ಕಂಪ್ಲಿ ಶಾಸಕ ಗಣೇಶ ಮುಂಬಯಿನಲ್ಲಿ ಬಂಧನ

news belagavi

ಮುಂಬಯಿ: ಶಾಸಕ ಆನಂದಸಿಂಗ್ ಮೇಲೆ ಜ. 20ರ ರಾತ್ರಿ ಈಗಲ್ಟನ್ ರೆಸಾರ್ಟನಲ್ಲಿ ಹಲ್ಲೆ ಮಾಡಿದ್ದ ಆರೋಪದ ನಂತರ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಕೊನೆಗೂ ಅರೆಸ್ಟ್ ಮುಂಬಯಿನಲ್ಲಿ ಆಗಿದ್ದಾರೆ. ಘಟನೆಯ ನಂತರ ತಲೆ ಮರೆಸಿಕೊಂಡಿದ್ದ ಗಣೇಶ ಬಂಧನಕ್ಕೆ ಒತ್ತಡ ಹೆಚ್ಚಿತ್ತು.

ಈ ನಡುವೆ, ಬುಧವಾರವಷ್ಟೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದರು.

ರಾಮನಗರ ಪೊಲೀಸರು ಶಾಸಕ ಕಂಪ್ಲಿ ಗಣೇಶ ಅವರನ್ನು ಮುಂಬೈನಲ್ಲಿ ಅರೆಸ್ಟ್ ಮಾಡಿದ್ದಾರೆ. ಇಂದು ರಾತ್ರಿ ವೇಳೆಗೆ ಗಣೇಶ್ ಅವರನ್ನು ರಾಮನಗರಕ್ಕೆ ಕರೆತರುವ ಅಂದಾಜಿದ್ದು, ಕೋರ್ಟ್ ಮುಂದೆ ಹಾಜರುಪಡಿಸುತ್ತಾರೆ ಎಂದು ತಿಳಿದುಬಂದಿದೆ. ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಾಸಕ ಗಣೇಶ್ ಬಂಧನಕ್ಕೆ ಒತ್ತಡ ಹೆಚ್ಚಾಗಿತ್ತು.//

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube