Belagavi News In Kannada | News Belgaum

“ನಾನು ನನ್ನ ತಮ್ಮನಿಗಾಗಿ ಜೀವ ಬೇಕಾದ್ರೂ ಕೊಡ್ತೀನಿ” : ಪ್ರಿಯಾಂಕಾ ಗಾಂಧಿ

ನವದೆಹಲಿ : ‘ನಾನು ನನ್ನ ಸಹೋದರನಿಗಾಗಿ ನನ್ನ ಪ್ರಾಣವನ್ನ ಬೇಕಾದ್ರೂ ನೀಡ್ತೇನೆ ಮತ್ತು ಅವ್ರು ಅಷ್ಟೇ ನನಗಾಗಿ ತಮ್ಮ ಪ್ರಾಣವನ್ನ ನೀಡಬಲ್ಲರು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಡಹುಟ್ಟಿದವರ ನಡುವೆ ಸಂಘರ್ಷವಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆಯಾಗಿ ‘ಸಂಘರ್ಷ ಎಲ್ಲಿದೆ’ ಎಂದರು.

ಇನ್ನು ಮುಗುಳ್ನಗುತ್ತಾ, ‘ಸಂಘರ್ಷವು ಯೋಗಿ ಜೀ ಅವರ ಮನಸ್ಸಿನಲ್ಲಿದೆ. ಬಿಜೆಪಿಯಲ್ಲಿನ ಬಿರುಕಿನಿಂದಾಗಿ ಅವ್ರು ಇದನ್ನ ಹೇಳುತ್ತಿದ್ದಾರೆ ಎಂದು ತೋರುತ್ತದೆ ಎಂದಿದ್ದಾರೆ. ಅಂದ್ಹಾಗೆ, ಉತ್ತರ ಪ್ರದೇಶದ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯವಾಗಿ ಮಹತ್ವದ ರಾಜ್ಯದಲ್ಲಿ ಪಕ್ಷದ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ./////