ವ್ಯಕ್ತಿ ನಾಪತ್ತೆ

ಬೆಳಗಾವಿ,ಫೆ.19: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ 32 ವರ್ಷದ ವ್ಯಕ್ತಿ ಬಸಯ್ಯ ಸಿದ್ರಾಮಯ್ಯ ಮಠದÀ ನಾಪತ್ತೆಯಾಗಿದ್ದಾರೆ. ಕಳೆದ 2021ರ ಡಿಸೆಂಬರ್ 21 ರಂದು ಮುಂಜಾನೆ 11 ಗಂಟೆ ಸುಮಾರಿಗೆ ಗೋಕಾಕಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದ ಬಸಯ್ಯ ನಾಪತ್ತೆ ಯಾಗಿದ್ದಾರೆ ಎಂದು ಈತನ ಪತ್ನಿ ಮಲ್ಲಮ್ಮ ಬಸಯ್ಯ ಮಠದ ಅವರು ಕುಲಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆ ವ್ಯಕ್ತಿಯ ಚಹರೆ:
32 ವರ್ಷ, 5 ಅಡಿ 2 ಇಂಚು ಎತ್ತರ, ದುಂಡು ಮುಖ, ಉದ್ದ ಮೂಗು, ಸಾದಾಗಪ್ಪು ಮೈ ಬಣ್ಣ, ಸದೃಢ ಮೈಕಟ್ಟು, ಬಿಳಿ ಬಣ್ಣದ ಫುಲ್ ತೋಳಿನ ಶರ್ಟ್ ಚಾಕ್ಲೇಟ್ ಬಣ್ಣದ ಪ್ಯಾಂಟ್, ಖಾಕಿ ಬಣ್ಣದ ಜಾಕೇಟ್ ಚೂಡಿದಾರ ಧರಿಸಿದ್ದು ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ.
ವ್ತಕ್ತಿಯ ಸುಳಿವು ಸಿಕ್ಕವರು ತಕ್ಷಣವೇ ಕುಲಗೋಡು ಪೊಲೀಸ್ ಠಾಣೆಯ ದೂರವಾಣಿ ಸಂಪರ್ಕ ಸಂಖ್ಯೆ 08334-222233, ಅಥವ ಮೊಬೈಲ್ ಸಂಖ್ಯೆ 9480804069ಯನ್ನು ಸಂಪರ್ಕಿಸಬಹುದು ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///