜೀನಾಮೆ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇಲ್ಲ ಸ್ವಾರ್ಥತೆ ಎಂದ ಜನ

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಜೀನಾಮೆ ನೀಡುವಂತಹ ಯಾವುದೆ ಕಾರಣ ಇಲ್ಲಾ ಇದು ಅಥಣಿ ಕ್ಷೇತ್ರದ 82 ಸಾವಿರಕ್ಕೂ ಅಧಿಕ ಮತದಾರರಿಗೆ ಮಾಡುತ್ತಿರುವ ಮೋಸ ಎಂದು ಅಥಣಿ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳ ಸಭೇಯಲ್ಲಿ ಕಾಯ೯ಕತ೯ರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾಯ೯ಕತ೯ರು ಮಹೇಶ ಕುಮಠಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜಿನಾಮೆ ನೀಡಿದ್ದೆನೆ ಎಂದು ಹೇಳಿದ್ದು ಅದು ಶುದ್ದ ಸುಳ್ಳು. ಮೂರು ತಿಂಗಳ ಹಿಂದೆ ಕೃಷ್ಣಾ ನದಿ ಬತ್ತಿ ಕ್ಷೇತ್ರದ ಜನ ನೀರಿಗಾಗಿ ಹಾಹಾಕಾರ ಉಂಟಾದಾಗ ಯಾಕೆ ರಾಜಿನಾಮೆ ನೀಡಲಿಲ್ಲ ಎಂದು ಪಕ್ಷದ ಮುಖಂಡರು ಪ್ರಶ್ನಿಸಿದರು. ಮಾಜಿ ಶಾಸಕ ಶಹಜಾಹನ ಡೊಂಗರಗಾಂವ ಅವರ ನೇತೃತ್ವದಲ್ಲಿ ಅವರ ನೀವಾಸದಲ್ಲಿಂದು ಅಥಣಿ ಕಾಂಗ್ರೆಸ್‌ ಕಾಯ೯ಕತ೯ರ ಸಭೆ ನಡೇಯಿತು.

ಶಾಸಕ ಮಹೇಶ್ ಕುಮಠಳ್ಳಿ ರಾಜಿನಾಮೆ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಗೊಂಡಿದ್ದು ಪಕ್ಷಕ್ಕೆ ಮತ್ತು ಕ್ಷೇತ್ರದ ಜನತೆಗೆ ಯಾವುದೆ ಕಾರಣಕ್ಕೂ ನಾನು ರಾಜಿನಾಮೆ ನೀಡುವುದಿಲ್ಲ ಎಂದು ನಂಬಿಸಿ ಕ್ಷೇತ್ರದ ಜನತೆಗೆ ಮಂಕುಬೂದಿ ಎರಚಿದ್ದಾರೆ ಎಂದು ಬಹುತೇಕ ಕಾಯ೯ಕತ೯ರು ಆಕ್ರೋಶ ವ್ಯಕ್ತಪಡಿಸಿ ಮಹೇಶ ಕುಮಠಳ್ಳಿಗೆ ಧಿಕ್ಕಾರ ಎಂದು ಕೂಗಿದರು. ಸಭೆಯಲ್ಲಿ ಅಂತಿಮವಾಗಿ ಮಹೇಶ್ ಕುಮಠಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವದನ್ನು ಖಂಡಿಸಿ ಇದೆ
12 ರಂದು ಮಹೇಶ ಕುಮಠಳ್ಳಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಪಕ್ಷ ತಿಮಾ೯ನಿಸಿದೆ.///

 

Read Belgaum News & Updates for What’s Happening in Around You @ in News Belgaum Kannada News Portal.