ಆರ್ ಸಿಯು ವಿದ್ಯಾಲಯದ ಮೇಲೆ ಕೊರೋನಾ ದಾಳಿ
ವಿದ್ಯಾರ್ಥಿಗಳೂ ಸೇರಿದಂತೆ 42 ಜನರಿಗೆ ಸೋಂಕು ದೃಢ

ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ತಗ್ಗಿದೇ ಎನ್ನುವರಷ್ಟರಲ್ಲಿ ಮತ್ತೆ ನುಸುಳುತ್ತಿದ್ದು, ಇದೀಗ ರಾಣಿ ಚೆನ್ನಮ್ಮ ವಿವಿಯ ವಿದ್ಯಾರ್ಥಿಗಳೂ ಸೇರಿದಂತೆ 42 ಜನರಿಗೆ ಸೋಂಕು ತಗುಲಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 32 ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ 42 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಗೆ ಕೋವಿಡ್ ದೃಢಪಟ್ಟಿದ್ದು ಅವರು ರಜೆಯ ಮೇಲೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಹಾಸ್ಟೇಲ್ ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಪಡೆದು ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ ಒಟ್ಟು 42 ಜನರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿದುಬಂದಿದೆ.//////