Belagavi News In Kannada | News Belgaum

ವಿದ್ಯುತ ಬೆಲೆ ಏರಿಕೆಗೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು:  2019 ರಲ್ಲಿ ಪ್ರತಿ ಯೂನಿಟ್‌ ಗೆ 13  ಪೈಸೆ  ಏರಿಕೆ ಮಾಡಲು ಸರ್ಕಾರ  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಕೆಸಿದ್ದು,  ಗ್ರಾಹಕರಿಗೆ ಶೀಘ್ರದಲ್ಲೆ ವಿದ್ಯುತ ಶಾಕ್‌ ಎದುರಾಗಲಿದೆ.

ರಾಜ್ಯದ ಜನತೆಗೆ ವಿದ್ಯುತ್‌ ದರ ಏರಿಕೆಯಾಗುವ ಸಾಧ್ಯತೆಗಳಿವೆ.  ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬೀಳುವಂತಾಗಿದೆ. ವಿದ್ಯುತ್‌ ದರ ಏರಿಕೆ ಬಗ್ಗೆ ಎಸ್ಕಾಂ ಗಳಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಪ್ರತಿ ಯೂನಿಟ್‌ ಗೈ 1.5 ರೂ. ಏರಿಕೆಯಾಗುವ ಸಾಧ್ಯತೆ ಇದೆ.

ನಾಳೆಯಿಂದ 3 ದಿನ ದರ ಪರಿಷ್ಕರಣೆ ಪರಿಶೀಲನಾ ಕಾರ್ಯ ನಡೆಯಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ದರ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷವೂ ದರ ಪರಿಷ್ಕರಣೆಗೆ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಆದರೆ ಬೇಡಿಕೆ ಇಟ್ಟ 1.39ರೂ.ನಲ್ಲಿ ಕೇವಲ 30 ಪೈಸೆ ಏರಿಕೆ ಮಾಡಲಾಗಿತ್ತು./////