ನಗರದಲ್ಲಿ ವಿನಾಕಾರಣ ಕಲ್ಲು ಹೊಡೆದು ಶಾಂತಿ ಕದಡಿ, ರಾತ್ರಿ ವೇಳೆಯಲ್ಲಿ ರಾಬರಿ ಮಾಡಿದ 3 ಕಿಡಿಗೇಡಿಗಳ ಬಂಧನ ಃ

news belagavi

ನಗರದಲ್ಲಿ ವಿನಾಕಾರಣ ಕಲ್ಲು ಹೊಡೆದು ಶಾಂತಿ ಕದಡಿ, ರಾತ್ರಿ ವೇಳೆಯಲ್ಲಿ ರಾಬರಿ ಮಾಡಿದ 3 ಕಿಡಿಗೇಡಿಗಳ ಬಂಧನ ಃ
ದಿನಾಂಕ: 22/02/2019 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಕೆಎಲ್‍ಇ ಹಾಸ್ಪೀಟಲ ಎದುರಿನ ಪಾರ್ಕಿಂಗ ಸ್ಥಳದಲ್ಲಿ ಜಬರಿ ಕಳವು ಮಾಡಿದ್ದಲ್ಲದೇ ಅಲ್ಲಿಂದ ರಾಮದೇವ ಹೊಟೇಲ ಹತ್ತಿರವು ಸಹ ಕಾರಿನವರಿಂದ ಜಬರಿ ಕಳವು ಮಾಡಲು ಪ್ರಯತ್ನಿಸಿದ್ದು ನಂತರ ಹೊಟೇಲ ಸನ್ಮಾನ ಕಾಲೇಜ ರಸ್ತೆ ಬೆಳಗಾವಿ ಹತ್ತಿರ ಟೂರಿಸ್ಟ ಆಪೀಸಿನವರೊಂದಿಗೆ ಜಗಳ ತೆಗೆದು ನಂತರ ಅಶೋಕನಗರದಲ್ಲಿರುವ ಬೆಳಗಾವಿ ಒನ್ ಆಪೀಸ ಹತ್ತಿರ ಪಿರ್ಯಾದಿ ರಜಾಕ

ಹಸನಸಾಬ ಲಾಡಖಾನ ಸಾ: ಇ.ಎಸ್.ಐ ಕ್ವಾಟರ್ಸ ಅಶೋಕನಗರ ಬೆಳಗಾವಿ, ಇವರೊಂದಿಗೆ ಜಗಳ ತೆಗೆದು ಕಲ್ಲನಿಂದ ಹೊಡೆದು ಜಬರಿಯಿಂದ ಮೋಟರ ಸೈಕಲ, ಸ್ಯಾಮಸಂಗ ಮೊಬೈಲ ಹಾಗೂ ಪರ್ಸ ಕಿತ್ತುಕೊಂಡು ಪರಾರಿಯಾಗಲೆತ್ನಿಸುತ್ತಿದ್ದ 1) ಮಹೇಶ ಸಿದ್ರಾಮ ಸುಂಕದ, ವಯಸ್ಸು 20 ವರ್ಷ, ಸಾ: ಶಾಸ್ತ್ರೀನಗರ ಕಂಗ್ರಾಳಿ ಬಿ.ಕೆ, ಬೆಳಗಾವಿ 2) ವಿವೇಕ ಕರೆಪ್ಪಾ ನಾಯಿಕ, ವಯಸ್ಸು 23 ವರ್ಷ, ಸಾ: ಸಂತಾಜಿ ಗಲ್ಲಿ, ಕಂಗ್ರಾಳಿ, ಬಿ.ಕೆ ಬೆಳಗಾವಿ 3) ಕಾರ್ತಿಕ ಜ್ಯೋತಿಬಾ ಪಾಟೀಲ, ವಯಸ್ಸು 19 ವರ್ಷ, ಸಾ: ಶಾಸ್ತ್ರೀನಗರ ಕಂಗ್ರಾಳಿ ಬಿ.ಕೆ, ಬೆಳಗಾವಿ ಇವರನ್ನು ಶ್ರೀ. ಎನ್ ವ್ಹಿ ಭರಮನಿ, ಎ.ಸಿ.ಪಿ ಮಾರ್ಕೆಟ, ರವರ ನೇತೃತ್ವದಲ್ಲಿ ಶ್ರೀ. ಬಿ ಆರ್ ಗಡ್ಡೇಕರ, ಪಿ.ಐ ಮಾಳಮಾರುತಿ ಠಾಣೆ ಆರ್ ಬಿ ಸೌದಾಗರ, ಪಿಎಸ್‍ಐ, ಎ ಆರ್ ದುಂಡಗಿ, ಎ.ಎಸ್.ಐ, ಕೆ ಜಿ ಮುಜಾವರ, ಎಂ ಜೆ ಕುರೇರ, ಡಿ ಸಿ ಸಾಗರ, ಸಿ ಐ ಚಿಗರಿ, ಎಲ್ ಎಂ ಮುಶಾಪೂರೆ ಹಾಗೂ ಮಾರ್ಕೇಟ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ವ್ಹಿ ಡಿ ಬಾಬಾನಗರ,

ಯರಝರ್ವಿ ಹಾಗೂ ಜಮಾದಾರ ಹಾಗೂ ಸಿಬ್ಬಂದಿಯವರು ದಸ್ತಗಿರಿ ಮಾಡಿ ಅವರಿಂದ ಎರಡು ಮೋಟರ ಸೈಕಲ ಹಾಗೂ ಸ್ಯಾಮಸಂಗ ಮೊಬೈಲ ಫೋನ ಹಾಗೂ ಪರ್ಸ ಹೀಗೆ ಒಟ್ಟು 45.230 ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿರುತ್ತಾರೆ. ಹೀಗೆ ಆರೋಪಿತರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ಬಂಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿರವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.///

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube