ರೈಲಿನಲ್ಲಿ ಕದಿಯುತ್ತಿದ್ದ ಕಳ್ಳರ ಬಂಧನ

news belagavi

ಬೆಳಗಾವಿ: ರೈಲಿನಲ್ಲಿ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ರೈಲ್ವೇ ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತಃ ಘಟಪ್ರಭಾದ ಹಾಕಿ ಬೆಂಗಳೂರು ನಿವಾಸಿ ಮಾರುತಿ ಭಜಂತ್ರಿ(೨೪) ಹಾಗೂ ಇನ್ನೊಬ್ಬ ಬೆಂಗಳೂರು ನಿವಾಸಿ ಹುಕುಂಸಿಂಗ್ ಚರಣಸಿಂಗ್ ರಾಣಾ(೨೧) ಎಂಬಿಬ್ಬರನ್ನು ಪೊಲೀಸ್ ತಪಾಸಣಾ ತಂಡ ವಶಕ್ಕೆ ಪಡೆದಿದೆ.

ಸಹ ಪ್ರಯಾಣಿಕರಂತೆ ನಟಿಸಿ ಮೊಬೈಲ್, ಹಣ ಹಾಗೂ ಬೆಕೆಬಾಳುವ ವಸ್ತು ಕದಿಯುತ್ತಿದ್ದರು. 39ಮೊಬೈಲ್, ₹38ಸಾವಿರ ಬೆಲೆಯ 11ಗ್ರಾಂ. ಮಂಗಲಸೂತ್ರ ವಶಪಡಿಸಿಕೊಂಡಿದ್ದು ಒಟ್ಟು ಮೌಲ್ಯ ₹ 2.70ಲಕ್ಷವಾಗಿದೆ.
ಇನ್ಸಪೆಕ್ಟರ್ ರಮೇಶ ಕಾಂಬಳೆ, ಪಿಎಸ್ಐ ರಮೇಶ. ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

Read Belgaum News & Updates for What’s Happening in Around You @ in News Belgaum Kannada News Portal.