Belagavi News In Kannada | News Belgaum

ಸ್ಕೂಲ್ ಕಾಲೇಜು ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧಕ್ಕೆ ಚರ್ಚೆ

ಹಿಜಾಬ್-ಕೇಸರಿ ಶಾಲು ಕದನದ ನಂತರ ಎಚ್ಚೆತ್ತ ಶಿಕ್ಷಣ ಇಲಾಖೆ

ಹಿಜಾಬ್-ಕೇಸರಿ ಶಾಲು ಕದನದ ನಂತರ ಎಚ್ಚೆತ್ತ ಶಿಕ್ಷಣ ಇಲಾಖೆ: ಸ್ಕೂಲ್ ಕಾಲೇಜು ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧಕ್ಕೆ ಚರ್ಚೆ

ಇತ್ತೀಚೆಗೆ ಆಗುತ್ತಿರುವ ವಿಚಾರಗಳು ವೀಡಿಯೋಗಳಾಗಿ ಹೊರಬರುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಒಳಗೆ ಬರೋದಾದ್ರೆ ಮೊಬೈಲ್ ಚೆಕ್ಕಿಂಗ್ ಮಾಡಬೇಕು. ಇದಕ್ಕೆ ಮೊಬೈಲ್ ಫೋನ್ ಗಳ ದುರ್ಭಳಕೆ ಕಾರಣವಾಗಿದೆ.

ಈ ನಿಟ್ಟಿನಲ್ಲಿ ಹಿಜಾಬ್-ಕೇಸರಿ ಶಾಲು ಕದನದ ನಂತರ ಎಚ್ಚೆತ್ತ ಶಿಕ್ಷಣ ಇಲಾಖೆ, ಸ್ಕೂಲ್ ಕಾಲೇಜು ಆವರಣದಲ್ಲಿ ಮೊಬೈಲ್‌ ಬಳಕೆ ಸಂಪೂರ್ಣ ನಿಷೇಧಕ್ಕೆ ಚರ್ಚೆ ನಡೆಸುತ್ತಿದೆ.

ಶಾಲಾ ಕಾಲೇಜು ಆವರಣದಲ್ಲಿ ಮೊಬೈಕ್ ಬಳಕೆ ನಿಷೇಧ ಮಾಡಲು ತಜ್ಞರ ಸಲಹೆ ನೀಡಿದ್ದು, ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. 

ಇನ್ನು ಪರೀಕ್ಷೆ ನಡೆಸುವಾಗ ವಿದ್ಯಾರ್ಥಿಗಳನ್ನು ಹೇಗೆ ತಪಾಸಣೆ ಮಾಡಿ ಒಳ ಬಿಡಲಾಗುತ್ತದೋ ಹಾಗೆ ಮೊಬೈಲ್ ತಪಾಸಣೆ ಮಾಡಿ ಒಳ ಬಿಡುವುದರ ಬಗ್ಗೆ ಕೂಡ ಚರ್ಚೆ ಮಾಡಲಾಗುವುದು ಎಂದು ಮಾಹಿತಿಗಳು ತಿಳಿಸಿವೆ.