Belagavi News In Kannada | News Belgaum

ಸುಭಾಷಿತ ಮಂಜರೀ :- ಸದುಪಯೋಗ ಡಾ, ಸಿದ್ಧೇಶ್ವರದೇವರು ಮರಿಕಟ್ಟಿ

ಸುಭಾಷಿತ ಮಂಜರೀ :- ಸದುಪಯೋಗ
ಡಾ, ಸಿದ್ಧೇಶ್ವರದೇವರು ಮರಿಕಟ್ಟಿ ೯೮೮೦೭೪೧೪೦೧
ಲುಬ್ಧಸ್ಯ ನಶ್ಯತಿ ಯಶಃ ಪಿಶುನಸ್ಯ ಮೈತ್ರೀ
ನಷ್ಟಕ್ರಿಯಸ್ಯ ಕುಲಮರ್ಥಪರಸ್ಯ ಧರ್ಮಃ|
ವಿದ್ಯಾಫಲಂ ವ್ಯಸನಿನಃ ಕೃಪಣಸ್ಯ ಸೌಖ್ಯಂ
ರಾಜ್ಯಂ ಪ್ರಮತ್ತ ಚಿತ್ತಸ್ಯ ನರಾಧಿಪಸ್ಯ||(೨೩೦ ಪಂಚತಂತ್ರ ಕಾಕೋಲೂಕೀಯ)

ಲೋಭಿಯ ಯಶಸ್ಸು ನಾಶವಾಗುತ್ತದೆ. ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ. ವಿಹಿತವಾದ ಕೆಲಸಮಾಡದವನ ಕುಲನಾಶವಾಗುತ್ತದೆ. ಹಣವನ್ನೇ ಗಣಿಸುವವನ ಧರ್ಮನಾಶವಾಗುತ್ತದೆ.


ದುರ್ವಸನಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ಸಿಗುವುದಿಲ್ಲ .ಜಿಪುಣನಿಗೆ ಸೌಖ್ಯವಿಲ್ಲವಾಗುತ್ತದೆ. ಹಾಗೆಯೇ ಮೈಮರೆತ ಮಂತ್ರಿಯನ್ನು ಹೊಂದಿರುವ ರಾಜನ ರಾಜ್ಯ ನಾಶವಾಗುತ್ತದೆ. ಈ ಯಾವುದನ್ನು ತಿಳಿಯದೆ ಬಾಳುವ ಜನರ ಜೀವನ ದುಃಖಕರವೆಂದೇ ಹೇಳಬಹುದು !!! ಈ ಎಲ್ಲವನ್ನು ಅರ್ಥೈಸಿಕೊಂಡು ನಡೆದರೆ ಜೀವನ ಸೌಖ್ಯ !!

ಇವತ್ತಿನ ಉಪನ್ಯಾಸವಿಷಯ:- ಗಾಯತ್ರಿ ದ್ವಿತೀಯ ಪಾದ ಉಪಾಸನೆ

ಬೃಹದಾರಣ್ಯಕ ಉಪನಿಷತ್ತಿನ ಉಪನ್ಯಾಸ , 5ನೇಯ ಅಧ್ಯಾಯದ ೧೪ನೇಯ ಬ್ರಾಹ್ಮಣದ ಮಂತ್ರ-೫ ಸಮಯ ಸಾಯಂಕಾಲ 6ಗಂಟೆಯಿಂದ ಆನ್ಲೈನ್ನಲ್ಲಿ ಶಂಕರಭಾಷ್ಯಾನಃಗತವಾಗಿ ಉಪನ್ಯಾಸವಿರುತ್ತದೆ, ಆಸಕ್ತರು ಭಾಗವಹಿಸಬಹುದು . ೯೮೮೦೭೪೧೪೦೧.

ತಾಗ್ಂ ಹೈತಾಮೇಕೇ ಸಾವಿತ್ರೀಮನುಷ್ಟುಭಮನ್ವಾಹುರ್ವಾಗನುಷ್ಟುಬೇತದ್ವಾಚಮನುಬ್ರೂಮ ಇತಿ ನ ತಥಾ ಕುರ್ಯಾದ್ಗಾಯತ್ರೀಮೇವ ಸಾವಿತ್ರೀಮನುಬ್ರೂಯಾದ್ಯದಿ ಹ ವಾ ಅಪ್ಯೇವಂವಿದ್ಬಹ್ವಿವ ಪ್ರತಿಗೃಹ್ಣಾತಿ ನ ಹೈವ ತದ್ಗಾಯತ್ರ್ಯಾ ಏಕಂಚನ ಪದಂ ಪ್ರತಿ ||೫||.

ಗಾಯತ್ರೀ ಎಂದರೆ ಪ್ರಾಣ , ಪ್ರಾಣದಲ್ಲಿ ಎಲ್ಲ ಕರಣಗಳು ಇರುತ್ತವೆ.ಇದಕ್ಕಾಗಿ ಗಾಯತ್ರೀಯನ್ನು ಸಮರ್ಪಿಸಬೇಕು ಆವಾಗ ಸರ್ವವನ್ನು ಸಮರ್ಪಿಸಿದಂತಾಗಿ ಸರ್ವಾತ್ಮನೆಂದು ಹೇಳಿಸಿಕೊಳ್ಳುತ್ತಾನೆ. ಇದು ಗಾಯತ್ರೀಯ ಉಪಾಸನೆಯ ಒಂದು ಹಂತ ಇದನ್ನು ಸವಿವರವಾಗಿ ವಿವರಿಸಲಾಗುವುದು ಆಸಕ್ತರು ಭಾಗವಹಿಸಬಹದು