ಓಸಿ ಆಡುವವರ ಮೇಲೆ ದಾಳಿ; ಇಬ್ಬರ ಬಂಧನ; ರೂ.15,425/- ಜಪ್ತ

news belagavi

ಬೆಳಗಾವಿ . ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ವಿಭಾಗ ಮತ್ತು ಅವರ ತಂಡದಿಂದ ಓಸಿ ಆಡುವವರ ಮೇಲೆ ದಾಳಿ; ಇಬ್ಬರ ಬಂಧನ; ರೂ.15,425/- ಜಪ್ತ

ದಿನಾಂಕ: 11/06/2019 ರಂದು ಸಾಯಂಕಾಲ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಅಷ್ಟೆ ಗ್ರಾಮದ ಜನತಾ ಪ್ಲಾಟ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ತಮ್ಮ ಸ್ವಂತ ಲಾಭಕ್ಕೋಸ್ಕರ ಮುಂಬೈ-ಕಲ್ಯಾಣ ಓ.ಸಿ ಮಟಕಾ ಎಂಬ ಜುಗಾರ ಆಟದ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಓ.ಸಿ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು ಜುಗಾರ ಆಟ ಆಡುತ್ತಿರುವುದಾಗಿ ಶ್ರೀ. ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ,

ಬೆಳಗಾವಿ ನಗರ ರವರಿಗೆ ಬಂದ ಮಾಹಿತಿಯಂತೆ ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ಸಿಬ್ಬಂದಿ ಐ.ಎಸ್ ಪಾಟೀಲ, ಎ.ಎಲ್ ಪಾಟೀಲ, ಎಸ್.ಬಿ ಪಾಟೀಲ, ಸುನೀಲ ಬಾಗಲಕೋಟ ಮತ್ತು ಜಿ.ಎಸ್ ನಾಡಗೌಡ ರವರೊಂದಿಗೆ ದಾಳಿ ಮಾಡಿ ಓ.ಸಿ ಆಟದಲ್ಲಿ ತೊಡಗಿದ್ದ 1] ಅಶೋಕ ಶಿವಾಜಿ ನಾಯ್ಕ ವಯಸ್ಸು: 34 ವರ್ಷ ಸಾ: ಮನೆ ನಂ.56, ಶಿವಾಜಿ ಗಲ್ಲಿ, ಅಷ್ಟೆ 2] ಲಕ್ಷ್ಮಣ ಕಲ್ಲಪ್ಪ ಮೋದಗೆ ವಯಸ್ಸು: 60 ವರ್ಷ ಸಾ: ಸುಭಾಷ ಗಲ್ಲಿ, ಅಷ್ಟೆ ಎಂಬುವವರನ್ನು ವಶಕ್ಕೆ ಪಡೆದುಕೊಂಡು ರೂ.15425/- ಹಣ ಹಾಗೂ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿರುತ್ತಾರೆ///

Read Belgaum News & Updates for What’s Happening in Around You @ in News Belgaum Kannada News Portal.