ಬೆಳಗಾವಿಯಲ್ಲಿ 114 ಮಂದಿಗೆ ಸೋಂಕು

ಬೆಳಗಾವಿ : ಜಿಲ್ಲೆಯಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶುಕ್ರವಾರ ಒಂದೇ ದಿನದಲ್ಲಿ 114 ಮಂದಿಯಲ್ಲಿ ವೈರಸ್ ಇರುವುದು ದೃಢ ಪಟ್ಟಿದೆ.
ಕೋವಿಡ್ ಸಂಖ್ಯೆ ಪ್ರತಿ ದಿನ ಏರಿಕೆಯಾಗುತ್ತಿರುವುದರಿಂದ ಜನರು ಆತಂಕ ಪಡುವಂತಾಗಿದೆ. ವೈರಸ್ ದಿಂದ ಕಳೆದ ಎರಡು ವರ್ಷದಲ್ಲಾದ ಆಗಿರುವ ಘಟನೆಗಳನ್ನು ನೆನಪು ಮಾಡಿಕೊಳ್ಳುವಂತಾಗಿದೆ.
ಬೆಳಗಾವಿ -77, ಚಿಕ್ಕೋಡಿ-11, ಅಥಣಿ-05, ಬೈಲಹೊಂಗಲ-01, ಗೋಕಾಕ-01, ಹುಕ್ಕೇರಿ-01, ಖಾನಾಪುರ-01, ರಾಮದುರ್ಗ-06, ರಾಯಬಾಗ-07 ಸೇರಿ ಒಟ್ಟು 114 ಜನರಲ್ಲಿ ಸೋಂಕು ವಕ್ಕರಿಸಿದೆ. ಸಧ್ಯ ಜಿಲ್ಲೆಯಲ್ಲಿ 335 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ./////