Belagavi News In Kannada | News Belgaum

ಪಾಪಿ ತಂದೆಯೊಬ್ಬ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದು, ಕೊನೆಗೆ ತಾಯಿಯ ಚಾಣಾಕ್ಷತೆಯಿಂದ ಅತ್ಯಾಚಾರಿ ತಂದೆ ಪೊಲೀಸ್ ರ ಅತಿಥಿ

ಶಿವಮೊಗ್ಗ: ಪಾಪಿ ತಂದೆಯೊಬ್ಬ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದು, ಕೊನೆಗೆ ತಾಯಿಯ ಚಾಣಾಕ್ಷತೆಯಿಂದ ಅತ್ಯಾಚಾರಿ ತಂದೆ ಪೊಲೀಸ್ ರ ಅತಿಥಿಯಾಗಿರುವ ಘಟನೆ  ಶಿವಮೊಗ್ಗದ ಗೋವಿಂದಪುರದಲ್ಲಿ ನಡೆದಿದೆ.

 

ಇವರನ್ನು ಮೂಲತಃ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನವರು ಎಂದು ಗುರುತಿಸಲಾಗಿದೆ. ಆರೋಪಿ ತಂದೆ ತನ್ನೂರಿನಲ್ಲಿ ಶುಂಠಿ ವ್ಯಾಪಾರ ಮಾಡುತ್ತಿದ್ದ.  ಈತನಿಗೆ ಮಗಳು ಸೇರಿ ಇಬ್ಬರು ಗಂಡು ಮಕ್ಕಳಿದ್ದಾರೆ.

 

ಪಾಪಿ ತಂದೆ, ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದನಂತೆ. ತನ್ನ ತಂದೆಯ ದುಷ್ಕೃತ್ಯವನ್ನು ತನ್ನ ತಾಯಿಗೂ ಹೇಳದೆ ಮಗಳು ಸಹಿಸಿಕೊಂಡಿದ್ದಾಳೆ. ಆದರೆ, ಕೊನೆಗೆ ಅನಿವಾರ್ಯವಾಗಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ.

 

ವಿಷಯ ತಿಳಿದ ಬಾಲಕಿಯ ತಾಯಿ ತನ್ನ ಮಗಳಿಗೆ ಮದುವೆ ಮಾಡಲು ಮುಂದಾಗುತ್ತಾಳೆ.  ತನ್ನ ಮಗಳಿಗೆ ಯಾವಾಗ ನಿಶ್ಚಿತಾರ್ಥವಾಯಿತೋ ಆಗ ಪಾಪಿ ತಂದೆ ಮಗಳಿಗೆ ಮದುವೆ ಆಗದಂತೆ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಬೇರೆ ದಾರಿ ಕಾಣದೇ ತಾಯಿ ತನ್ನ ಮೂವರು ಮಕ್ಕಳೂಂದಿಗೆ ಆತ್ಮಹತ್ಯೆಗೆ ನಿರ್ಧರಿಸುತ್ತಾಳೆ.

ಅದರಂತೆ ಬಾಲಕಿಯ ತಾಯಿ ಗೋವಿಂದಪುರದಲ್ಲಿದ್ದ ತನ್ನ ಅಕ್ಕನಿಗೆ ಫೋನ್​​ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸುತ್ತಾಳೆ. ಆಗ ಅವರು ಆತ್ಮಹತ್ಯೆ ನಿರ್ಧಾರ ಬಿಟ್ಟು ಗೋವಿಂದಪುರಕ್ಕೆ ಕರೆಯಿಸಿಕೊಳ್ಳುತ್ತಾರೆ.

 

ಈ ವೇಳೆ ನಿಮ್ಮ ಪತ್ನಿ, ಮಕ್ಕಳು ಕಾಣುತ್ತಿಲ್ಲವೆಂದು ಆರೋಪಿ ತಂದೆಯನ್ನು ಗೋವಿಂದಪುರಕ್ಕೆ ಕರೆಯಿಸಿಕೊಂಡು,  ಶಿವಮೊಗ್ಗದ ಮಹಿಳಾ ಪೊಲೀಸರಿಗೆ ವಿಷಯ ತಿಳಿಸಿ ಆರೋಪಿಯನ್ನು ಬಂಧಿಸಿದ್ದಾರೆ.