Belagavi News In Kannada | News Belgaum

ಭಾರತ ವ್ಯಾಪಿಯಾಗಿ ಉಜ್ಜೀವನ್ Sಈಃ 60,000 ಲಸಿಕೆಗಳ ಸಾಧನೆ

ಮಾಡಿದೆ ಹಾಗೂ ಬೆಳಗಾವಿಯ ಒಳಪ್ರದೇಶದ ಗ್ರಾಮೀಣ ಸಮುದಾಯಗಳಲ್ಲಿ ಯಶಸ್ವಿಯಾಗಿ ಶಿಬಿರಗಳನ್ನು ಆಯೋಜಿಸಿದೆ

ಬೆಳಗಾವಿ, ಫೆಬ್ರವರಿ 12,2022: ಕರ್ನಾಟಕದ ಬೆಳಗಾವಿ ನಗರದಲ್ಲಿ ಸುಮಾರು 231 ಫಲಾನುಭವಿಗಳಿಗೆ ಲಸಿಕೆ ನೀಡಿರುವುದಾಗಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇಂದು ಪ್ರಕಟಿಸಿತು.

ರಾಜ್ಯದ ಬಹುತೇಕ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲದೆ ಬೆಳಗಾವಿ ನಗರದಲ್ಲಿ ಉಜ್ಜೀವನ್ ಲಸಿಕೆ ಶಿಬಿರಗಳನ್ನು ಆಯೋಜಿಸಿದೆ ಹಾಗೂ ಕರ್ನಾಟಕದಲ್ಲಿ 7488 ವ್ಯಕ್ತಿಗಳಿಗೆ ಲಸಿಕೆ ನೀಡಿದೆ.

ಫಲಾನುಭವಿಗಳಲ್ಲಿ ಒಬ್ಬರಾದ ಶ್ರೀಮತಿ ಗೀತಾ, ಎರಡನೆ ಡೋಸ್ ತೆಗೆದುಕೊಂಡು, ಉಜ್ಜೀವನ್ ನ ಪ್ರಯತ್ನಗಳನ್ನು ಶ್ಲಾಘಿಸಿ ಹೇಳಿದರು, “ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೈಗೊಂಡ ಲಸಿಕೆ ಅಭಿಯಾನ ನಮ್ಮ ಪ್ರದೇಶದ ಜನರಿಗೆ ಬಹಳ ಸಹಾಯಕವಾಗಿದೆ. ಮಹಿಳೆಯರು ಹಾಗೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಾವು ಯಾವುದೇ ತೊಂದರೆಗಳಿಲ್ಲದೆ ಲಸಿಕೆ ಹಾಕಿಸಿಕೊಂಡೆವು. ಈ ಅಭಿಯಾನ ನಮಗೆ ಬಹಳ ಸಹಕಾರಿಯಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಹೆಚ್ಚು ಜನ ಸ್ನೇಹಿ ಕಾರ್ಯಕ್ರಮಗಳನ್ನು ಬ್ಯಾಂಕ್ ಹಮ್ಮಿಕೊಳ್ಳುತ್ತದೆ ಎಂದು ಆಶಿಸುತ್ತೇವೆ. ಉಜ್ಜೀವನ್ ಬ್ಯಾಂಕ್‍ಗೆ ಹಾಗೂ ಅದರ ಸಿಬ್ಬಂದಿ ವರ್ಗದವರಿಗೆ ನಾವು ಕೃತಜ್ಞರಾಗಿದ್ದೇವೆ.

ಲಸಿಕೆ ಶಿಬಿರದ ಯಶಸ್ಸಿಗೆ ತನ್ನ ಸ್ವಂತ ಉದ್ಯೋಗಿಗಳು ಕಾರಣ ಎಂದಿದೆ ಉಜ್ಜೀವನ್. ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸಿ ಜಾಗೃತಿ ಮೂಡಿಸುವಲ್ಲಿ ಅದರ ಉದ್ಯೋಗಿಗಳ ಪಾತ್ರ ಹಿರಿದು ಮತ್ತು ಬೆಳಗಾವಿ ನಗರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅನೇಕ ವ್ಯಕ್ತಿಗಳನ್ನು ಉತ್ತೇಜಿಸಿದೆ ಅದರ ಸಿಬ್ಬಂದಿವರ್ಗ.

ದೇಶಾದ್ಯಂತ ಹರಡಿರುವ ಸಾರ್ವತ್ರಿಕ ಕೋವಿಡ್ ವೈರಾಣುವನ್ನು ನಿರ್ಮೂಲನ ಮಾಡಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಪ್ರಧಾನ ಮಂತ್ರಿ ಆರೈಕೆ ನಿಧಿಗೆ ರೂ. 10,00,000 ದೇಣಿಗೆ ನೀಡಿದೆ ಉಜ್ಜೀವನ್.