Belagavi News In Kannada | News Belgaum

ಪಂಡಿತ ದೀನದಯಾಳರ ತ್ಯಾಗ ನಮಗೆ ಆದರ್ಶ: ಪ್ರೊ. ಪದ್ಮಶಾಲಿ

ಬೆಳಗಾವಿ: ಪಂಡಿತ ದೀನದಯಾಳ ಉಪಾಧ್ಯಾಯರು ತಮ್ಮ ಜೀವನವನ್ನು ಪೂರ್ಣ ಸಮಾಜ ಮತ್ತು ರಾಷ್ಟ್ರಕ್ಕೆ ಮೀಸಲಿಟ್ಟಿದ್ದರು. ರಾಷ್ಟ್ರದ ಕೊನೆಯ ವ್ಯಕ್ತಿಗೂ ಸರ್ಕಾರದ ಸಕಲ ಸವಲತ್ತುಗಳು ತಲುಪಬೇಕು ಎಂಬ ಉದಾತ್ತ ಚಿಂತನೆ ಹೊಂದಿದ್ದರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನೇತೃತ್ವದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದ ಆವರಣದÀಲ್ಲಿ ಜರುಗಿದ ಪಂಡಿತ ದೀನದಯಾಳ ಉಪಾಧ್ಯಾಯ ಅವರ 54ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಯಂತಿ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮಗಳು ಇತ್ತೀಚೆಗೆ ನಿಮಿತ್ತ ಮಾತ್ರಕ್ಕೆ ಜರುಗುತ್ತಿರುವುದು ಬೇಸರದ ಸಂಗತಿ. ಅದರ ಬದಲಾಗಿ ಆರ್‍ಸಿಯು ಮಹಾತ್ಮರ ಜಯಂತಿ ಮತ್ತು ಪುಣ್ಯ ಸ್ಮರಣೆ ಕಾರ್ಯಕ್ರಮಗಳ ಭಿನ್ನವಾಗಿ ಆಚರಿಸಲು ಮುಂದಾಗಿದೆ. ಹಾಗಾಗೀ ಪಂಡಿತ ದೀನದಯಾಳರ ಪುಣ್ಯಸ್ಮರಣೆ ನಿಮಿತ್ತ ಕ್ಯಾಂಪಸಿನಲ್ಲಿ ಸಸಿ ನೆಡಲಾಯಿತು. ಅಷ್ಟೇ ಅಲ್ಲದೆ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದಿಂದ ದತ್ತು ಪಡೆದ ಕಲಾರಕೊಪ್ಪ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಲು ತಿರ್ಮಾನಿಸಲಾಗಿದೆ. ಇನ್ನು ಮುಂದೆ ಎಲ್ಲ ಮಹಾತ್ಮರ ಜಯಂತಿ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ಆಚರಿಸಲಾಗುವುದು ಎಂದರು.
ಮೌಲ್ಯ ಮಾಪನ ಕುಲಸಚಿವ ಡಾ. ವೀರನಗೌಡ ಪಾಟೀಲ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ವಿವಿಧ ವಿಭಾಗಗಳ ಮುಖ್ಯಸ್ಥರು, ನಿಖಾಯದ ಡೀನರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಅಧ್ಯಯನ ಪೀಠದ ಸಂಯೋಜಕ ಡಾ. ಪ್ರಕಾಶ ಕಟ್ಟಿಮನಿ ಸ್ವಾಗತಿಸಿದರು. ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ಶಿವಲಿಂಗಯ್ಯ ಗೋಠೆ ನಿರೂಪಿಸಿದರು.