ಕನ್ನಡ ಅನುಷ್ಠಾನ ಮರೆತ ಸುಳಗಾ ಪಿಡಿಓ ಸಸ್ಪೆಂಡ್ ಗೆ ಡಿಸಿ ಆದೇಶ

news belagavi

ಬೆಳಗಾವಿ: ಕನ್ನಡ ಅನುಷ್ಠಾನದಲ್ಲಿ ವಿಳಂಬ ತೋರಿದ ಸುಳಗಾ ಪಿಡಿಓ ಅವರನ್ನು ತತಕ್ಷಣ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಜಿಪಂ.ಗೆ ಸೂಚಿಸಿದ್ದಾರೆ. ಗ್ರಾ. ಪಂ. ತನ್ನ ವ್ಯವಹಾರದ ರಸೀದಿಗಳನ್ನು ಕನ್ನಡ ಹೊರತಾದ ಅನ್ಯ ಭಾಷೆ ಬಳಕೆ ಮಾಡಿ ಮುದ್ರಣ ಮಾಡುತ್ತಿರುವ ಬಗ್ಗೆ ಕನ್ನಡ ಅನುಷ್ಠಾನ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ರಸೀದಿ ಡಿಸಿ ಎದರು ಹಾಜರು ಪಡಿಸಿ ಪ್ರದರ್ಶಿಸಿದರು. ಕನ್ನಡ ಅನುಷ್ಠಾನದಲ್ಲಿ ದುರ್ಲಕ್ಷ್ಯ ಆರೋಪದಲ್ಲಿ ಅಮಾನತು ಮಾಡುವಂತೆ ಜಿಪಂ. ಉಪಕಾರ್ಯದರ್ಶಿಗೆ ಡಿಸಿ ಸೂಚಿಸಿದರು.

ಟ್ರೇಡ್ ಲೈಸನ್ಸ್ ಸಸ್ಪೆಂಡ್ ಮಾಡಿ:ಕನ್ನಡ ಪ್ರಧಾನವಾಗಿ ನಾಮಫಲಕ ಬರೆಯಿಸದಿರುವ ಅಂಗಡಿಕಾರರ ಟ್ರೇಡ್ ಲೈಸನ್ಸ್ ಸಸ್ಪೆಂಡ್ ಮಾಡುವಂತೆ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ. ಸರಕಾರದ ಎಲ್ಲ ಇಲಾಖೆಗಳ ನಾಮಫಲಕ ಮತ್ತು ಎಲ್ಲ ಪತ್ರ ವ್ಯವಹಾರಗಳನ್ನು ಕನ್ನಡದಲ್ಲೇ ಮಾಡಬೇಕು ಎಂದು ಡಿಸಿ ಸೂಚಿಸಿದರು. ಕೇಂದ್ರ ಸರಕಾರದ ಕಮ್ಯೂನಿಕೇಷನ್ ಹೊರತುಪಡಿಸಿ ಎಲ್ಲವೂ ಕನ್ನಡದಲ್ಲಿ ಇರಬೇಕು ಎಂದರು.

ಜಾರ್ಖಂಡ್ ಮಾದರಿ:ಜಾರ್ಖಂಡ್, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಇತರ ರಾಜ್ಯಗಳು ತಮ್ಮದೇ ಮಾತೃ ಭಾಷೆಯಲ್ಲಿ ಕಚೇರಿ ಪತ್ರ ವ್ಯವಹಾರ ಮಾಡಲು ಕಟಿಬದ್ಧರಾಗಿದ್ದಾರೆ ಎಂಬುವುದನ್ನು ಇತ್ತೀಚಿನ ಅವರ ಜಾರ್ಖಂಡ್ ಭೇಟಿ ವೇಳೆಯ ಅನುಭವ ಡಿಸಿ ಹಂಚಿಕೊಂಡರು.
ನಿಪ್ಪಾಣಿ:ನಿಪ್ಪಾಣಿ ನಗರಸಭೆ ಸಂಪೂರ್ಣ ಕನ್ನಡಮಯ ಮಾಡಬೇಕು ಎಂದು ಡಿಸಿ ಚಿಕ್ಕೋಡಿ ಎಸಿಗೆ ಸೂಚಿಸಿದ್ದಾರೆ. ನಿಪ್ಪಾಣಿ ನಗರದಾದ್ಯಂತ ಎಲ್ಲ ಅಂಗಡಿ ಮುಂಗಟ್ಟುಗಳು ಕನ್ನಡ ಪ್ರಧಾನ ಬಳಸುವಂತೆ ಬಳಕೆಗೆ ತರುವಂತೆ ಮಾಡಲು ಡಿಸಿ ಅಧಿಕಾರಿಗಳಿಗೆ ಸೂಚಿಸಿದರು. ಕಮಿಷ್ನರ್ ಬಿ. ಎಸ್. ಲೊಕೇಶಕುಮಾರ, ಪಾಲಿಕೆ ಕಮಿಷ್ನರ್ ಅಶೋಕ ದುಡಗುಂಟಿ, ಎಡಿಸಿ ಎಚ್. ಬಿ. ಬೂದೆಪ್ಪ, ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾದ ಅನಂತಕುಮಾರ ಬ್ಯಾಕೂಡ, ಸಿದ್ದನಗೌಡ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.////

Read Belgaum News & Updates for What’s Happening in Around You @ in News Belgaum Kannada News Portal.