Belagavi News In Kannada | News Belgaum

ಶರಣ ಸಂಸ್ಕೃತಿ ಉತ್ಸವವನ್ನ ಸರಳವಾಗಿ ಆಚರಿಸಲಾಗುವುದೆಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ತಿಳಿಸಿದರು.

ಅಥಣಿ: ಮಹಾಶಿವರಾತ್ರಿ ಅಂಗವಾಗಿ ಇಲ್ಲಿಯ ಗಚ್ಚಿನಮಠದಲ್ಲಿ ಜರುಗಲಿರುವ ಶರಣ ಸಂಸ್ಕೃತಿ ಉತ್ಸವವನ್ನ ಸರಳವಾಗಿ ಆಚರಿಸಲಾಗುವುದೆಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ತಿಳಿಸಿದರು.
   ಅವರು ಗಚ್ಚಿನಮಠದ ಸಭಾಂಗಣದಲ್ಲಿ ಮಂಗಳವಾರ ೮ರಂದು ಸಂಜೆ ಜರುಗಿದ ಭಕ್ತಸಮೂಹದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತಾ ಕರೋನಾ ವೈರಸ್ ಹಿನ್ನಲೆಯಲ್ಲಿ ಸರ್ಕಾರದ ನಿಯಮಗಳನ್ನ ಪಾಲಿಸಿಕೊಂಡು ಅತ್ಯಂತ ಸರಳವಾಗಿ ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನ ಆಚರಿಸಲು ನಿರ್ಧರಿಸಲಾಗಿದೆ ಭಕ್ತರು ಸಹಕರಿಸಬೇಕು ಎಂದ ಅವರು  ಈ ಬಾರಿಯ ಶರಣ ಸಂಸ್ಕೃತಿ ಉತ್ಸವ ಮತ್ತು ಮಹಾಶಿವರಾತ್ರಿ ಅಂಗವಾಗಿ ಗಚ್ಚಿನಮಠದಲ್ಲಿ ಪ್ರತಿದಿನ ಸಂಜೆ
“ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಜೀವನ ಚರಿತ್ರೆ” ಪ್ರವಚನವು ಫೆಬ್ರುವರಿ-೧೭ರಿಂದ ೨೭ರವರೆಗೆ ಪ್ರತಿದಿನ ಸಂಜೆ ೬.೩೦ರಿಂದ ೭.೩೦ರವರೆಗೆ ಕೊಪ್ಪಳದ ಸಿದ್ದಲಿಂಗ ದೇವರು ಅವರಿಂದ ಜರುಗಲಿದೆ.
   ಅದೇ ರೀತಿ ಗುರುವಾರ ೨೪ರಂದು ಸಹಸ್ರ ಸಹಸ್ರ ಮುತೈದಿಯರ ಊಡಿ ತುಂಬುವ ಕಾರ್ಯಕ್ರಮ ದಾನಮ್ಮಾದೇವಿಯ ಪಾದಯಾತ್ರಾ ಕಮೀಟಿಯವರ ಸಹಯೋಗದಲ್ಲಿ ನಡೆಯಲಿದೆ.
   ಫೇ.೨೮ರಂದು ಶರಣ ಸಂಸ್ಕೃತಿ ಉತ್ಸವ ಉದ್ಘಾಟನೆ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರಿಂದ ನಂತರ ಮಾರ್ಚ-೧,೨,ರಂದು ಸಹಜ ಶಿವಯೋಗಿ ಇಷ್ಟಲಿಂಗ ಪೂಜಾ ವಿಧಾನದ ಪ್ರಾತ್ಯಕ್ಷಿಕೆ ಹಾಗೂ ಮಹಾಶಿವರಾತ್ರಿಯ ಕಾರ್ಯಕ್ರಮಗಳು,ಸಂಗೀತೋತ್ಸವ,ಚಿAತನಗೋಷ್ಠಿಗಳು ನಡೆಯಲಿವೆ.
   —————————–——————————————
 ಶತಮಾನೋತ್ಸವ ಕಾರ್ಯಕ್ರಮದ ಚಿಂತನೆ: ಧಾರ್ಮಿಕ ಲೋಕಕ್ಕೆ ಹೊಸ ಚೈತನ್ಯ ನೀಡಿದ ಮಹಾಗುರು ಶ್ರೀ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾಗಿ ೧೦೦ವರ್ಷಗಳು ಸಂದ ಈ ಸಮಯದಲ್ಲಿ ಅವರ ಶತಮಾನೋತ್ಸವ ಕಾರ್ಯಕ್ರಮವನ್ನ ಅತ್ಯಂತ ಸಂಭ್ರಮ,ಸಡಗರ ಮತ್ತು ವಿದಾಯಕವಾಗಿ ಮಾಡುವ ನಿಟ್ಟಿನಲ್ಲಿ ಬರುವ ಏಪ್ರೀಲ್-ಮೇ ತಿಂಗಳಲ್ಲಿ ನೆರವೆರಿಸಲಾಗುವುದು.
  ಈ ವೇಳೆ ಮಾತನಾಡಿದ ಹಿರಿಯರಾದ ಡಾ.ಎಮ್.ಜಿ.ಹಂಜಿ ಹೊಸತನಕ್ಕೆ ನಾಂದಿ ಹಾಡಿದ ಶಿವಬಸವ ಸ್ವಾಮೀಜಿಯವರ ಸೇವಾಕಾರ್ಯ ಸ್ಮರಣಿಯವಾಗಿದೆ ಶತಮಾನೋತ್ಸವ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ತಿಳಿಸಿದರು.
  ಹಿರಿಯರಾದ ಪ್ರಕಾಶ ಮಹಾಜನ,ಶಿವಪುತ್ರ ಯಾದವಾಡ,ಎಮ್.ಜಿ.ಕನಶೆಟ್ಟಿ,ಎಮ್.ಡಿ.ತೊದಲಬಾಗಿ,ಕೆ.ಎ.ವನಜೋಳ,ಎ.ಎಮ.ಖೊಬ್ರಿ,ಚಂದ್ರಶೇಖರ ಯಲ್ಲಟ್ಟಿ,ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ ೨೫ಸಾವಿರಕ್ಕೂ ಅಧಿಕ ಮಹಿಳೆಯರ ಕುಂಬಮೇಳದೊAದಿಗೆ ಶತಮಾನೋತ್ಸವದ ಚಾಲನೆ ಆಗಬೇಕು ಅದರಂತೆ ನಾಡಿನ ದಾರ್ಶನಿಕರನ್ನ ಕರೆಯಿಸಿ ಚಿಂತನೆ ನಡೆಸಬೇಕು ಎಂದರು.
  ಪತ್ರಕರ್ತ ರಾಜು ಗಾಲಿ,ಪುರಸಭೆ ಸದಸ್ಯ ಸಂತೋಷ ಸಾವಡಕರ ಮಾತನಾಡಿ ತಾಲೂಕಿನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಶಿವಯೋಗಿಗಳ ಜೀವನ ಚರಿತ್ರೆ ಓದಬೇಕು ಅವರಿಗಾಗಿ ವಿಶೇಷ ಭಾಷಣ,ಪ್ರಬಂಧ,ಕಾವ್ಯಗಾಯನ,ಚಿತ್ರಕಲೆ,ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಬೇಕು ಮತ್ತು ಶತಮಾನೋತ್ಸವ ನೆನಪಿಗಾಗಿ ಗಚ್ಚಿನಮಠದಲ್ಲಿ ಬಹುಮುಖ್ಯವಾಗಿ ಗ್ರಂಥಾಲಯ ಸ್ಥಾಪನೆಯಾಗಬೇಕು ಮತ್ತು ಅಥಣಿ ಪ್ರಮುಖ ಹೆದ್ದಾರಿಗಳಲ್ಲಿ ಪುರ ಪ್ರವೇಶಗಳಲ್ಲಿ ಸ್ವಾಗತ ಕಮಾನ(ದ್ವಾರಬಾಗಿಲು) ನಿರ್ಮಿಸುವಂತೆ ಸಲಹೆ ನೀಡಿದರು.
  ಪುರಸಭೆ ಮುಖ್ಯಾಧಿಕಾರಿ ಈರಣಾ ದಡ್ಡಿ ಮಾತನಾಡಿ ಈಗಾಗಲೆ ಪುರಸಭೆಯ ಸಭೆಯಲ್ಲಿ ಎಲ್ಲ ಸದಸ್ಯರು ಒಮ್ಮತದಿಂದ ಸ್ವಾಗತ ಕಮಾನ ನಿರ್ಮಿಸಲು ಸೂಚಿಸಿದ್ದಾರೆ ಅದರಂತೆ ಕ್ರಮ ಕೈಗೊಳ್ಳಲಾಗುವುದು ಮತ್ತು ಪಟ್ಟಣದ ಎಲ್ಲ ರೀತಿಯ ಸ್ವಚ್ಚತೆಗೆ ಆದ್ಯತೆ ನೀಡಲಾಗುವದೆಂದರು.
   ಕಳೇದ ವರ್ಷದ ಶರಣ ಸಂಸ್ಕೃತಿ ಉತ್ಸವದ ಖರ್ಚು ವೆಚ್ಚಿನ ಆಯ್ಯವ್ಯಯವನ್ನ ಶಿವಾನಂದ ದಿವಾನಮಳ ಮಂಡಿಸಿದರು. ಈ ವೇಳೆ ಈರಣಗೌಡ ಪಾಟೀಲ ಡಾ.ರಮೆಶ ಗುಳ್ಳ,ಡಾ.ರವಿ ಚೌಗಲಾ ಪುರಸಭಾ ಸದಸ್ಯರಾದ ಪ್ರಮೋದ ಬಿಳ್ಳೂರ,ಮಲ್ಲಿಕಾರ್ಜುನ ಬುಟಾಳೆ,ಸಚಿನ ಗಡದೆ ಸೇರಿದಂತೆ ದಾನಮ್ಮಾದೇವಿ ಪಾದಯಾತ್ರಾ ಕಮಿಟಿ ಸದಸ್ಯರು,ಮುರುಘಾ ಶ್ರೀ ಯುವವೇದಿಕೆ,ಆದಿ ಬಣಜಿಗ ಯುವ ವೇದಿಕೆ ಸದಸ್ಯರು ಪಾಲ್ಗೋಂಡಿದ್ದರು.