ನಿಪ್ಪಾಣಿ ಖಾಸಗಿ ಕಾಲೇಜಿನಲ್ಲಿ 18 ವಿದ್ಯಾರ್ಥಿಗಳಿಗೆ ಸೋಂಕು

ನಿಪ್ಪಾಣಿ: ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದ್ದು, ಗಡಿಯಲ್ಲಿ ತೀವ್ರ ತಪಾಸಣೆ ನಡುವೆಯೂ ನಿಪ್ಪಾಣಿ ಖಾಸಗಿ ಕಾಲೇಜಿನ 18 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ, ಸಂಪರ್ಕಿತರನ್ನು ಆತಂಕಕ್ಕೆ ದೂಡಿದೆ.
ಜಿಲ್ಲೆಯ ಪ್ರಮುಖ ಶಾಲಾ-ಕಾಲೇಜಗಳಿಗೆ ಸೋಂಕು ಹರಡುತ್ತಿದ್ದು, ರಾಣಿ ಚನ್ನಮ್ಮ ವಸತಿ ಶಾಲೆ ಸೇರಿದಂತೆ ನಿಪ್ಪಾಣಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೋನಾ ದೃಡ ಪಟ್ಟಿದೆ. ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಾಗಿ ದಾಖಲಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಮೂರು ದಿನಗಳ ಕಾಲ ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ನಿಪ್ಪಾಣಿ ತಹಿಶೀಲ್ದಾರ ಬಿ. ಮೋಹನ್ ತಿಳಿಸಿದ್ದಾರೆ. ಮಕ್ಕಳ ಆರೋಗ್ಯ ಬಗ್ಗೆ ಪೋಷಕರಿಗೆ ಆತಂಕ ಎದುರಾಗಿದೆ ಎಂದು ವರದಿ ಯಾಗಿದೆ.//////