Belagavi News In Kannada | News Belgaum

ಮಾಹಿತಿಯ ಕೊರತೆಯಿಂದ ಅತಿಯಾದ ವ್ಯಾಯಾಮಕ್ಕೆ ಬಲಿಯಾಗುತ್ತಿರುವ ಯುವಪೀಳಿಗೆ

ಮಾಹಿತಿಯ ಕೊರತೆಯಿಂದ ಅತಿಯಾದ ವ್ಯಾಯಾಮಕ್ಕೆ ಬಲಿಯಾಗುತ್ತಿರುವ ಯುವಪೀಳಿಗೆ
ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡುತ್ತಿದ್ದು, ಆರೋಗ್ಯವನ್ನು ಚನ್ನಾಗಿ ಇಟ್ಟುಕೊಳ್ಳುವಲ್ಲಿ ಆಸಕ್ತಿ ಬೆಳೆಯುತ್ತಿರುವದು ಸ್ವಾಗತಾರ್ಹವಾಗಿದೆ.

ಬದುಕು ವೇಗವನ್ನು ಕಂಡುಕೊಂಡಿದ್ದು, ಹಗಲನ್ನು ರಾತ್ರಿಯನ್ನಾಗಿಸಿದೆ. ಯಾರಿಗೂ ಸಮಯವಿಲ್ಲ ಎಲ್ಲರೂ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿದ್ದಾರೆ. ಹಣ ಒಂದಿದ್ದರೆ ಸಾಕು ಎಲ್ಲವನ್ನು ಕೊಳ್ಳಬಲ್ಲೆ ಎನ್ನುವ ಮನಸ್ಥಿತಿ.

ಮನುಷ್ಯ ಹಣದ ಹಿಂದೆ ಬೆನ್ನು ಹತ್ತಿ, ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದು , ಪಾರ್ಟಿ, ಮೋಜು, ಮಸ್ತಿ, ಇದೆ ಜಗತ್ತು ಎಂದುಕೊಂಡಿದ್ದಾನೆ. ಹಣ ಮತ್ತು ಗುಣದ ನಡುವಿನ ವ್ಯತ್ತಾಸವನ್ನು ಅರಿಯದೆ ಸಂಬಂಧಗಳನ್ನು ಬೆಲೆ ಕಟ್ಟಿ ತೂಗುವ ಅಸಹ್ಯಕರ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಕೃತಕ ಜಗತ್ತು ಸೃಷ್ಟಿಸಿಕೊಂಡು ತಮ್ಮ ಮಾನ-ಪ್ರಾಣಗಳನ್ನು ಹಣದ ನೋಟಿನಲ್ಲಿ ಸಿಂಗರಿಸುವ ಪ್ರಯತ್ನದಲ್ಲಿದ್ದಾನೆ. ಇತ್ತೀಚೆಗೆ ಜನರು ದೈಹಿಕ ಶ್ರಮದ ಕೆಲಸಗಳನ್ನು ಮಾಡುವದು ಬಹಳ ಕಡಿಮೆಯೆ ಆಗಿದೆ. ಎಲ್ಲಾ ಕೆಲಸಗಳನ್ನು ತಂತ್ರಜ್ಞಾನ ಸುಲಭವಾಗಿಸಿಬಿಟ್ಟಿದೆ. ದೈಹಿಕ ಶ್ರಮ ಇಲ್ಲದಿರುವದರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಾದ ಬೊಜ್ಜು(Obesity), , ಹೃದಯ ತೊಂದರೆ, Stress,ಮಧುಮೇಹ, ಅಧಿಕ ರಕ್ತದೊತ್ತಡ, ಅಲರ್ಜಿ, ಆಮ್ಲಿಯತೆ (Acidity) ಸಮಸ್ಯಗಳಿಗೆ ಬಲಿಯಾಗುತ್ತಿದ್ದಾರೆ.

ಪ್ರತಿ ಮನುಷ್ಯ ದೀರ್ಘಾಯುಶಿಯಾಗಿರಲು ಬಯಸುವದು ಸಹಜವಾದರೂ ಈ ನಿಟ್ಟಿನಲ್ಲಿ ದೈಹಿಕ ದಂಡನೆಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಚನ್ನಾಗಿ ಇಟ್ಟುಕೊಳ್ಳಬೇಕಾಗುವದು ಅಷ್ಟೆ ಸತ್ಯ.

ಯಾರೊಬ್ಬರು ಜೀವನದಲ್ಲಿ ತಮ್ಮ ಯವ್ವನದ ದಿನಗಳನ್ನು ಬಿಟ್ಟಿಕೊಡಲು ಒಪ್ಪುವದಿಲ್ಲ. ತಲೆಗೆ ಬಣ್ಣ ಹಚ್ಚುವದು, ಮುಖಕ್ಕೆ ಮೇಕಪ್ಪ ಮಾಡಿಕೊಳ್ಳುವದು, ಹೊರಗಡೆ ನಾಲ್ಕು ಜನರೊಂದಿಗೆ ಬೆರೆತಾಗ ಎಲ್ಲರೂ ತಮ್ಮನ್ನು ಗುರುತಿಸುವಂತಾಗಲು ಆಕರ್ಷಕ ಮೈಕಟ್ಟು ಹೊಂದುವ ಜೊತೆಗೆ ಚನ್ನಾಗಿ ಕಾಣಬಯಸುವದು ತಪ್ಪಲ್ಲ. ಯಾವಾಗಲೂ ಆತ್ಮವಿಶ್ವಾಸವು ವ್ಯಕ್ತಿಯ ದೈಹಿಕ ನೋಟದ ಮೇಲೆ ಅವಲಂಭಿತವಾಗಿರುತ್ತದೆ. ದೇಹ ಪ್ರಜ್ಞೆಯಿಂದ ಉಂಟಾಗುವ ಕೀಳರಿಮೆ ಮನುಷ್ಯನಿಗೆ ಉದ್ವೇಗ, ಆತಂಕ, ಖಿನ್ನತೆ ಮೊದಲಾದ ಸಮಸ್ಯಗಳನ್ನು ಹುಟ್ಟುಹಾಕುತ್ತದೆ. ಈ ಹಿನ್ನೆಲೆಯಲ್ಲಿ “Fitness” ಹೊಂದಬೇಕೆಂಬ ಆಸೆಯಿಂದ ಇಂದಿನ ಯುವ ಪೀಳಿಗೆ ಜಿಮ್ ನತ್ತ ಮುಖಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಇತ್ತೀಚಿನ ಸಮೀಕ್ಷೆಯನ್ವಯ ಭಾರತದಲ್ಲಿ ಶೇಕಡಾ 60% ರಿಂದ 70% ರಷ್ಟು ಹದಿಹರೆಯದವರು ದೇಹದ ಆಕಾರ ಮತ್ತು ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆಂದು ತಿಳಿದು ಬಂದಿದೆ.

ಒಂದೊಂದು ವಯೋಮಾನದವರಿಗೆ ಒಂದೊಂದು ಆಶೆಗಳು ಇರುತ್ತವೆ. ಉದಾ: ಕೆಲವರಿಗೆ ಮೈಕಟ್ಟು ಆಕರ್ಷಣೀಯವಾಗಿ ಕಾಣುವ, ಕೆಲವರಿಗೆ ದೇಹದ ತೂಕ ಇಳಿಸಿಕೊಳ್ಳುವ ಹಾಗೂ ಇನ್ನು ಕೆಲವರಿಗೆ ದೇಹದ ಬೊಜ್ಜನ್ನು ಕರಗಿಸಿಕೊಳ್ಳುವ, ಹೀಗೆ ಅನೇಕ ಕಾರಣಗಳಿಂದ ಜನರು ಜಿಮ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಜಿಮ್‍ನಲ್ಲಿ ಎಲ್ಲ ವಯೋಮಾನದವರಿಗೂ ಸರಿಹೊಂದುವ ವ್ಯಾಯಾಮ ಹಾಗೂ ಪರಿಕರಗಳಿರುತ್ತವೆ. ಜಿಮ್ ಚಟುವಟಿಕೆಗಳಲ್ಲಿ ಏರೋಬಿಕ್ಸ್, ವೇಟ್ಸ್, ಕಾರ್ಡಿಯೋ ಮತ್ತು ಸ್ಟ್ರೇಚಿಂಗ್ ಬಹಳ ಮಹತ್ವದ ಅಂಗವಾಗಿವೆ ಎನ್ನಬಹುದು. ಜಿಮ್ ಚಟುವಟಿಕೆಗಳು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನೆಮ್ಮದಿ ಹೊಂದಲು ನೆರವಾಗುತ್ತವೆ. ದೇಹದಲ್ಲಿಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಮಧುಮೇಹ, ರಕ್ತದೊತ್ತಡ ಕಾಯಿಲೆಗಳು ಬಾರದಂತೆ ತಡೆಯಲು, ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜಿಮ್ ಅಗತ್ಯವಾಗಿದೆ. ನಿಯಮಿತವಾಗಿ ಜಿಮ್‍ಗೆ ಹೋಗುವದರಿಂದ ಸ್ನಾಯುಗಳು ಶಕ್ತಿಯುತವಾಗುತ್ತವೆ.

ಆಹಾರ ಸೇವನೆ ಉತ್ತಮ ಸ್ಥಿತಿಗೆ ಬರುತ್ತದೆ. ಹಸಿವು ಸರಿಯಾಗಿ ಆಗುತ್ತದೆ. ಜಂಕ್‍ಫುಡ್ ಗಳು ಸಹಜವಾಗಿ ಬೇಡವೆನಿಸುತ್ತವೆ. ಇದರಿಂದ ಆಹಾರ ಸೇವನೆ ಹಾಗೂ ಜೀವನ ಶೈಲಿಯಲ್ಲಿ ಶಿಸ್ತು ಮೂಡುತ್ತದೆ. ದೈಹಿಕ ಚಟುವಟಿಕೆಗಳು ನಮ್ಮಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ದೇಹದಲ್ಲಿ ಹಾರ್ಮೋನ್‍ಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತವೆ.

ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗಿ ಪ್ರತಿ ದಿನ ಜಿಮ್ ಚಟುವಟಿಕೆಯಾದಮೇಲೆ ದೇಹದಲ್ಲಿ ಹೊಸ ಹುರುಪು ತುಂಬುತ್ತದೆ. ಜಿಮ್ ಚಟುವಟಿಕೆಗಳು ನಮ್ಮ ಹೃದಯದ ಆರೋಗ್ಯಕ್ಕೆ ಅತಿ ಮುಖ್ಯವಾಗಿದ್ದು, ಹೃದಯ ಆರೋಗ್ಯವನ್ನು ಉತ್ತಮಪಡಿಸಲು ವಿಶೇಷವಾದ ವ್ಯಾಯಾಮಗಳಿವೆ ಇದರಿಂದ ದೇಹದಲ್ಲಿ ಆಮ್ಲಜನಕದ ಪೂರೈಕೆ ಹೆಚ್ಚಾಗುವ ಜೊತೆಗೆ ಆ ಬಗೆಯ ವ್ಯಾಯಾಮದಿಂದ ರಕ್ತಪರಿಚಲನೆ, ಜೀರ್ಣಾಂಗ ವ್ಯವಸ್ಥೆ ಮತ್ತು ದೇಹದಿಂದ ಟಾಕ್ಸಿನ್ ಗಳನ್ನು ಹೊರ ಹಾಕುವ ಪ್ರಕ್ರಿಯೆ ಶ್ವಾಸಕೋಶಗಳ ಕಾರ್ಯನಿರ್ವಹಣೆ ಸರಿ ಇರುತ್ತದೆ.

ಇತ್ತೀಚೆಗೆ ಗಮನಿಸಲಾಗಿ ಜಿಮ್‍ನಲ್ಲಿ ಮಾಬಹುದಾದ ವ್ಯಾಯಾಮ ಮಿತಿಯ ಕೊರತೆಯಿಂದ ಶೇಕಡಾ 42% ರಷ್ಟು ಯುವ ಜನತೆ ಜಿಮ್‍ಗಳಲ್ಲಿ ಅತಿಯಾದ ವ್ಯಾಯಾಮ ಮಾಡಿದ ಅಡ್ಡ ಪರಿಣಾಮಗಳಿಂದ “ ಫಿಟ್ನೆಸ್ “ ಎಂಬ ಆಮೇಷಕ್ಕೆ ಒಳಗಾಗಿ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ವರೆಗೆ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸದೆ, ಪಾಶ್ಚಿಮಾತ್ಯ ಶೈಲಿಯ ತಿಂಡಿ ತಿನಿಸುಗಳನ್ನು(Junk Food) ತಿಂದು ದೇಹದಲ್ಲಿ ಹೆಚ್ಚು ಬೊಜ್ಜು ಶೇಖರಣೆಯಾಗಿ ಹೃದಯದ ಸಮಸ್ಯಗಳು ಉಂಟಾಗುತ್ತಿವೆ ಎಂದು ತಿಳಿದುಕೊಳ್ಳಲಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ವ್ಯಾಯಾಮ ಮಾಡುವುದರಿಂದ ಹೃದಯದ ಸಮಸ್ಯೆ ಬರುತ್ತಿರುವದನ್ನು ಗಮನಿಸಲಾಗಿದೆ. ಎಲ್ಲವೂ ಮಿತವಾಗಿದ್ದರೆ ಚಂದ ಅತಿಯಾದ ಅಮೃತವುಕೂಡ ವಿಷವಾಗಿ ಪರಿಣಮಿಸುತ್ತದೆ.

ಈ ನಿಟ್ಟಿನಲ್ಲಿ ಮುಖ್ಯವಾಗಿ ಗಮನಹರಿಸಬೇಕಾದ ವಿಷಯ, ನಮ್ಮ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ವ್ಯಾಯಾಮ ಮಾತ್ರ ಮಾಡಬೇಕು. ದೇಹದ ತೂಕ ಬೇಗನೆ ಕಳೆದುಕೊಳ್ಳುವ ಹುರುಪಿನಲ್ಲಿ ದೇಹಕ್ಕೆ ಆಗುವ ಹಾನಿ ಗೊತ್ತಾಗುವದಿಲ್ಲ. ದೇಹಕ್ಕೆ ನಿರ್ಧಿಷ್ಟ ರೂಪ ಆಕಾರವನ್ನು ಹೊಂದಬೇಕು ಎಂದು ಅತಿಯಾದ ವ್ಯಾಯಾಮ, ಆieಣ ಮಾಡುವದಕ್ಕಿಂತ, ಆರೋಗ್ಯಕರ ಆieಣ, ವ್ಯಾಯಾಮ, ಮಾಡಬಹುದು. ಯಾವುದೇ ವ್ಯಕ್ತಿಯ ದೈಹಿಕ ರೂಪವನ್ನು ಬದಲಿಸುವದು ಕಷ್ಟ.

ಸಿಕ್ಸ ಪ್ಯಾಕ್, ಜೀರೋ ಫಿಗರ್ ಉತ್ತಮ ಆರೋಗ್ಯಕ್ಕೆ ಫಿಟ್‍ನೆಸ್ ಮಾನದಂಡವಾಗದು ಎನ್ನುವದನ್ನು ಯುವಜನರು ಅರ್ಥಮಾಡಿಕೊಳ್ಳಬೇಕಾಗಿದೆ. ಜಿಮ್‍ಗೆ ಹೋದರೆ ಆರೋಗ್ಯವಂತರಾಗಬಹುದು (ಫಿಟ್‍ನೆಸ್ ಹೊಂದಬಹುದು) ಎನ್ನುವದು ಸುಳ್ಳು.

ಹಾಗಾದರೆ ನಮ್ಮ ದೇಹಕ್ಕೆ ಎಷ್ಟು ವ್ಯಾಯಾಮ ಅಗತ್ಯ ಎನ್ನುವದನ್ನು ಹೇಳುವವರು ಯಾರು ? ಎಲ್ಲರ ದೇಹ ರಚನೆ ಒಂದೆ ತೆರನಾಗಿರುವದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ದೇಹ ಮತ್ತು ರೂಪಗಳ ಬಿನ್ನತೆಯೇ ಪ್ರತಿ ವ್ಯಕ್ತಿಯ ವೈಶಿಷ್ಟತೆಯಾಗಿದೆ.

ಅಮೇರಿಕದಲ್ಲಿ ನಡೆದ ಸಂಶೋಧನೆ ಪ್ರಕಾರ ಅತಿಯಾದ ವ್ಯಾಯಾಮ ಮಾಡುವದರಿಂದ ಹೃದಯದ ತೊಂದರೆಯಾಗಬಹುದು ಎಂದು ತಿಳಿಸಿದೆ. ಜಿಮ್‍ಗಳಲ್ಲಿ ಹೈ ಇಂಟೆನ್ಸಿಟಿ ವರ್ಕೌಟ್ ವ್ಯಾಯಾಮ ಮಾಡುವವರಿಗೆ  Coronary artery Calcification (CAC)  ತೊಂದರೆ ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ತಿಳಿಸಿದೆ.

ಜಿಮ್ ಚಟುವಟಿಕೆಗಳಲ್ಲಿ ಭಾಗವಹಿಸುವ ಮಧ್ಯವಯಸ್ಸಿನ ಯುವಕರು, ಕಿರಿಯರು, ಚಿಕ್ಕ ವಯಸ್ಸಿನಲ್ಲಿಯೇ ಹಠಾತ್ ಹೃದಯ ತೊಂದರೆಗಳಿಂದ ಸಾವನ್ನಪ್ಪುತ್ತಿರುವದು ಹೆಚ್ಚಿರುವದಕ್ಕೆ, ಅತಿಯಾದ ವ್ಯಾಯಾಮ ಕಾರಣ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.

ದೈಹಿಕವಾಗಿ “Fitness” ಹೊಂದಲು ಸ್ವಲ್ಪ ಸಮಯ ಬೇಕು. ಆದರೆ ಈಗಿನ ಯುವ ಪೀಳಿಗೆಯಲ್ಲಿ ತಾಳ್ಮೆ ಇಲ್ಲದಿರುವದರಿಂದ ಒಂದೆ ದಿನದಲ್ಲಿ ಮೈಕರಗಿಸಿಬಿಡಬೇಕು ಎಂಬ “ಫಿಟ್ನೆಸ್” ಎನ್ನುವ ಜಿದ್ದಿಗೆ ಬಿದ್ದು ಅತೀಯಾದ ವ್ಯಾಯಾಮದ ಜೊತೆಗೆ ನಿದ್ರಾಹೀನತೆ ಅದರ ಜೊತೆಯಲ್ಲಿ ಆಹಾರಪಥ್ಯೆ ಇವು ಮೂರು ಸೇರಿದಾಗ ದೇಹಕ್ಕೆ ಅತಿಯಾದ ಹಾನಿಯಾಗುತ್ತದೆ.

ನಾವು ದಿನನಿತ್ಯ ತೆಗೆದುಕೊಳ್ಳುವ ಪೋಷಕಾಂಶಯುಕ್ತ ಆಹಾರವು ನಾವು ಮಾಡುವ ವ್ಯಾಯಾಮದ ಮೇಲೆ ಪ್ರಭಾವ ಬೀರುತ್ತದೆ. ಏರೋಬಿಕ್ಸ್, ಯೋಗ, ಇತ್ಯಾದಿ ಮಾಡಿದಾಗ ದೇಹಕ್ಕೆ ಹೆಚ್ಚು ಪೋಷಕಾಂಶಗಳ ಅಗತ್ಯವಿರುತ್ತದೆ. ದೈಹಿಕ ಚಟುವಟಿಕೆಗಳಿಗೆ ಹಾಗೂ ನಮ್ಮ ಆಹಾರ ಪದ್ಧತಿಗಳಿಗೆ ಒಂದಕ್ಕೊಂದು ಸಂಬಂಧವಿದ್ದು, ಹೊಂದಾಣಿಕೆ ಇಲ್ಲದೆ ಹೋದಾಗ ತೊಂದರೆ ಕಟ್ಟಿಟ್ಟ ಬುತ್ತಿ.

ಜಿಮ್‍ನಲ್ಲಿ ವ್ಯಾಯಾಮ ಮಾಡುವ ಮೂಲಕ ಬೆವರು ಹರಿಸುವದರಿಂದ ತೂಕ ಕಡಿಮೆ ಆಗಬಹುದಾದರೂ ಮುಂದುವರೆದಂತೆ ಒಂದಿಲ್ಲೊಂದು ಆರೋಗ್ಯ ಸಮಸ್ಯಗಳು ಉದ್ಭವಸುತ್ತವೆ.

ಜಿಮ್‍ನಲ್ಲಿ ಬೆವರು ಹರಿಸುವದಕ್ಕಿಂತಲೂ ಆಹಾರ ಪಥ್ಯಯಿಂದಲೆ ದೇಹದ ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಬಹುದು. ಊಟ ತಿಂಡಿಯ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದರೆ ಶೇಕಡಾ 60%ರಷ್ಟು ದೇಹದ ಆಕಾರವನ್ನು ಕಾಪಾಡಿಕೊಳ್ಳಬಹುದು.

ಜಿಮ್‍ನಲ್ಲಿ ವ್ಯಾಯಾಮ ಮಾಡುವವರು ಆಹಾರದ ಕಡೆ ಗಮನಹರಿಸುವದು ಮುಖ್ಯ ಈ ನಿಟ್ಟಿನಲ್ಲಿ ಕಾರ್ಬೊಹೈಡ್ರೇಟ್ಸ್ ಇರುವ ಆಹಾರ ಸೇವಿಸಿ, ಹಣ್ಣುಗಳು, ಖರ್ಜೂರ, ಆಲೂಗಡ್ಡೆ ಮತ್ತಿತರ ಆಹಾರ, ಹೇರಳವಾಗಿ ಸೇವಿಸಿ. ಕಾರ್ಬೊಹೈಡ್ರೇಟ್ಸ್ ಜೊತೆಯಲ್ಲಿ ಪ್ರೋಟೀನ್ ಯುಕ್ತ ಆಹಾರ ಇದ್ದರೆ ಇನ್ನೂ ಅನಕೂಲ, ಜಿಮ್‍ನಲ್ಲಿ ವ್ಯಾಯಾಮ ಮಾಡಿ ದಣಿದ ದೇಹಕ್ಕೆ ”ಎ” ಮತ್ತು “ಸಿ” ವಿಟ್ಯಾಮಿನ್ ಚೈತನ್ಯ ತುಂಬುತ್ತದೆ. ಜೊತೆಯಲ್ಲಿ ವಿಟಮಿನ್ “ಡಿ” ಸೇವಿಸಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಮೂಳೆಗಳು ಬಲಶಾಲಿಯಾಗುವವು.

ಇಂದಿನ ದಿನಗಳಲ್ಲಿ ಯುವಜನರು ರಾತ್ರಿಯನ್ನು ಹಗಲು ಮಾಡಿಕೊಂಡು ನಿದ್ದೆಗೆಟ್ಟು ಕೆಲಸ ಮಾಡುವ ಪರಿಪಾಠವನ್ನು ಬೆಳಿಸಿಕೊಂಡಿದ್ದಾರೆ. ಹಣ ಗಳಿಸುವ ತುಡಿತಕ್ಕೆ ಬಿದ್ದು ಆರೋಗ್ಯ ಮತ್ತು ನಿದ್ದೆಯನ್ನು ನಿರ್ಲಕ್ಷಿಸಿದ್ದಾರೆ. ಎಲ್ಲಾ ಅಂಗಗಳಂತೆ ಹೃದಯಕ್ಕೂ ವಿರಾಮದ ಅಗತ್ಯವಿದೆ. ನಾವು ನಿದ್ದೆ ಮಾಡುವಾಗ ಹೃದಯಕ್ಕೂ ವಿರಾಮ ಸಿಗುತ್ತದೆ. ನಿದ್ದೆ ಮಾಡುವದರಿಂದ ಹೃದಯಾಘಾತವನ್ನು ತಡೆಗಟ್ಟಬಹುದೆಂದು ತಿಳಿದಿರಲಿ.

ರಾತ್ರಿ ಸರಿಯಾಗಿ ನಿದ್ರೆ ಮಾಡದೇ ಮರುದಿನ ಜಾಗಿಂಗ್ ಮತ್ತು ವ್ಯಾಯಾಮಗೆ ಹೋಗುವದು ಬೇಡ.
ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ವ್ಯಾಯಾಮ ಆದಷ್ಟು ಸರಳವಾಗಿರಲಿ, ದಿನಕ್ಕೆ ಒಂದು ಗಂಟೆ ವ್ಯಾಯಾಮ ಮಾಡಬಹುದು. ವ್ಯಾಯಾಮ ಮಾಡುವದು ಎಷ್ಟು ಮುಖ್ಯವೋ, ಅಷ್ಟೆ ಮುಖ್ಯ ವಿರಾಮ, ಅದರಿಂದ ದೇಹ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ಜೀವನ ಶೈಲಿ ದೋಷಪೂರಿತವಾಗಿದ್ದರೆ ನೇರವಾಗಿ ಹೃದಯದ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ದೈಹಿಕ ಒತ್ತಡ ಮಾತ್ರವಲ್ಲ ಮಾನಸಿಕ ಒತ್ತಡವೂ ಹೃದಯಕ್ಕೆ ತೊಂದರೆ ಕೊಡುತ್ತದೆ ಎಂಬುದು ತಿಳಿದಿರಲಿ.

ಜಿಮ್ ನಲ್ಲಿ ಒಬ್ಬ ಪ್ರಮಾಣೀಕೃತ ವೃತ್ತಿಪರ ತರಬೇತಿದಾರ ಇರುವದು ಅವಶ್ಯ ಅವರು ವ್ಯಾಯಾಮ ಮಾಡುವವರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಫಲಿತಾಂಶಗಳನ್ನು ನೀಡಬಹುದಾಗಿದೆ. ಏಕೆಂದರೆ ಜಿಮ್ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯ ಉದ್ದೇಶ, ಆಸಕ್ತಿ ಬೇರೆ-ಬೇರೆ ಆಗಿರುವದರಿಂದ ದೇಹಕ್ಕೆ ಇರಬೇಕಾದ ಅರ್ಹತೆ ,ಆಕುಂಚನೆ ಹಾಗೂ ಪ್ರಸರಣ ಕ್ರಿಯೆ ಅನುಸಾರವಾಗಿ ವ್ಯಾಯಾಮ ಪಾಠಗಳ ದಿನಚರಿಯನ್ನು ತಯಾರುಮಾಡಬೇಕಾಗುತ್ತದೆ.

ಜಿಮ್ ಬೆಳೆಯುತ್ತಿರುವ ಉದ್ಯಮವಾಗಿದ್ದು, ಜಿಮ್ ತರಬೇತುದಾರ ದೇಹ ರಚನೆ ಹಾಗೂ ಅದರ ಕಾರ್ಯನಿರ್ವಹಣೆ ಬಗ್ಗೆ ಮತ್ತು ಫಿಟ್ನೆಸ್, ಪೌಷ್ಟಿಕಾಂಶಗಳ ಬಗ್ಗೆಯೂ ತಿಳಿದುಕೊಂಡಿರಬೇಕಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಗತ್ಯ ಅರ್ಹತೆಗಳನ್ನು ಹೊಂದಿರದ ತರಬೇತಿದಾರರನ್ನು ಜಿಮ್‍ಗಳಲ್ಲಿ ತರಬೇತಿ ನೀಡುವದನ್ನು ಗಮನಿಸಲಾಗಿದೆ.

ಉತ್ತಮ ವೈಜ್ಞಾನಿಕ ತರಬೇತಿಯು ಒಂದು ವಿಜ್ಞಾನದ ಕಲೆಯಾಗಿದೆ. ಒಬ್ಬ ತರಬೇತುದಾರ ಸಂಶೋಧನೆ ಮತ್ತು ಅಭ್ಯಾಸವನ್ನು ಅರಿತಿರಬೇಕು. ಆಗ ಮಾತ್ರ ಜಿಮ್‍ಗೆ ಬರುವ ಯುವಕರಿಗೆ ಸರಿಯಾಗಿ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ.

ಪ್ರತಿಯೊಬ್ಬರಿಗೂ“Fitness” ಹೊಂದುವದು ಅತೀ ಮುಖ್ಯ, ಆದರೆ“Fitness” ಎಂದರೆ ತೆಳ್ಳಗೆ ಕಾಣುವದಲ್ಲ, ಆರೋಗ್ಯವಂತರಾಗಿ ಇರುವದು ಎಂದು ತಿಳಿದಿರಲಿ.

ಜಿಮ್‍ಗೆ ಹೋಗುವ ಮೊದಲು ಪ್ರತಿಯೊಬ್ಬರು ನುರಿತ ತಜ್ಞವೈಧ್ಯ (Physician) ರನ್ನು ಸಂಪರ್ಕಿಸಿ ಹೃದಯದ ಕಾರ್ಯಕ್ಷಮತೆ ಪರೀಕ್ಷೆ ಮಾಡಿಸಿಕೊಳ್ಳಿ, ದೇಹದ ವೈಧ್ಯಕೀಯ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಅದರಲ್ಲೂ ಮಧುಮೇಹ, ಹೃದಯ, ಸಂಬಂಧಿ ಖಾಯಲೆ ರಕ್ತದೊತ್ತಡ ಗಳಿಂದ ಬಳಲುವವರು ಪ್ರತಿ ಹಂತದಲ್ಲೂ ವೈಧ್ಯರ ಸಲಹೆ ಪಡೆದೆ ಮುಂದುವರೆಯುವುದು ಉತ್ತಮ. ದೇಹದ ಆರೋಗ್ಯ ಸ್ಥತಿ, ರಕ್ತದೊತ್ತಡ ಆಗಾಗ ಪರೀಕ್ಷೆ ಮಾಡಿಸಿಕೊಳ್ಳಿ ವ್ಯಾಯಾಮಗಳನ್ನು ಆರಂಭಿಕವಾಗಿ ನಿಧಾನವಾಗಿ ಪ್ರಾರಂಭಿಸಿ. ಶಕ್ತಿ ಮೀರಿ ಭಾರ ಎತ್ತಬೇಡಿ.

ತಮ್ಮ ದೇಹದ ಹಾಗೂ ಹೃದಯದ ಕಾರ್ಯಕ್ಷಮತೆಯ ಪರೀಕ್ಷಾ ವರದಿಗಳನ್ನು ಆಧರಿಸಿ ತಮ್ಮ“Fitness” ಗೆ ಸರಿ ಹೊಂದುವ ಸುರಕ್ಷಿತ ಹಾಗೂ ಸೂಕ್ತ ವ್ಯಾಯಾಮವನ್ನು ಜಿಮ್‍ನಲ್ಲಿ ಮಾಡುವ ಬಗ್ಗೆ “Physiotherapist” ಮಾತ್ರ ಮಾರ್ಗದರ್ಶನ ಮಾಡಬಲ್ಲರು ಎಂಬುದು ತಿಳಿದಿರಲಿ.

ಜಿಮ್ ಚಟುವಟಿಕೆಗಳಲ್ಲಿ ಭಾಗವಹಿಸುವ ಕೆಲವರಲ್ಲಿ ಸ್ನಾಯುಗಳು ಸರಿದಾಡಬಹುದು, ಕೈ-ಕಾಲು ಉಳುಕಬಹುದು, ಭುಜಕ್ಕೆ ಪೆಟ್ಟಾಬಹುದು. ಸೊಂಟ, ಕತ್ತು ಉಳಿಕಬಹುದು, ಹಿಮ್ಮಡಿಯಲ್ಲಿ ನೋವು ಉಂಟಾಗಬಹುದು, ಸ್ನಾಯುಗಳಿಗೆ ಬಾವು ಬರಬಹುದು. ಹೀಗೆ ಇತ್ಯಾದಿ ತೊಂದರೆಗಳು ಸಾಮಾನ್ಯವಾಗಿ ಬರಬಹುದಾಗಿದ್ದು, ತಕ್ಷಣವೇ ನುರಿತ (Nutritionist) ರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಉದಾಸೀನತೆ ಬೇಡ. ಆಹಾರ ಪದ್ಧತಿಗಾಗಿ ಪೌಷ್ಟಿಕತಜ್ಞರನ್ನು “Fitness” ಸಂಪರ್ಕಿಸಿ.

ಸರಿಯಾದ ಮಾರ್ಗದರ್ಶನ ನಿಮ್ಮ “Fitness”ಗುರಿಯನ್ನು ಸುರಕ್ಷತೆಯೊಂದಿಗೆ ಮುಟ್ಟಲು ಸಾಧ್ಯವಾಗುತ್ತದೆ.
ಬಹುತೇಕವಾಗಿ ಹೆಚ್ಚು ಜನ “ಈiಣಟಿess” ಗುರಿ ತಲುಪಿದ ತಕ್ಷಣ ಜಿಮ್‍ಗೆ ಹೋಗುವದನ್ನು ಬಿಟ್ಟುಬಿಡುತ್ತಾರೆ. ಇದು ತಪ್ಪು ಆರೋಗ್ಯವಾಗಿರಬೇಕೆಂದರೆ ವ್ಯಾಯಾಮ ದಿನಚರಿಯಾಗಲಿ.

ಅನಂತ ಪಪ್ಪು

.