ಇಂಗ್ಲೀಷ್ ಲೋನ್ ಅಗ್ರಿಮೆಂಟ್ ಪತ್ರಕ್ಕೆ ಪಡೆದ ಸಹಿಯ ಅನಾಹುತಕ್ಕೆ ಬ್ಯಾಂಕಗಳೇ ಹೊಣೆ

news belagavi

ಬೆಳಗಾವಿ: ಪಾಸಬುಕ್, ಲೋನ್ ಅರ್ಜಿ, ರಸೀಟಿ, ಲೋನ್ ಅಗ್ರಿಮೆಂಟ್ ಸೇರಿ ಎಲ್ಲ ಬ್ಯಾಂಕಿಂಗ್ ವ್ಯವಹಾರದ ಪತ್ರಗಳು, ಬರವಣಿಗೆಗಳು ಕನ್ನಡದಲ್ಲೇ ಇರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಕನ್ನಡ ಅನುಷ್ಠಾನ ಸಭೆಯಲ್ಲಿ ಮಾತನಾಡಿ ಯಾವುದೇ ಬ್ಯಾಂಕ್, ಫೈನಾನ್ಸ್ ಗಳು ಇಂಗ್ಲೀಷ್ ಭಾಷೆಯ ರಸೀದಿ, ಅಗ್ರಿಮೆಂಟ್ ರಸೀದಿ ಪತ್ರಗಳಲ್ಲಿ ರೈತರು ಹಾಗೂ ಜನತೆಯ ಸಹಿ ಮಾಡಿಸಿಕೊಂಡು ಆ ನಂತರ ಕಾನೂನು ತೊಡಕು ಬಂದರೆ ಅದಕ್ಕೆ ಬ್ಯಾಂಕಗಳನ್ನೇ ಜವಾಬ್ದಾರಿ ಮಾಡಲಾಗುವುದು ಹೊರತು ರೈತರನ್ನಲ್ಲ.

ಇಂಗ್ಲೀಷ್ ತಿಳಿಯದ ರೈತರಿಂದ ಲೋನ್ ಮತ್ತಿತರ ಅಗ್ರಿಮೆಂಟ್ಳಿಗೆ ಸಹಿ ಪಡೆಯುವ ಬ್ಯಾಂಕಗಳು ಲೋನ್ ಪಡೆದವರನ್ನು ಕತ್ತಲಲ್ಲಿ ಇಡುತ್ತಿವೆ ಎಂದು ಡಿಸಿ ಅಸಮಾದಾನ ವ್ಯಕ್ತಪಡಿಸಿದರು. ಅಗ್ರಿಮೆಂಟ್ ಗಳಿಗೆ ಬ್ಯಾಂಕಗಳು ಇಂಗ್ಲೀಷ್ ಇಲ್ಲವೇ ಹಿಂದಿ ಭಾಷೆ ಅರಿಯದ ಜನತೆ ಮತ್ತು ವಿಶೇಷವಾಗಿ ರೈತರು ಬ್ಯಾಂಕ್ ಅಗ್ರಿಮೆಂಟ್ ಅರ್ಜಿಗಳಿಗೆ ಅರಿಯದೇ ಸಹಿ ಹಾಕಿ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂಬ ಗಂಭೀರ ವಿಚಾರ ಡಿಸಿ ವ್ಯಕ್ತಪಡಿಸಿದರು.

Read Belgaum News & Updates for What’s Happening in Around You @ in News Belgaum Kannada News Portal.