Belagavi News In Kannada | News Belgaum

ತಲೆ ಕೆಟ್ಟ ಈಶ್ವರಪ್ಪ ಎಂದ ಡಿಕೆಶಿ

ಗದಗ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜಕೀಯ ನಾಯಕರ ವಾಕ್ಸಮರಕ್ಕೆ ವೇದಿಕೆಯಾಗಿದ್ದು, ಇದೀಗ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಗದಗದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾವನೋ ಈಶ್ವರಪ್ಪ ಅಂತೆ, ತಲೆಕೆಟ್ಟ ಈಶ್ವರಪ್ಪ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಸಂದರ್ಭವೂ ಬರುತ್ತೆ ಎಂದು ಹೇಳುತ್ತಿದ್ದಾನೆ. ಸಚಿವರಾಗಿ, ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಏನಂತ ಪ್ರಮಾಣ ಮಾಡಿದೆವು ಎಂಬ ಪರಿಜ್ಞಾನವೂ ಇಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧವೂ ಕಿಡಿಕಾರಿದ ಡಿ.ಕೆ. ಶಿವಕುಮಾರ್, ಆ ಬೊಮ್ಮಾಯಿ ಗವರ್ನರ್ ಇಟ್ಕೊಂಡು ಕೂತವ್ರೆ. ಕಾಂಗ್ರೆಸ್ ಸರ್ಕಾರ ಇದ್ದಿದ್ರೆ 10 ನಿಮಿಷದಲ್ಲಿ ಅವನ ರಾಜೀನಾಮೆ ಪಡೆಯುತ್ತಿದ್ವಿ. ಆದರೆ ಸಿಎಂ ಬೊಮ್ಮಾಯಿ ಒಂದು ಮಾತನ್ನು ಆಡುತ್ತಿಲ್ಲ, ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪೊಲೀಸ್ ಇಲಾಖೆ ವಿರುದ್ಧವೂ ವಾಗ್ದಾಳಿ ನಡೆಸಿದ ಡಿಕೆಶಿ, ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಹೊರತು ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿಲ್ಲ. ದೊಡ್ಡ ಅಧಿಕಾರಿಯೇ ಇರಲಿ, ಸಣ್ಣವರೇ ಇರಲಿ ಎಲ್ಲರ ವರ್ತನೆ ಗಮನಿಸುತ್ತಿದ್ದೇನೆ ಎಂದು ಹೇಳಿದರು./////