ರನ್ನಿಂಗ್​ ರೇಸ್​ನಲ್ಲಿ ಓಡಿದಂತೆ ಓಡಿ ಸ್ಪೀಕರ್​ ಕಚೇರಿಗೆ ತಲುಪಿದ ಅತೃಪ್ತ ಶಾಸಕರು..!

news belagavi

ಬೆಂಗಳೂರು: ಖಾಸಗೀ ಬಸ್​ನಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಶಾಸಕರು, ಓಡುತ್ತಲೇ ಸ್ಪೀಕರ್​ ಕಚೇರಿಗೆ ತಲುಪಿದರು. ಸುಮಾರು 6.05 ಗಂಟೆಗೆ ಅಂದ್ರೆ ಸುಪ್ರೀಂ ನಿಗದಿ ಮಾಡಿದ್ದ ಸಮಯಕ್ಕಿಂತ 5 ನಿಮಿಷ ತಡವಾಗಿ ಶಾಸಕರು ಸ್ಪೀಕರ್​ ಕಚೇರಿಗೆ ಆಗಮಿಸಿದರು. ಶಾಸಕ ಬೈರತಿ ಬಸವರಾಜು ರನ್ನಿಂಗ್​ ರೇಸ್​ನಲ್ಲಿ ಓಡಿದಂತೆ ಓಡಿ ಕಚೇರಿ ಸೇರಿದರು.

ಸುಪ್ರೀಂಕೋರ್ಟ್​ ಆದೇಶದ ಹಿನ್ನೆಲೆ ಇಂದು ಸಂಜೆ 6 ಗಂಟೆ ಒಳಗೆ ಅತೃಪ್ತರು ಸ್ಪೀಕರ್​ ಮುಂದೆ ಹಾಜಾರಾಗಬೇಕು ಅಂತಾ ಆದೇಶಿಸಿತ್ತು. ಈ ಹಿನ್ನೆಲೆ ಮುಂಬೈನಿಂದ ವಿಶೇಷ ಹೆಲಿಕಾಫ್ಟರ್​ ಮೂಲಕ ಬೆಂಗಳೂರಿಗೆ ಆಗಮಿಸಿ ವಿಧಾನಸಭೆ ಗೇಟ್ ನಿಂದ ಶಾಸಕರು ಓಡೋಡುತ್ತಲೇ ಸ್ಪೀಕರ್​ ಕಚೇರಿ ಒಳಗೆ ಹೋದರು.//

Read Belgaum News & Updates for What’s Happening in Around You @ in News Belgaum Kannada News Portal.