Belagavi News In Kannada | News Belgaum

ಕೃಷ್ಣಾನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಚಿಕ್ಕೋಡಿ : ಅನುಮಾನ್ಪದವಾಗಿ ಅಪರಿಚಿತ ಮಹಿಳೆಯೋರ್ವಳ ಶವ ತಾಲೂಕಿನ ಯಡೂರಿನ ಕೃಷ್ಣಾನದಿಯಲ್ಲಿ ಪತ್ತಯಾಗಿದೆ.

ಮಹಿಳೆಯು ತನ್ನ ಬ್ಯಾಗ ಹಾಗೂ ಚಪ್ಪಲಿಯನ್ನು ನದಿಯ ದಡದಲ್ಲಿ ಬಿಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.  ಆತ್ಮಹತ್ಯೆಯನ್ನು ಮಾಡಿಕೊಂಡ ಮಹಿಳೆಯು ನಿನ್ನೆ ರಾತ್ರಿ ೮ ಗಂಟೆಯವರೆಗೆ ನದಿಯ ದಡದಲ್ಲಿ ಕುಳಿತುಕೊಂಡಿದ್ದಳು ಎಂದು  ಸ್ಥಳೀಯರು ನೀಡಿದ್ದಾರೆ. ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.//////